ಮಂಡ್ಯ | ಕೂಳಗೆರೆ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ; ಪಿಡಿಒ, ಬಿಲ್‌ ಕಲೆಕ್ಟರ್‌ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ

Date:

ಕೂಳಗೆರೆ ಗ್ರಾಮ ಪಂಚಾಯಿತಿಯ ಪಿಡಿಒ ಮತ್ತು ಬಿಲ್‌ ಕಲೆಕ್ಟರ್ ರಶೀದಿಗಳನ್ನು ನೀಡದೆ ಗ್ರಾಮಸ್ಥರಿಗೆ ಮೋಸ ಮಾಡುತ್ತಿದ್ದು, ಈ ಸಂಬಂಧ ಶಿಸ್ತುಕ್ರಮ ಕೈಗೊಳ್ಳಲು ಸಲ್ಲಿಸಿರುವ ದೂರು ಅರ್ಜಿಯ ಸಂಬಂಧ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅರೆಕಲ್‌ದೊಡ್ಡಿ ಗ್ರಾಮಸ್ಥರು ಮತ್ತು ಕೆಆರ್‌ಎಸ್‌ ಪಕ್ಷದಿಂದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಮನವಿ ನೀಡಿದರು.

“ಕೂಳಗೆರೆ ಗ್ರಾಮ ಪಂಚಾಯಿತಿಯ ಪಿಡಿಒ ಮತ್ತು ಬಿಲ್‌ಕಲೆಕ್ಟರ್ ಕಂದಾಯ ರಶೀದಿ ನೀಡದೆ ಗ್ರಾಮಸ್ಥರಿಗೆ ಮೋಸ ಮಾಡುತ್ತಿದ್ದರು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಕೋರಿ ದೂರು ಅರ್ಜಿ ಸಲ್ಲಿಸಿದ್ದು, ಅದರಂತೆ ಸದರಿ ಮನವಿಯನ್ನು ಸಾರ್ವಜನಿಕರ ಕುಂದುಕೊರತೆ ಅರ್ಜಿಯೆಂದು ಪರಿಗಣಿಸಿ ಆದ್ಯತರ ಮೇರೆಗೆ ಪರಿಶೀಲಿಸಬೇಕು. ನಿಯಮಾನುಸಾರ ಸೂಕ್ತ ಕ್ರಮ ಕೈಗೊಂಡು, ಇದರ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಬೇಕು” ಎಂದು ಅರೆಕಲ್‌ದೊಡ್ಡಿ ಗ್ರಾಮಸ್ಥರು ಒತ್ತಾಯಿಸಿದರು.

“ಸದರಿ ದೂರು ಅರ್ಜಿಗೆ ಸಂಬಂಧಿಸಿದಂತೆ ಪರಿಶೀಲಿಸಿ ವರದಿ ಸಲ್ಲಿಸಲು ಮದ್ದೂರು ತಾಲೂಕು ಯೋಜನಾಧಿಕಾರಿ, ‌ಸಹಾಯಕ ನಿರ್ದೇಶಕರು, ತಾಲೂಕು ಪಂಚಾಯತ್‌ ಅಧಿಕಾರಿಗಳನ್ನು ಒಂಗೊಂಡ ತಂಡ ರಚಿಸಿ, ಖುದ್ದು ಕೂಳಗೆರೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿಯಲ್ಲಿನ ಕಡತ ಹಾಗೂ ಸ್ಥಳ ಪರಿಶೀಲಿಸಿ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಆದರಂತೆ ಪರಿಶೀಲನಾ ತಂಡವು ಮಾರ್ಚ್‌ 19ರ ಬುಧುವಾರ ಕೂಳಗೆರೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ದೂರುದಾರರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಬಿಲ್ ಕಲೆಕ್ಟರ್‌ಗಳಿಂದ ಮಾಹಿತಿ ಹಾಗೂ ದಾಖಲಾತಿಗಳನ್ನು ಪಡೆದು ಪರಿಶೀಲಿಸಿ, ವಿವರವಾದ ವರದಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕಚೇರಿಗೆ ಸಲ್ಲಿಸಿ, ಕೆಳಕಂಡ ಅಂಶಗಳು ಕಂಡುಬಂದಿರುವುದಾಗಿ ತಿಳಿಸುತ್ತ, ಗ್ರಾಮಸ್ಥರು ನೀಡಿರುವ ದಾಖಲೆ ಹಾಗೂ ಹೇಳಿಕೆಗಳ ಆಧಾರದ ಮೇಲೆ ಸತ್ಯಾವಾಗಿರುವುದು ಕಂಡುಬಂದಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದು ಕೇವಲ ಒಂದು ದಾಖಲೆ ಗ್ರಾಮಕ್ಕೆ ಮಾತ್ರ ಸಂಬಂಧಿಸಿದ್ದು, ಸದರಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 9 ಗ್ರಾಮಗಳಿದ್ದು, ಅದರಲ್ಲಿ 4 ಕಂದಾಯ ಗ್ರಾಮ ಮತ್ತು 5 ದಾಖಲೆ ಗ್ರಾಮಗಳಿರುತ್ತವೆ ಎಂದು ವರದಿ ಸಲ್ಲಿಸಿರುತ್ತಾರೆ.

  1. ಅರೆಕಲ್‌ದೊಡ್ಡಿಯು ಆರುವನಹಳ್ಳಿ ಗ್ರಾಮಕ್ಕೆ ದಾಖಲೆ ಗ್ರಾಮವಾಗಿರುತ್ತದೆ.
  2. ಒಬ್ಬ ವ್ಯಕ್ತಿಯಿಂದ ಹಣ ಪಡೆದು ಮತ್ತೊಬ್ಬ ವ್ಯಕ್ತಿಯ ಖಾತೆಗೆ ಹಣ ಜಮೆ ಮಾಡಿರುವುದು ಕಂಡುಬಂದಿರುತ್ತದೆ.
  3. 500/-ರೂ ಹಣ ಪಡೆದು 580/- ರೂಗಳನ್ನು ಬೇರೆಯವರ ಬಿಲ್ಲು ನೀಡಿರುವುದು ಕಂಡುಬಂದಿರುತ್ತದೆ.
  4. ಗ್ರಾಮಸ್ಥರಿಂದ ಹೆಚ್ಚು ಹಣ ಪಡೆದು ಕಡಿಮೆ ಹಣ ಸರ್ಕಾರಕ್ಕೆ ಜಮಾ ಮಾಡಿರುವುದು ಕಂಡುಬಂದಿರುತ್ತದೆ.
  5. ಎರಡು ಆಸ್ತಿ ಇರುವ ಗ್ರಾಮಸ್ಥರಿಂದ 3 ಆಸ್ತಿಗೆ ತೆರಿಗೆ ಹಣವನ್ನು ಪಡೆದಿರುವುದು ಕಂಡುಬಂದಿರುತ್ತದೆ.
  6. ಬೇರೆಯವರ Merchant Copy ನೀಡಿ ಹಣ ವಸೂಲು ಮಾಡಿರುವುದು ಕಂಡುಬಂದಿರುತ್ತದೆ.
  7. ಹೆಚ್ಚುವರಿಯಾಗಿ ಮಟನ್ ಮಾರ್ಕೆಟ್ ಎಂದು ತೆರಿಗೆ ವಸೂಲಿ ಮಾಡಿರುವುದು ಕಂಡುಬಂದಿರುತ್ತದೆ.
  8. ಬೇರೆ ಗ್ರಾಮದ ವ್ಯಾಪ್ತಿಯ ಹೆಸರಿನ ಬಿಲ್ಲುಗಳನ್ನು ನೀಡಿ ಹಣ ಪಡೆದಿರುವುದು ಕಂಡುಬಂದಿರುತ್ತದೆ.
  9. ಮ್ಯುಟೇಷನ್‌ಗೆ ₹1,000 ಪಡೆಯುವ ಬದಲಾಗಿ ₹2,600 ಪಡೆದಿರುವುದು ಕಂಡುಬಂದಿರುತ್ತದೆ.
  10. ಕಟ್ಟಡ, ಭೂಮಿ, ಬೀದಿದೀಪ ಮತ್ತು ನೀರಿನ ಕರ ಪಡೆದು ಬಿಲ್‌ ನೀಡಿ ಮತ್ತೆ ನೀರಿನ ಕರವೆಂದು ಹೆಚ್ಚುವರಿ ಹಣ ವಸೂಲಿ ಮಾಡಿರುವುದು ಕಂಡುಬಂದಿರುತ್ತದೆ.
  11. ಸರ್ಕಾರಕ್ಕೆ 3,518 ರೂಗಳನ್ನು ಜಮಾ ಮಾಡಿ ಅದೇ ವ್ಯಕ್ತಿಯಿಂದ ಹೆಚ್ಚುವರಿಯಾಗಿ 1,5067 ರೂಗಳನ್ನು ಪಡೆದಿರುವುದು ಕಂಡುಬಂದಿರುತ್ತದೆ.
  12. ದಾಖಲೆಗಳನ್ನು ಪರಿಶೀಲಿಸಿ ಬಾಕಿ ತೆರಿಗೆ ಎಷ್ಟು ಎಂದು ತಿಳಿಸದೆ ಪ್ರತಿ ಬಾರಿಯೂ ಮನಸ್ಸಿಗೆ ಬಂದಂತೆ ತೆರಿಗೆಯನ್ನು ಖಾಲಿ ಪೇಪರಲ್ಲಿ ಬರೆದುಕೊಂಡಿರುವುದು ಸೇರಿದಂತೆ ಬಹುತೇಕೆ ಅಕ್ರಮಗಳು ನಡೆದಿರುವುದು ಕಂಡುಬಂದಿರುತ್ತದೆ. ಇದು ಕೇವಲ ಒಂದು ದಾಖಲೆ ಗ್ರಾಮಕ್ಕೆ ಸಂಬಂಧಿಸಿರುತ್ತದೆ.

    ಈ ಸುದ್ದಿ ಓದಿದ್ದೀರಾ? ವೇಮುಲ ಆತ್ಮಹತ್ಯೆ ಸಂದರ್ಭದ ಉಪಕುಲಪತಿ ಅಪ್ಪಾರಾವ್ ಅವರನ್ನು ಕುವೆಂಪು ವಿವಿಗೆ ಕರೆದವರು ಯಾರು?

    ಸದರಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 9 ಗ್ರಾಮಗಳಿದ್ದು, ಅದರಲ್ಲಿ 4 ಕಂದಾಯ ಗ್ರಾಮ ಮತ್ತು 5 ದಾಖಲೆ ಗ್ರಾಮವಾಗಿರುತ್ತದೆ ಸದರಿ ದೂರಿಗೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಬಿಲ್ ಕಲೆಕ್ಟರ್‌ ಇಬ್ಬರೂ ನೀಡಿರುವ ಹೇಳಿಕೆಯ ಪ್ರತಿಯನ್ನು ಲಗತ್ತಿಸಲಾಗಿದೆ. ಹಾಗಾಗಿ ಮೇಲ್ಕಂಡ ಅಂಶಗಳನ್ನು ತಮ್ಮ ಮುಂದಿನ ಕ್ರಮಕ್ಕಾಗಿ ಸಲ್ಲಿಸಿದೆ. ಎಲ್ಲ ದಾಖಲೆ ಮತ್ತು ದೂರು ಪ್ರತಿಯನ್ನು ಪರಿಶೀಲಿಸಿ ಕೂಳಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಬಿಲ್‌ ಕಲೆಕ್ಟರ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಮತ್ತು ಕೆಆರ್‌ಎಸ್‌ ಪಕ್ಷದಿಂದ ಒತ್ತಾಯಿಸಲಾಗಿದೆ.
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...