ಮಂಡ್ಯ | ಭೂಸ್ವಾಧೀನವಾಗಿರುವ ಭೂಮಿ ಹಸ್ತಾಂತರಿಸದೇ ವಂಚನೆ; ಭೂರಹಿತರ ಆರೋಪ

Date:

ನಿವೇಶನರಹಿತರ ಭೂಮಿಗೆ ವಿನಾ ಕಾರಣ ವ್ಯಾಜ್ಯ ಮಾಡಿರುವ ಹಾಗೂ ಭೂಸ್ವಾಧೀನವಾಗಿರುವ ಭೂಮಿ ಹಸ್ತಾಂತರಿಸದೇ ಮೋಸ ಮಾಡಿದ್ದಾರೆಂದು ಆರೋಪಿಸಿ ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸಂಚಾಲಕ ಬಿ ಕೆ ಸತೀಶ ಹಾಗೂ ನಿವೇಶನರಹಿತರು ಮಂಡ್ಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

“ಮಂಡ್ಯ ತಾಲೂಕಿನ ಬೂದನೂರು ನಿವೇಶನರಹಿತರಿಗೆ ಗ್ರಾಮದ 142/9A ನ 20 ಗುಂಟೆ ಭೂಮಿಯಲ್ಲಿ ನಿವೇಶನ ವಿತರಿಸಲು ಗ್ರಾಮಸಭೆ ನಡೆಸಿ, ಫಲಾನುಭವಿಗಳ ಆಯ್ಕೆಯಾಗಿ ತಾವು ಹಕ್ಕುಪತ್ರಕ್ಕೆ ಶಿಫಾರಸು ಮಾಡಿದ್ದೀರಿ. ಆದರೂ ಗ್ರಾಮದ ರಾಮು ಬಿನ್ ಕೆಂಪೇಗೌಡ ಎಂಬುವವರು ಹೈಕೋರ್ಟ್‌’ನಲ್ಲಿ ದಾವೆ ಹೂಡಿ ಅಡ್ಡಿಪಡಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ರಾಮು ಎಂಬಾತನಿಗೆ ಕಂದಾಯ ಅಧಿಕಾರಿಗಳು ಕುಮ್ಮಕ್ಕು ನೀಡಿ ದಾವೆ ಹೂಡಿರುವ ಬಗ್ಗೆ ಅನುಮಾನವಿದೆ. ಅಲ್ಲದೆ ಇದೇ ವ್ಯಕ್ತಿಯ ಹಾಗೂ ಇತರರ ಸರ್ವೆ ನಂ.144/1ರಲ್ಲಿ 19 ಗುಂಟೆಯಲ್ಲಿ 1 ಗುಂಟೆ ಖರಾಬು ಕಳೆದು ಉಳಿಕೆ 18 ಗುಂಟೆ ಭೂಸ್ವಾಧೀನ (ಜುಲೈ 24, 1976 ಗೆಜೆಟ್ ನೊಟೀಫಿಕೇಷನ್‌ ಅನುಕ್ರಮ ಸಂಖ್ಯೆ 7) ವಾಗಿದೆ. ಈ ಭೂಮಿಯು ಜಿಲ್ಲಾಧಿಕಾರಿ ನ್ಯಾಯಾಲಯದ ಪ್ರಕರಣ ಸಂಖ್ಯೆ 134/2015 ವಿಚಾರಣೆ ನಡೆದು 2020ರ ನವೆಂಬರ್‌ 24ರಂದು ಇತ್ಯರ್ಥವಾಗಿದ್ದು, 2021ರ ಏಪ್ರಿಲ್‌ 18ರಂದು ನಿವೇಶನರಹಿತರ ಹೆಸರಿಗೆ ಆರ್‌ಟಿಸಿ ಇಂಡೀಕರಣವಾಗಿದೆ” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಬಳಿಕ ಕಂದಾಯ ಅಧಿಕಾರಿಗಳು 19 ಗುಂಟೆ ಭೂಮಿಯನ್ನು 23.8 ಗುಂಟೆ ಎಂದು ಅಕ್ರಮ ಎಸಗಿ ಆಕಾರ ಬಂದ್ ತಾಳೆಯಾಗದಿದ್ದರೂ 4.08 ಗುಂಟೆ ಭೂಮಿಯನ್ನು 2022ರ ಫೆಬ್ರವರಿ 17ರಂದು ರಾಮು ಎಂಬಾತನ ಹೆಸರಿಗೆ ಅಕ್ರಮ ಖಾತೆ ಮಾಡಿದ್ದಾರೆ. ಅಲ್ಲದೆ ಭೂಸ್ವಾಧೀನದ ಅನುಕ್ರಮ ಸಂಖ್ಯೆ 17ರಲ್ಲಿನ 144/3ನ್ನು ಜಿಲ್ಲಾಧಿಕಾರಿ ನ್ಯಾಯಾಲಯದ ಪ್ರಕರಣದಿಂದ ದುರುದ್ದೇಶದಿಂದ ಕೈ ಬಿಟ್ಟಿದ್ದಾರೆ” ಎಂದು ಆರೋಪಿಸಿದರು.

“ಲೋಕಾಯುಕ್ತದಲ್ಲಿ 144/3ರ ಸಂಬಂಧ ದೂರು ದಾಖಲಾಗಿದ್ದು, ಇದರ ಕುರಿತಂತೆ ತಹಶೀಲ್ದಾರ್ ಅವರಿಗೆ ಕ್ರಮ ವಹಿಸಲು ಸೂಚಿಸಿದ್ದರೂ ಆ ಬಗ್ಗೆ ಯಾವುದೇ ಪ್ರಯತ್ನ ಮಾಡದೇ ನಿವೇಶನರಹಿತರಿಗೆ ಅನ್ಯಾಯ ಎಸಗಲು ಮುಂದಾಗಿದ್ದಾರೆ. ನಿವೇಶನರಹಿತರ ಭೂಮಿ ಖಾಲಿಯಿದ್ದರೂ ತಹಶೀಲ್ದಾರ್ ಹಾಗೂ ಅಧೀನ ಸಿಬ್ಬಂದಿ ಮತ್ತು ಭೂಮಾಪಕರು, ರಾಮು ಎಂಬಾತನು ಅಕ್ರಮ ಪ್ರವೇಶದಲ್ಲಿರುವ ಭೂಮಿ ಬಗ್ಗೆ ಮಾಹಿತಿ ನೀಡದೆ ಖಾಲಿ ಇರುವ ಜಾಗದ ಮಾಹಿತಿಯನ್ನು ಮರೆ ಮಾಚಿದ್ದಾರೆ. ಹಾಗಾಗಿ ನಿವೇಶನರಹಿತರಿಗೆ ತೀವ್ರ ಅನ್ಯಾಯವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಬಡವರಿಗೆ ಹಕ್ಕುಪತ್ರ ನೀಡಲು ಹಿಂದೇಟು; ಏಕಾಂಗಿ ಪ್ರತಿಭಟನೆಗಿಳಿದ ಗ್ರಾ.ಪಂ. ಉಪಾಧ್ಯಕ್ಷ

“ನಿವೇಶನರಹಿತರಿಗೆ ಭೂಸ್ವಾಧೀನವಾಗಿರುವ ಭೂಮಿಗಳಲ್ಲಿನ 9 ವ್ಯಾಜ್ಯಗಳನ್ನು ಕೂಡಲೇ ಇತ್ಯರ್ಥಪಡಿಸಬೇಕು. ನಿವೇಶನರಹಿತರಿಗೆ 30+40 ಆಳತೆಯ ನಿವೇಶನ ನೀಡಲು ಕ್ರಮ ವಹಿಸಿ, ಹೋರಾಟಗಾರರಿಗೆ ಮೊದಲ ಆದ್ಯತೆ ನೀಡಿ, ಹಕ್ಕುಪತ್ರ ವಿತರಿಸಬೇಕು. ಬೂದನೂರು ಸರ್ಕಾರಿ ಭೂಮಿ ಕುರಿತು ಅಕ್ರಮ ಎಸಗಿರುವ ಕಂದಾಯ ಅಧಿಕಾರಿಗಳ ವಿರುದ್ಧ ವಿಚಾರಣೆ ಮಾಡಿ ಕಾನೂನು ಕ್ರಮ ವಹಿಸಬೇಕು” ಎಂದು ಆಗ್ರಹಿಸಿದರು.

“ತಮ್ಮ ಹಕ್ಕೊತ್ತಾಯಗಳು ಈಡೇರುವವರೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿಯ ಕಾರ್ಯಕರ್ತರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...