ಉಡುಪಿ | ಮೋಟಾರೀಕೃತ ನಾಡದೋಣಿಗೆ ಸೀಮೆಎಣ್ಣೆ ರಹದಾರಿ ನೀಡಲು ದೋಣಿಗಳ ಭೌತಿಕ ತಪಾಸಣೆ

Date:

ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಮೋಟಾರೀಕೃತ ನಾಡದೋಣಿಗಳನ್ನು ಭೌತಿಕವಾಗಿ ಪರಿಶೀಲಿಸಿ ಮೀನುಗಾರಿಕೆ ಪರವಾನಿಗೆ ಹಾಗೂ ಸೀಮೆ ಎಣ್ಣೆ ರಹದಾರಿ ನೀಡಲು ಕ್ರಮಕೈಗೊಳ್ಳಲಾಗಿತ್ತಿದ್ದು, ಆಗಸ್ಟ್ ತಿಂಗಳಿನಿಂದ ಕೈಗಾರಿಕಾ ಸೀಮೆ ಎಣ್ಣೆಯನ್ನು ಪೂರೈಸಲು ಪೂರ್ವಸಿದ್ಧತೆ ಮಾಡಿಕೊಳ್ಳುವ ಉದ್ದೇಶದಿಂದ ಆಗಸ್ಟ್ 25 ರಂದು ಕುಂದಾಪುರ ತಾಲೂಕಿನ ಕೋಡಿ ಕಿನಾರೆ, ಗಂಗೊಳ್ಳಿ ಬಂದರು, ಗಂಗೊಳ್ಳಿ ಲೈಟ್ ಹೌಸ್, ಕಂಚುಗೋಡು ತ್ರಾಸಿ, ಕಂಚುಗೋಡು-ಮಡಿ, ನಾವುಂದ-ಮರವಂತೆ, ಕೊಡೇರಿ-ಕಿರಿಮಂಜೇಶ್ವರ, ಪಡುವರಿ-ತಾರಾಪತಿ, ಮಡಿಕಲ್- ಉಪ್ಪುಂದ, ಕಳಿಹಿತ್ಲು-ಅಳ್ವೆಗದ್ದೆ ಮತ್ತು ಆಗಸ್ಟ್ 26 ರಂದು ಉಡುಪಿ ತಾಲೂಕಿನ ಹೆಜಮಾಡಿ-ಪಡುಬಿದ್ರಿ, ಉಚ್ಚಿಲ-ಎಮಾಳ್, ಮಲ್ಪೆ- ಪಡುಕೆರೆ, ಮಲ್ಪೆ-ಸೀ-ವಾಕ್, ಸಾಸ್ತಾನ-ಕೋಡಿಕನ್ಯಾನ, ಸಾಸ್ತಾನ-ಕೋಡಿ ಜೆಟ್ಟಿ, ಕಾಪು-ಎರ್ಮಾಳ್ ಲೈಟ್ ಹೌಸ್, ಹಂಗಾರಕಟ್ಟೆ- ಕೋಡಿಬೆಂಗ್ರೆ ಗಳ ಸ್ಥಳಗಳಲ್ಲಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಭೌತಿಕ ತಪಾಸಣೆ ನಡೆಸಲಿದ್ದಾರೆ.

ಆದ್ದರಿಂದ ದೋಣಿ ಮಾಲಿಕರುಗಳು ತಪಾಸಣೆ ವೇಳೆಯಲ್ಲಿ ತಮ್ಮ ದೋಣಿ ಇಂಜಿನ್ ಸಮೇತ ದಾಖಲೆಗಳೊಂದಿಗೆ (ಆರ್.ಸಿ ಪ್ರತಿ, ಲೈಸೆನ್ಸ್ ಮತ್ತು ಸೀಮೆಎಣ್ಣೆ ರಹದಾರಿ ಪ್ರತಿ) ಖುದ್ದಾಗಿ ಹಾಜರಾಗಿ, ತಪಾಸಣೆ ನಡೆಸಲು ಸಹಕರಿಸುವಂತೆ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...