ಉಡುಪಿ | ಮಾಹೆಯ ಭಾಷಾ ವಿಭಾಗದ ವತಿಯಿಂದ ಕೊರಗ ಭಾಷೆಯ ಅಧ್ಯಯನ

Date:

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ನ ಭಾಷಾ ವಿಭಾಗದ ವತಿಯಿಂದ ಕೊರಗ ಭಾಷೆಯ ಕುರಿತ ಕ್ಷೇತ್ರಾಧ್ಯಯನವು ಪಡುಬಿದ್ರಿ ಸಮೀಪದ ಪಾದೆಬೆಟ್ಟುವಿನಲ್ಲಿ ಇತ್ತೀಚೆಗೆ ನಡೆಯಿತು, ಕೊರಗ ಭಾಷಾ ತಜ್ಞ , ಲೇಖಕರಾದ ಪಾಂಗಾಳ ಬಾಬು ಕೊರಗ ಅವರು ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದ್ದು ದೆಹಲಿಯ ಅಶೋಕ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕಿ, ಲೇಖಕಿ, ಭಾಷಾಶಾಸ್ತ್ರಜ್ಞೆ ಡಾ. ಪೆಗ್ಗಿ ಮೋಹನ್‌ ಅವರು ಕ್ಷೇತ್ರಾಧ್ಯಯನವನ್ನು ನಡೆಸಿಕೊಟ್ಟರು.

‌ಬಾಬು ಕೊರಗ ಅವರು ಕೊರಗಭಾಷೆಯಲ್ಲಿ ಒಂದು ಕತೆಯನ್ನು ಹೇಳುವುದರ ಮೂಲಕ ಕ್ಷೇತ್ರಾಧ್ಯಯನಕ್ಕೆ ಅನುವು ಮಾಡಿಕೊಟ್ಟರು. ಪೆಗ್ಗಿ ಮೋಹನ್‌ ಅವರು ಕೊರಗಭಾಷೆಯ ಸೂಕ್ಷ್ಮ ಸ್ವರಗಳನ್ನು ವಿಶ್ಲೇಷಿಸಿದರು. ಭಾಷೆಯ ಕ್ಷೇತ್ರಾಧ್ಯಯನದ ಸಂದರ್ಭದಲ್ಲಿ ಅನುಸರಿಸಬೇಕಾದ ಅಂಶಗಳನ್ನು ವಿವರಿಸಿದರು. ಕೊರಗ ಭಾಷೆ ಮತ್ತು ಇತರ ಭಾರತದ ಮತ್ತು ಜಗತ್ತಿನ ಇತರ ಬುಡಕಟ್ಟಿನ ಭಾಷೆಗಳ ಕುರಿತ ತೌಲನಿಕ ಅಧ್ಯಯನದ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

ಮಾಹೆಯ ಭಾಷಾ ವಿಭಾಗದ ಮುಖ್ಯಸ್ಥರಾದ ರಾಹುಲ್‌ ಪುಟ್ಟಿ ಅವರು ಪ್ರಸ್ತಾವನೆಯಲ್ಲಿ ಒಂದು ಭಾಷೆಯನ್ನು ಅದು ಬಳಕೆಯಲ್ಲಿರುವ ಪ್ರದೇಶದಲ್ಲಿ ಅಧ್ಯಯನ ಮಾಡುವ ಆವಶ್ಯಕತೆಯನ್ನು ವಿವರಿಸಿದರು. ಮಾಹೆಯ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಕೇಂದ್ರದ ಸಂಯೋಜಕರಾದ ಡಾ. ಪೃಥ್ವೀರಾಜ ಕವತ್ತಾರು ಕ್ಷೇತ್ರಾಧ್ಯಯನದ ಕಲಾಪವನ್ನು ಸಂಯೋಜಿಸಿದರು. ಕೊರಗ ಸಮುದಾಯದ ಸಂಘಟಕರಾದ ಸುಂದರ ಮಂಗಳೂರು, ಕುಡುಪ ಉಡುಪಿ ಅವರು ಸಹಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು. ಭಾಷಾ ವಿಭಾಗದ ಪ್ರಾಧ್ಯಾಪಕರಾದ ಡಾ. ಅರವಿಂದ ಭಟ್‌, ಆದಿತ್ಯ ದಿವ್ಯಾ ಸಿಂಗ್‌, ಕ್ರಿಸ್ಟಾಫ್‌ ಕ್ರೋಝಿಕ್‌, ಶ್ವೇತಾ ದೇಶಪಾಂಡೆ, ಅಮೃತರಾಜ್‌ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...