ಭಾರತ ದೇಶದಲ್ಲಿ ಕೋಟ್ಯಂತರ ಶೋಷಿತ ವರ್ಗಗಳಿಗೆ ನ್ಯಾಯ ಸಿಗುವಂತಹ ಸಂವಿಧಾನವನ್ನು ರಚನೆ ಮಾಡಿ ಸರ್ವರಿಗೂ ಸಮಾನತೆಯ ಹಕ್ಕುಗಳನ್ನು ನೀಡುವಲ್ಲಿ ಶ್ರಮಿಸಿದ ಮಹಾ ಮಾನವತಾವಾದಿ ನಾಯಕರು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಎಂದು ಪಿಎಸ್ಐ ಚಂದ್ರಶೇಖರ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ಬಳಿ ಆದಿಜಾಂಭವ ಮಹಾಸಭಾ,ದಲಿತ ಸಾಹಿತ್ಯ ಪರಿಷತ್ತು ಹಾಗೂ ಜೀವಿಕ ಸಂಘಟನೆ,ದಲಿತಪರ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮಹಾಪರಿನಿರ್ವಾಣದ ಅಂಗವಾಗಿ ಕ್ಯಾಂಡಲ್ ಮಾರ್ಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಶೋಷಣೆಯ ವಿರುದ್ಧ ಹೋರಾಟಮಾಡಿ ಕಾನೂನಿನ ಮೂಲಕ ಸಂವಿಧಾನದಲ್ಲಿ ಅಳವಡಿಸಿ ಶೋಷಿತರ ಏಳ್ಗೆಗಾಗಿ ಅನೇಕ ಕಾನೂನುಗಳನ್ನು ಜಾರಿ ಮಾಡಿ ನೊಂದವರ ಕಣ್ಣೀರು ಒರೆಸಿದ ಪುಣ್ಯಾತ್ಮ ಅಂಬೇಡ್ಕರ್ ಎಂದರೆ ತಪ್ಪಾಗಲಾರದು ಇಂದು ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂವಿಧಾನ ಶಿಲ್ಪಿಗೆ ಕ್ಯಾಂಡಲ್ ಹಚ್ಚುತ್ತಿದ್ದಿರಾ ಎಂದರೆ ಅ ಶಕ್ತಿಗೆ ಕಾರಣರೆ ಬಾಬಾ ಸಾಹೇಬರು ಯಾಕೆಂದರೆ ಮಹಿಳೆಯರಿಗೆ ಯಾರು ನೀಡದಂತಹ ಅನೇಕ ಸೌಲಭ್ಯಗಳನ್ನು ಒದಗಿಸಿ ಸ್ವಾತಂತ್ರ್ಯ ,ಸಮಾನತೆ ಹಕ್ಕುಗಳನ್ನು ನೀಡಿ ಮಹಿಳೆಯರು ಇಂದು ಸ್ವಾಭಿಮಾನಿಗಳಾಗಿ ಬದುಕಲು ಸಂವಿಧಾನವೇ ಕಾರಣ ಇಂತಹ ಮಹಾನ್ ನಾಯಕರನ್ನು ನಾವ್ಯಾರು ಮರೆಯಬಾರದು ಅವರನ್ನು ಪ್ರತಿದಿನ ಸ್ಮರಿಸಬೇಕು ಎಂದರು.
ತಹಶೀಲ್ದಾರ್ ವೈ .ರವಿ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮಹಾಪರಿನಿರ್ವಾಣದ ದಿನ ಅವರನ್ನು ನೆನೆಯುತ್ತಾ ದೀಪಗಳನ್ನು ಹಚ್ಚಿ ಅವರಿಗೆ ಗೌರವಾರ್ಪಣೆ ಸಲ್ಲಿಸುತ್ತಿರುವುದು ಶ್ಲಾಘನೀಯ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತು ಸಿಗಲು ಕಾನೂನು ರೂಪಿಸಿದರು ಸಂವಿಧಾನದಲ್ಲಿ ಬರೀ ದಲಿತರಿಗೆ ಅಲ್ಲ ಸರ್ವ ಜನಾಂಗದವರಿಗೂ ಸಾಮಾಜಿಕ,ಅರ್ಥಿಕ,ಶೈಕ್ಷಣಿಕವಾಗಿ ನ್ಯಾಯ ಸಿಗುವಂತೆ ಮಾಡಿ ಸಮಾನತೆಯನ್ನು ತಂದು ದೇಶದಲ್ಲಿ ಎಲ್ಲರೂ ನೆಮ್ಮದಿಯಾಗಿ ಬದುಕು ಕಟ್ಟಿಕೊಳ್ಳಲು ಶ್ರಮಿಸಿದ ಏಕೈಕ ನಾಯಕರೆಂದರೆ ಅಂಬೇಡ್ಕರ್ ರವರು ನಾವೆಲ್ಲರೂ ಸಂವಿಧಾನವನ್ನು ಗೌರವಿಸುವ ಜೊತೆಗೆ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದು ಅವರಿಗೆ ಋಣಿಗಳಾಗಿರೋಣ ಎಂದರು.
ಆದಿಜಾಂಬವ ಮಹಾಸಭಾ ಹಾಗೂ ದ ಸಾ ಪ ಅಧ್ಯಕ್ಷ ಮಹರಾಜು ಮಾತನಾಡಿ ಕಳೆದ 13 ವರ್ಷಗಳಿಂದ ಮಹಾಪರಿನಿರ್ವಾಣದ ದಿನದಂದು ಕ್ಯಾಂಡಲ್ ಮಾರ್ಚ್ ಕಾರ್ಯಕ್ರಮವನ್ನು ಜೀವಿಕಾ ಹಾಗೂ ವಿವಿಧ ದಲಿತ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ನಡೆಸುತ್ತಾ ಬಂದಿದ್ದು ನಮ್ಮ ಜ್ಞಾನದ ಬೆಳಕು ಶೋಷಿತರ ಸೂರ್ಯ ಸರ್ವ ಜನಾಂಗದವರಿಗೂ ಬೆಳಕು ನೀಡಿದ ಬಾಬಾ ಸಾಹೇಬರು ಮರೆಯಾಗಿದ್ದಾರೆ ಎಂದುಕೊಳ್ಳಬಾರದು ನಮ್ಮ ದೇಶದ ಪ್ರತಿ ಕಾನೂನಿನಲ್ಲಿ,ವಿವಿಧ ಪುಸ್ತಕಗಳಲ್ಲಿ ಅಂಬೇಡ್ಕರ್ ಜೀವಿಸುತ್ತಿದ್ದಾರೆ ಶಿಕ್ಷಣದ ವಿಚಾರದಲ್ಲಿ ಅವರು ತಂದ ಕ್ರಾಂತಿಕಾರಿ ಬದಲಾವಣೆಗಳೆ ಇಂದು ಎಲ್ಲಾ ಜನಾಂಗದವರು ಶಿಕ್ಷಣ ಕಲಿಯಲು ಸಾಧ್ಯವಾಯಿತು ಕಟ್ಟುಪಾಡುಗಳಲ್ಲಿ ಸಿಲುಕಿದ್ದ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಭಾರತದ ಏಕೈಕ ನಾಯಕರೆಂದರೆ ಅಂಬೇಡ್ಕರ್ ಹೀಗೆ ಅವರು ತಾವು ರಚಿಸಿದ ಸಂವಿಧಾನದಲ್ಲಿ ಸರ್ವ ಜನಾಂಗಕ್ಕೂ ಧರ್ಮಾತೀತ,ಜಾತ್ಯಾತೀತವಾದ ಸಮಾನತೆಯ ನ್ಯಾಯಕೊಟ್ಟ ಕಾರಣವೇ ಅವರು ಸಂವಿಧಾನ ಪಿತಾಮಹರೆಂದು ಅಜರಾಮರರಾಗಿ ವಿಶ್ವಜ್ಞಾನಿಯೆಂದು ಖ್ಯಾತರಾದರು ಅಂಬೇಡ್ಕರ್ ಸಾಹೇಬರನ್ನು ಮರೆತರೆ ಅದು ನಮಗೆ ನಾವೇ ದ್ರೋಹ ಮಾಡಿಕೊಂಡಂತೆ ಎಂದರು.
ಜೀವಿಕಾ ಸಂಘಟನೆಯ ಮುಖಂಡ ಡಿ.ಟಿ.ಸಂಜೀವ್ ಮೂರ್ತಿ ಮಾತನಾಡಿ ಸಂವಿಧಾನಕ್ಕಿಂತ ಶ್ರೇಷ್ಠ ಗ್ರಂಥ ಬೇರೊಂದಿಲ್ಲ ಮನುವಾದಿಗಳ ಕೈಗಳಲ್ಲಿ ಸಿಲುಕಿ ನೊಂದು ಬೆಂದಿದ್ದ ಶೋಷಿತರಿಗೆ ಸಂವಿಧಾನ ರಚಿಸಿ ಅದರ ಮೂಲಕ ಸರ್ವ ಹಕ್ಕುಗಳನ್ನು ನೀಡಿ ನೆಮ್ಮದಿಯಾಗಿ ಉಸಿರಾಡುವಂತೆ ಮಾಡಿದರು ಡಾ.ಅಂಬೇಡ್ಕರ್ ಇವರ ಪರಿನಿರ್ವಾಣದ ನೆನಪಿಗಾಗಿ ನಾವು ಹಚ್ಚುವ ದೀಪದ ಬೆಳಕು ಪ್ರತಿ ಮನೆಗಳಲ್ಲೂ ಬೆಳಗಬೇಕು ಪ್ರತಿಯೊಬ್ಬರೂ ಅವರ ಮನೆಗಳಲ್ಲಿ ದೀಪ ಹಚ್ಚುವ ಮೂಲಕ ಬಾಬಾ ಸಾಹೇಬರ ಋಣ ತೀರಿಸುವ ಕೆಲಸವಾಗಬೇಕಿದೆ ಯಾಕೆಂದರೆ ಕೇವಲ ಎಸ್.ಸಿ/ಎಸ್.ಟಿ ಜಾತಿಗಳಿಗೆ ನ್ಯಾಯಕೊಟ್ಟಿಲ್ಲ ದೇಶದ ಎಲ್ಲಾ ಜನಾಂಗದವರಿಗೂ ನ್ಯಾಯ ಒದಗಿಸಿದ್ದಾರೆ ಇಂತಹ ಮಹಾತ್ಮನನ್ಮು ಪ್ರತಿ ಮನೆಗಳಲ್ಲಿ ಪೂಜಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ವೃತ್ತದ ಸುತ್ತಲೂ ಮಾನವ ಸರಪಳಿ ನಿರ್ಮಿಸಿ ಮೇಣದ ಬತ್ತಿಗಳನ್ನು ಹಚ್ಚಿ ಅಂಬೇಡ್ಕರ್ ಗೀತೆಗಳನ್ನು ಹಾಡಿ ನಂತರ ಪ್ರತಿಮೆಯ ಮುಂದೆ ದೀಪಗಳನ್ನು ಬೆಳಗಿಸಿ ಕ್ಯಾಂಡಲ್ ಮಾರ್ಚ್ ಕಾರ್ಯಕ್ರಮದ ಮೂಲಕ ಮಹಾಪರಿನಿರ್ವಾಣದ ದಿನಕ್ಕೆ ಗೌರವ ಸಮರ್ಪಿಸಿಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಖಜಾಂಚಿ ನಟರಾಜು, ಕಾರ್ಯದರ್ಶಿ ಮಂಜುನಾಥ್, ಲೆಕ್ಕಾದಿಕಾರಿ ರಾಘವೇಂದ್ರ, ದ.ಸಾ.ಪ ಕಾರ್ಯದರ್ಶಿ ರಾಜು ದಾಸರಹಳ್ಳಿ, ಉಪಾಧ್ಯಕ್ಷ ಹನುರಾಜ್, ಜೀವಿಕಾ ಮಂಜು, ಎಸ್.ಸಂಜೀವಯ್ಯ, ಕೋಟೆಕಲ್ಲಪ್ಪ, ಸಂದೀಪ್ ಸಂಜೀವ್ ಮೂರ್ತಿ, ಮಹೇಶ್,ಮನೋಜ್, ನಿಲಯಪಾಲಕರಾದ ಗೋವಿಂದ ರಾಜು,ಮಾಧವಿ, ನಿವೇದಿತಾ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.





