ಮದ್ದೂರು ತಾಲೂಕಿನ ತಮಿಳು ಕಾಲೊನಿಯ ಹೊಸ ಜಾಗದ ವಿಚಾರವಾಗಿ 12 ಲಕ್ಷ ರೂ. ಮಂಜೂರಾತಿ ಸೇರಿದಂತೆ ಪರಿಚಯ ಪತ್ರ ನೀಡಲು ಸಭೆಯಲ್ಲಿ ನಡವಳಿ ಅಗಿರುವುದನ್ನು ತುರ್ತು ಸಹಿ ಮಾಡಿ ಕಳಿಸಿ ಕೊಡಲು ಬೆಂಗಳೂರಿನ ಕೊಳಗೇರಿ ಅಬಿವೃದ್ದಿ ಮಂಡಳಿ ಆಯುಕ್ತರು ಭರವಸೆ ನೀಡಿದ್ದಾರೆ.
ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ ಹಾಗೂ ಭೂಮಿ ವಸತಿ ಹಕ್ಕು ವಂಚಿತ ಹೋರಾಟ ಸಮಿತಿಯಿಂದ ಬೆಂಗಳೂರಿನ ಕೊಳಗೇರಿ ಅಬಿವೃದ್ದಿ ಮಂಡಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.
“ಇಂದೇ ಸಹಿ ಮಾಡಿಸಿ ಕಳಿಸಿ ಕೊಡಲಾಗುವುದು ಹಾಗೂ 12ಲಕ್ಷ ಅನುಮೊದನೆಯಾಗಿದೆ. ಅದ್ಯಕ್ಷರ ಸಹಿ ಹಾಕುವುದು ಬಾಕಿ ಇದೆ. ಸೋಮವಾರ ಅಥವಾ ಮಂಗಳವಾರದೊಳಗೆ ಕಳುಹಿಸಿ ಕೊಡುತ್ತೇನೆ” ಎಂದು ತಿಳಿಸಿದರು.

ಸ್ಲಂ ಬೋರ್ಡ್ ಅದ್ಯಕ್ಷರು ಸಿಗದ ಕಾರಣ ಅವರಿಗೆ ಒಂದು ಮನವಿ ಪತ್ರ ಕೊಟ್ಟು ಮತ್ತೆ ತಾಂತ್ರಿಕ ನಿರ್ದೇಶಕರ ಬಳಿ ಮಾತಾಡಲಾಗಿದೆ. ಅವರ ಟೇಬಲ್‌ನಲ್ಲಿದ್ದ ಅನುಮೋದನೆಯ ಬಗ್ಗೆ ಮಾಹಿತಿ ಕೇಳಲು ಅದ್ಯಕ್ಷರು ಕಳಿಸಿರುವ ಫೈಲನ್ನು ಸ್ಥಳದಲ್ಲೇ ಅಯುಕ್ತರಿಗೆ ಕಳಿಸಿಕೊಟ್ಟರು. 17ರಂದು ನಡೆಯಲಿರುವ ಶ್ರಮಿಕ ಜನರ ಹಕ್ಕೊತ್ತಾಯ ಸಮಾವೇಶಕ್ಕೆ ಅಯುಕ್ತರು ಬರಲು ಒಪ್ಪಿಕೊಂಡರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ತ್ಯಾಗ ಬಲಿದಾನದ ಸಂಕೇತ ಬಕ್ರೀದ್; ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ.
ಮದ್ದೂರಿನ ಭೂ ವ ಹ ವಂ ಹೋ ಸಮಿತಿ ಮುಖಂಡ ಸಿದ್ದರಾಜು, ಪ್ರಕಾಶ್, ಶಾಂತ, ಪೊನ್ನುಸ್ವಾಮಿ, ಲತಾ, ಸೆಲ್ವಿ ಮಣಿ ಸೇರಿದಂತೆ ಇತರರು ಇದ್ದರು.





