ಉಡುಪಿ | ಹಿಂದೂ ಎನಿಸಿಕೊಳ್ಳಲು ಬಿಜೆಪಿ ಸದಸ್ಯ ಆಗಲೇಬೇಕೆ ? ದಿನೇಶ್ ಅಮೀನ್ ಮಟ್ಟು

Date:

ಬಹುಸಂಸ್ಕೃತಿಯ ತೊಟ್ಟಿಲು ಕರಾವಳಿ, ಈ ಕರಾವಳಿಯನ್ನು ಇಲ್ಲಿಯ ಬಹುಸಂಖ್ಯಾತರು ಕಟ್ಟಿದ್ದಾರೆ. ಮಂಗಳೂರು ಮಲ್ಲಿಗೆ ಇದಕ್ಕೆ ಉತ್ತಮ ಉದಾಹರಣೆ, ಕ್ರೈಸ್ತರ ಮಲ್ಲಿಗೆಯನ್ನು ಬೆಳೆಯುತ್ತಾರೆ, ಮುಸ್ಲಿಮರು (ಬ್ಯಾರಿ) ಗಳು ಮಾರಾಟ ಮಾಡುತ್ತಾರೆ ಮತ್ತು ಇಲ್ಲಿಯ ಹಿಂದೂಗಳು ಅದನ್ನು ಮುಡುತ್ತಾರೆ ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಕೋಮು ಶಕ್ತಿಗಳು ಬಹುಸಂಸ್ಕೃತಿಯನ್ನು ಒಡೆಯುವ ಮೂಲಕ ಮಲ್ಲಿಗೆಯ ಸುವಾಸನೆಯನ್ನು ಕೆಡಿಸಲು ಶ್ರಮಿಸುತ್ತಿದ್ದಾರೆ ಎಂದು ಖ್ಯಾತ ಚಿಂತಕ ದಿನೇಶ್ ಅಮೀನ್ ಮಟ್ಟು ಹೇಳಿದರು.

ಅವರು ಇಂದು ಉಡುಪಿಯ ಕುಕ್ಕಂಜೆಯಲ್ಲಿರು ಅನುಗ್ರಹ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ-ಕರ್ನಾಟಕ, ಮಹಿಳಾ ಬಂಧುತ್ವ ವೇದಿಕೆ – ಕರ್ನಾಟಕ, ಮಂಗಳೂರು ವಿಭಾಗದ ಪದಾಧಿಕಾರಿಗಳ ಸಮಾವೇಶ ಹಾಗೂ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಬಹುಸಂಸ್ಕೃತಿಯ ಅಳಿವು ಉಳಿವು ವಿಷಯದಲ್ಲಿ ಮಾತನಾಡುತ್ತಿದ್ದರು.

ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯನ್ನು ಇಲ್ಲಿಯ ಜನರು ಪರಸ್ಪರ ಪ್ರೀತಿಯಿಂದ ಕಟ್ಟಿದ್ದರು ಆದರೆ 80ರ ದಶಕದಲ್ಲಿ ದಕ್ಷಣ ಕನ್ನಡದಲ್ಲಿ ಕೋಮು ದ್ವೇಷ ಶುರುವಾಗಿದ್ದು,
ಧರ್ಮದ ವ್ಯಾಪಾರ, ವಿದ್ಯೆಯ ವ್ಯಾಪಾರ, ರಾಜಕೀಯ ವ್ಯಾಪಾರ ಪ್ರಾರಂಭವಾಯಿತು. ಮದುವೆ, ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಕೋಟಿಗಟ್ಟಲೇ ಖರ್ಚು ಮಾಡುವ ಈ ಭಾಗದ ಜನರು ಆ ಹಣದಲ್ಲಿ ನೂರಾರು ಬಡವರಿಗೆ ಸೂರನ್ನು ಕಲ್ಪಿಸಿಕೊಡುವಲ್ಲಿ ಸೋತುಹೋಗಿದ್ದಾರೆ ಎಂದು ಹೇಳಿದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಾರಾಯಣ ಗುರುವನ್ನು ಒಪ್ಪುವವರು ಆರ್ ಎಸ್ ಎಸ್ ಅನ್ನು ಒಪ್ಪಲು ಸಾಧ್ಯವೇ ಇಲ್ಲ. ಹಿಂದು ಧರ್ಮದ ಬಗ್ಗೆ ಯಾರಿಗೂ ವಿರೋಧವಿಲ್ಲ, ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧೀಜಿ, ನಾರಾಯಣ ಗುರು ಹೇಳಿದ ಕಲಿಸಿದ್ದೇ ಆ ಹಿಂದು ಧರ್ಮದ ಸಾರವನ್ನೇ ಆದರೆ ಗೋಳ್ವಾಲ್ಕರ್ ಹೇಳಿದ ಹಿಂದು ಧರ್ಮಕ್ಕೆ ನಮ್ಮ ವಿರೋಧ ಈ ಬಗ್ಗೆ ಪ್ರತಿಯೊಬ್ಬ ಆರ್ ಎಸ್ ಎಸ್, ಹಿಂದು ಕಾರ್ಯಕರ್ತ ಆತ್ಮಶೋಧನೆ ಮಾಡಿಕೊಳ್ಳಬೇಕು. ರಾಮನನ್ನು, ಕೃಷ್ಣ ನನ್ನು ರಾಜಕೀಯಕ್ಕೆ ತರುವವರು ದೇಶ ದ್ರೂಹಿಗಳು, ನಿಮ್ಮ ಪ್ರಕಾರ ಹಿಂದು ಆಗಲು ಹಿಂದು ತಂದೆ ತಾಯಿಗೆ ಹುಟ್ಟಿದರೆ ಸಾಕಾ ಅಥವಾ ಬಿಜೆಪಿ ಸದಸ್ಯ ಆಗಬೇಕಾ‌? ಎಂದು ಪ್ರಶ್ನಿಸಿದರು.

1004454088

ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಹಾಗೂ ಸಚಿವರಾದ ಸತೀಶ್ ಜಾರಕಿಹೊಳಿ ಮಾತನಾಡಿ
ಮಾನವ ಬಂಧುತ್ವ ವೇದಿಕೆ ರಾಜಕೀಯ ಮಾಡಲು ಹುಟ್ಟಿದ ವೇದಿಕೆಯಲ್ಲ, ಶೋಷಿತರು, ಮರ್ದಿತರು ಮುಖ್ಯವಾಹಿನಿಗೆ ಬರಬೇಕು, ಬುದ್ದ, ಅಂಬೇಡ್ಕರ್, ಬಸವಣ್ಣ, ನಾರಾಯಣ ಗುರು ಯಾವ ಸಿದ್ದಾಂತವನ್ನು ಪ್ರತಿಪಾದಿಸಿದ್ದಾರೋ ಅದನ್ನೇ ಮತ್ತೆ ಮತ್ತೆ ಜನರಿಗೆ ನೆನಪಿಸುವ ಸಲುವಾಗಿ ಹುಟ್ಟಿಕೊಂಡ ವೇದಿಕೆ ಇದಾಗಿದೆ ಎಂದು ಹೇಳಿದರು.

1004454089

ಚಿಂತಕ ಪ್ರೊ. ಕೆ.ಫಣಿರಾಜ್ ಬಹುತ್ವ ಭಾರತದ ಪ್ರಸ್ತುತ ಸವಾಲುಗಳು ಎಂಬ ವಿಷಯದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ. ಎ.ಬಿ.ರಾಮಚಂದ್ರಪ್ಪ ವಹಿಸಿದ್ದರು. ಮಹಿಳಾ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕಿ ಡಾ. ಲೀಲಾ ಸಂಪಿಗೆ, ಉಡುಪಿ ಜಿಲ್ಲಾ ಸಂಚಾಲಕಿ ಶಾಂತಿ ಬೈಂದೂರು, ದ.ಕ. ಜಿಲ್ಲಾ ಸಂಚಾಲಕ ಪ್ರೇಮಿ ಫರ್ನಾಂಡೀಸ್,
ಮಂಗಳೂರು ವಿಭಾಗೀಯ ಸಂಚಾಲಕರಾದ ಕೆ.ಎಸ್.ಸತೀಶ್‌ಕುಮಾರ್, ರಾಜ್ಯ ಸಮಿತಿ ಸದಸ್ಯರಾದ ರೊನಾಲ್ಡ್ ಮನೋಹರ ಕರ್ಕಡ, ದ.ಕ. ಜಿಲ್ಲಾ ಸಂಚಾಲಕ ಜಯರಾಂ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಟೀವನ್ ಕಾರ್ಯಕ್ರಮ ನಿರೂಪಿಸಿದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...