ಮಧುಗಿರಿ ತಾಲೂಕಿನ ಸುದ್ದೇಕುಂಟೆ ಗ್ರಾಮದ ಸ.ಹಿ.ಪ್ರಾ.ಬಾಲಕಿಯರ ಶಾಲೆ ಕೆ.ಆರ್.ಬಡಾವಣೆಯಲ್ಲಿ ಮುಖ್ಯ ಶಿಕ್ಷಕಿ, ಸಾಹಿತಿ ಹಾಗೂ ಕಾದಂಬರಿಗಾರ್ತಿ ವಿಜಯಾ ಮೋಹನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ 2.30 ಗಂಟೆಗೆ ಸರಿಯಾಗಿ ಮಧುಗಿರಿಯ ಕನ್ನಡ ಭವನದ ಮುಂಭಾಗದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಭಾವಪೂರ್ಣ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿದೆ.ಆದ್ದರಿಂದ ತಾಲ್ಲೂಕಿನ ಎಲ್ಲಾ ಸಾಹಿತ್ಯ ಬಳಗದವರು ಹಾಗೂ ಶಿಕ್ಷಕ ವೃಂದದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಸಾಪ ಅಧ್ಯಕ್ಷರಾದ ಸಹನಾ ನಾಗೇಶ್,ಎಂ ಎಸ್ ಶಂಕರನಾರಾಯಣ, ರಂಗಧಾಮಯ್ಯ, ಡಿ ಎಸ್. ಮುನೀಂದ್ರಕುಮಾರ್ ಮನವಿ ಮಾಡಿದ್ದಾರೆ.




