ಮಂಡ್ಯ | ಹೈಕೋರ್ಟ್ ತೀರ್ಪು ಉಲ್ಲಂಘಿಸಿ ವೃದ್ಧ ದಂಪತಿಗೆ ವಂಚನೆ: ವಕೀಲ ವೆಂಕಟೇಶ್ ಆರೋಪ

Date:

ಮನೆ ಮತ್ತು ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ಉಲ್ಲಂಘನೆ ಮಾಡಿದ್ದು, ವೃದ್ಧ ದಂಪತಿಗೆ ವಂಚನೆ ಮಾಡಿದ್ದಾರೆ ಎಂದು ವಕೀಲ ವೆಂಕಟೇಶ್ ಆರೋಪ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ತಮ್ಮ ಕಚೇರಿಯಲ್ಲಿ ಮಾತನಾಡಿ, “ತಾಲೂಕಿನ ಮಿರ್ಚಿಬೋರನಕೊಪ್ಪಲು ಗ್ರಾಮದಲ್ಲಿ ಮರಿಸ್ವಾಮಾಚಾರ ಮತ್ತು ಸರೋಜಮ್ಮ ದಂಪತಿ ವಾಸವಾಗಿದ್ದರು. ಸತೀಶ್, ಮರಿಸ್ವಾಮಾಚಾರ ತಮ್ಮನ ಮಗ ದಂಪತಿ ಗಮನಕ್ಕೆ ಬಾರದಂತೆ ಪ್ರಮಾಣಪತ್ರ ಮಾಡಿಸುವ ನೆಪದಲ್ಲಿ ನೋಂದಣಿ ಮಾಡಿಸಿಕೊಂಡು ಅವರ ಹೆಸರಿಗೆ ಖಾತೆ ಮಾಡಿಕೊಂಡಿದ್ದಾರೆ. ಈ ಮೋಸ ದಂಪತಿಗೆ ಗೊತ್ತಾಗಿ ಹಿರಿಯ ನಾಗರಿಕರ ಪ್ರಕರಣದಡಿ ಪಾಂಡವಪುರ ವಿಭಾಗಾಧಿಕಾರಿಗಳ ಕೋರ್ಟಿನಲ್ಲಿ ಕೇಸು ದಾಖಲು ಮಾಡಿದ್ದರು. ಬಳಿಕ ಹಿರಿಯರ ಪರ ತೀರ್ಪು ಬಂದಿದೆ” ಎಂದು ವಕೀಲ ವೆಂಕಟೇಶ್ ಮಾಹಿತಿ ನೀಡಿದರು.

“ಉಪವಿಭಾಗಾಧಿಕಾರಿಗಳ ತೀರ್ಪಿನ ಮೇಲೆ ಸತೀಶ ಹೈಕೋರ್ಟಿಗೆ ಹೋಗಿ ತಡೆ ತಂದಿದ್ದಾರೆ. ಇದನ್ನು ಎಸಿ ಕೂಡ ತಹಶೀಲ್ದಾರರಿಗೆ ಹೈಕೋರ್ಟಿನ ಪ್ರೊಸೀಡಿಂಗನ್ನು ಫಾಲೋ ಮಾಡಲು ತಿಳಿಸಿದ್ದಾರೆ. ಆದರೆ ಶ್ರೀರಂಗಪಟ್ಟಣ ತಹಶೀಲ್ದಾರರು ವ್ಯತಿರಿಕ್ತವಾಗಿ ಒಂದು ನೋಟಿಸ್‌ ಮಾಡಿ ಪೊಲೀಸರ ರಕ್ಷಣೆಯೊಂದಿಗೆ ಸತೀಶನನ್ನು ವೃದ್ಧದಂಪತಿ ಮನೆಗೆ ಸೇರಿಸಲು ಕಳಿಸಿದ್ದಾರೆ. ಇದು ಕಾನೂನು ಬಾಹಿರ” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಎಸಿ ಆದೇಶದ ಮೇಲೆ ಒಬ್ಬರನ್ನು ಮನೆ ಖಾಲಿಮಾಡಿಸಿದ ಮೇಲೆ ಪುನಃ ಮನೆಗೆ ಸೇರಿಸಲು ಬರುವುದಿಲ್ಲ. ಹೈಕೋರ್ಟಿನಲ್ಲಿ ಇಂಜೆಕ್ಷನ್ ಆರ್ಡರ್ ಮನೆಗೆ ಹೋಗಲು ಅವಕಾಶ ಮಾಡಿಕೊಟ್ಟಿದೆಯೆಂದು ಆದೇಶ ಇದ್ದಲ್ಲಿ ಮಾತ್ರ ಸೇರಿಸಬೇಕು. ಶ್ರೀರಂಗಪಟ್ಟಣ ತಹಶೀಲ್ದಾರರು ಹೆಚ್ಚುವರಿ ಮುತುವರ್ಜಿ ತೆಗೆದುಕೊಂಡು ಹೈಕೋರ್ಟ್ ಆದೇಶದಲ್ಲಿ ಇಲ್ಲದಿದ್ದರೂ, ಪ್ರಕರಣ ನ್ಯಾಯಾಲಯದಲ್ಲಿ ಇದ್ದಾಗ ಪೊಲೀಸರ ರಕ್ಷಣೆಗೆ ಆದೇಶ ಮಾಡಿ, ಸತೀಶ್ ಮತ್ತು ಕುಟುಂಬವನ್ನು ಸರೋಜಮ್ಮ ದಂಪತಿ ಮನೆಯಲ್ಲಿ ಒಟ್ಟಿಗೆ ಸೇರಿಸಲು ಆದೇಶಿಸುತ್ತಾರೆ” ಎಂದರು.

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಹೆಣ್ಣುಮಕ್ಕಳ ಸುರಕ್ಷತೆ, ಹಕ್ಕು, ಆಶಯಗಳಿಗೆ ‘ಅಪ್ತಗೆಳತಿ’ ಪೂರಕ: ಶಾಸಕ ಎ ಆರ್ ಕೃಷ್ಣಮೂರ್ತಿ

“ಹಾವು ಮುಂಗುಸಿಯಂತೆ ಕಿತ್ತಾಡುತ್ತಿರುವ ಇಬ್ಬರು ಎದುರುದಾರರನ್ನು ಒಟ್ಟಿಗೆ ಒಂದೇ ಮನೆಗೆ ಸೇರಿಸುತ್ತಿರುವುದು ಎಷ್ಟು ಸರಿ? ನೀವು ಆದೇಶ ಮಾಡಿರುವುದು ಸರಿಯೇ? ಈ ಪ್ರಕರಣಕ್ಕೆ ಸತೀಶ್ ತಡೆ ಆದೇಶ ತಂದಿದ್ದಾರೆಯೇ? ಇದರ ಬಗ್ಗೆ ಕಾನೂನು ತಿಳುವಳಿಕೆ ಇದ್ದರೂ ಕೂಡ ಶ್ರೀರಂಗಪಟ್ಟಣದ ತಹಶೀಲ್ದಾರರಾದ ನೀವು ಕಾನೂನುಬಾಹಿರವಾಗಿ ಎದುರುದಾರರನ್ನು ಒಟ್ಟಿಗೆ ಸೇರಿಸಿ ಇನ್ನೂ ಅಶಾಂತಿ ಉಂಟು ಮಾಡುತ್ತಿದ್ದೀರೆಂದು ನಿಮಗೆ ಅನ್ನಿಸುವುದಿಲ್ಲವೇ? ಹಿರಿಯ ನಾಗರಿಕರಿಗೆ ಸಂರಕ್ಷಣೆ ಏಕೆ ಕೊಡುತ್ತಿಲ್ಲ? ಹೈಕೋರ್ಟ್ ಆದೇಶ ಇಲ್ಲದಿದ್ದರೂ ನೀವೇ ಒಂದು ಆದೇಶ ಮಾಡಿರುವುದು ಕಾನೂನು ಬಾಹಿರ. ಈ ಕೂಡಲೇ ತಹಶೀಲ್ದಾರರಾದ ತಾವು ಕಾನೂನು ಬಾಹಿರ ಚಟುವಟಿಕೆ ನಿಲ್ಲಿಸಬೇಕು. ಹೈಕೋರ್ಟಿನ ಆದೇಶಕ್ಕೆ ಮಾನ್ಯತೆ ಕೊಡಬೇಕು” ಎಂದು ವಕೀಲ ವೆಂಕಟೇಶ್ ಒತ್ತಾಯಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...