ಮಡಿಕೇರಿ | ʼಬಡವರಿಗೆ ಭೂಮಿ, ನಿವೇಶನʼಕ್ಕಾಗಿ ಆಗ್ರಹ; ಜ.17ರಂದು ಬೃಹತ್ ಪ್ರತಿಭಟನೆ

Date:

ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ʼಬಡವರಿಗೆ ಭೂಮಿ, ನಿವೇಶನʼ ನೀಡುವಂತೆ ಆಗ್ರಹಿಸಿ ಭೂ ಗುತ್ತಿಗೆ ಹೋರಾಟ ಸಮಿತಿಯಿಂದ ಜನವರಿ 17ರಂದು ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಯಲ್ಲಿದ್ದು, ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಆಯೋಜಿಸಲಾಗಿದೆ ಎಂದು ಸಂಘಟನಾಕಾರರು ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಪ್ರಕಟಣೆಗೆ ತಿಳಿಸಿರುವ ಪ್ರತಿಭಟನಾಕಾರರು, “ಇರುವ ಭೂಮಿಯನ್ನೆಲ್ಲ ಹಣ ಕಟ್ಟಿ ಗುತ್ತಿಗೆ ಪಡೆದುಕೊಂಡರೆ ನಿವೇಶನ ರಹಿತರು, ಭೂ ರಹಿತರಿಗೆ ಜಾಗವೇ ಇರುವುದಿಲ್ಲ. ಎಲ್ಲವೂ ಭೂ ಮಾಲೀಕರ ಕೈ ಸೇರಲಿದ್ದು, ಕೊಡಗಿನಲ್ಲಿ ಬಡವರ ಬದುಕಿನ ಕರಾಳ ಅಧ್ಯಾಯಕ್ಕೆ ಮುನ್ನುಡಿಯಾಗಲಿದೆ. ಕೊಡಗಿನಲ್ಲಿ ಅಪಾಯಕಾರಿ ಭೂ ಗುತ್ತಿಗೆ ಆದೇಶ ಜಾರಿಯಾಗಿ ಉಳ್ಳವರಿಗೆ ಭೂಮಿಯನ್ನು ಗುತ್ತಿಗೆ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಇದು ಕೊಡಗಿನ ಆದಿವಾಸಿ, ಶೋಷಿತ ವರ್ಗಗಳು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಬದುಕಿಗೆ ಉರುಳಾಗಲಿದೆ” ಎಂದು ಸಂಘಟನಾಕಾರರು ಆರೋಪ ಮಾಡಿದ್ದಾರೆ.

ಭೂ ಗುತ್ತಿಗೆ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ನಿರ್ವಾಣಪ್ಪ ಈ ದಿನ ಡಾಟ್‌ ಕಾಮ್ ಜತೆಗೆ ಮಾತನಾಡಿ, “ನಮ್ಮ ಹೋರಾಟ ನಿವೇಶನಕ್ಕಾಗಿ, ನಮ್ಮ ಹಕ್ಕಿಗಾಗಿ ಭೂ ಗುತ್ತಿಗೆ ಆದೇಶದಿಂದ ಕೊಡಗಿನಲ್ಲಾಗುವ ಅನಾಹುತ ಅರಿತು ಹೋರಾಟಕ್ಕೆ ಮುಂದಾಗಿದ್ದೇವೆ. ಕೊಡಗಿನಲ್ಲಿ ಈಗಾಗಲೇ ನೂರಾರು ಎಕರೆ ಭೂಮಿ ಇರುವ ಭೂ ಮಾಲೀಕರಿಗೆ ಭೂಮಿ ಗುತ್ತಿಗೆ ನೀಡುವುದಾದರೆ ಬಡವರಿಗೂ ನೀಡಬೇಕು. ನಿವೇಶನ ರಹಿತರಿಗೆ ಭೂಮಿ ಕಾಯ್ದಿರಿಸಿ, ಜಾಗ ಕೊಡಲು ಆಗದ ಸರ್ಕಾರ ಉಳ್ಳವರ ಪರ ಗುತ್ತಿಗೆ ನೀಡುವ ಆದೇಶ ಮಾಡಿ ಬಡವರ ಜೀವನದ ಜತೆ ಚೆಲ್ಲಾಟವಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಮಿತಿಯ ಜಿಲ್ಲಾ ಸಂಚಾಲಕ ಕೆ ಮೊನ್ನಪ್ಪ ಮಾತನಾಡಿ, “ಕೊಡಗಿನಲ್ಲಿ ಈವರೆಗೆ ದಲಿತರು, ಆದಿವಾಸಿಗಳು, ಬಡ ಜನರು ಹೋರಾಟ ಮಾಡುತ್ತಿರುವುದು ಕೇವಲ ತುಂಡು ಭೂಮಿಗಾಗಿ, ಒಂದೇ ಒಂದು ಸೂರಿಗಾಗಿ. ನಮ್ಮನ್ನು ಆಳುವ ಸರ್ಕಾರಗಳು ಜನಹಿತ ಯೋಚಿಸದೆ ಕೇವಲ ಉಳ್ಳವರ ಪರವಾಗಿ ಓಲೈಸುವ ನಿಟ್ಟಿನಲ್ಲಿ ಬಡಜನರ ಶೋಷಣೆ ಮಾಡುತ್ತಿದೆ. ಇಲ್ಲಿನ ಜನಪ್ರತಿನಿಧಿಗಳಿಗೆ ಬಹುಸಂಖ್ಯಾತರಾದ ಹಿಂದುಳಿದ ವರ್ಗಗಳ, ದಲಿತ, ಆದಿವಾಸಿ ಜನಗಳ ಮತ ಬೇಕು. ಆದರೆ ಅವರ ಹಿತ ಬೇಕಿಲ್ಲ. ಸರ್ಕಾರ ಕೂಡಲೇ ಇದನ್ನೆಲ್ಲ ಮನಗಂಡು ಭೂಮಿಯನ್ನು ಹಂಚಿಕೆ ಮಾಡಬೇಕು. ಬಡ ಜನರಿಗೆ ಭೂಮಿ ಕಾಯ್ದಿರಿಸಿ ನಿವೇಶನ ನೀಡಬೇಕು, ಬಡ ಜನರ ಬದುಕಿಗೆ ನೆರವಾಗಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ?: ಕರ್ನಾಟಕದ ಕಾಶ್ಮೀರ ಎನಿಸಿಕೊಂಡಿರುವ ಕೊಡಗಿನ ‘ಮಡಿಕೇರಿ’ಗೆ ಪರಿಶುದ್ಧ ಗಾಳಿ ಪಟ್ಟಿಯಲ್ಲಿ ಅಗ್ರಸ್ಥಾನ

“ಸರ್ಕಾರದ ಅನ್ಯಾಯ ಧೋರಣೆಯನ್ನು ಖಂಡಿಸಿ ಕೊಡಗಿನ ಎಲ್ಲ ಪ್ರಗತಿಪರ ಸಂಘಟನೆಗಳು ಸೇರಿ, ಸರ್ಕಾರದ ಭೂ ಗುತ್ತಿಗೆ ಆದೇಶ ರದ್ದುಪಡಿಸುವಂತೆ ಆಗ್ರಹಿಸಿ ನಾಳೆ ಹೋರಾಟಕ್ಕಿಳಿಯಲಿವೆ. ನಾಳೆ ಸುದರ್ಶನ ವೃತ್ತದಿಂದ ಆರಂಭವಾಗುವ ಜಾಥಾ ಜಿಲ್ಲಾಧಿಕಾರಿ ಕಚೇರಿ ಮುಂಭಾಗಕ್ಕೆ ಜಮಾವಣೆ ಆಗಿ ಧರಣಿ ನಡೆಸಲಿವೆ” ಎಂದು ಸಮಿತಿ ತಿಳಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...