​ಶ್ರೀರಂಗಪಟ್ಟಣ | ಸ್ವಾಮಿ ವಿವೇಕಾನಂದರ 163ನೇ ಜಯಂತಿ: ‘ಪ್ರಜ್ಞಾವಂತ ವೇದಿಕೆ’ಯಿಂದ ಸೌಹಾರ್ದತೆಯ ಸಂದೇಶ

Date:

​ವಿವೇಕಾನಂದರು ಅಂದು ಚಿಕಾಗೋದಲ್ಲಿ ನೀಡಿದ ‘ಸಹೋದರ ಸಹೋದರಿಯರೇ’ ಎಂಬ ಕರೆ ಇಂದು ನಮ್ಮ ಸಂವಿಧಾನದ ‘ಭ್ರಾತೃತ್ವ’ ಎಂಬ ಪದದಲ್ಲಿ ಅಡಗಿದೆ. ವಿವೇಕಾನಂದರು ಸನ್ಯಾಸತ್ವವೆಂದರೆ ಸರ್ವಸಂಗ ಪರಿತ್ಯಾಗಿಯೆಂದು ನಂಬಿದ್ದರು. ಅವರಿಗೆ ಆಹಾರ, ಜಾತಿ ಇಲ್ಲವೇ ಧರ್ಮದಲ್ಲಿ ಯಾವುದೇ ಭೇದ-ಭಾವವಿರಲಿಲ್ಲ ಎಂದು ಪ್ರಜ್ಞಾವಂತರ ವೇದಿಕೆ ಶ್ರೀರಂಗಪಟ್ಟಣ ತಾಲೂಕು ಸಂಚಾಲಕ ಸಿ ಎಸ್ ವೆಂಕಟೇಶ್ ಅಭಿಪ್ರಾಯಪಟ್ಟರು.

ʼಸರ್ವ ಜನಾಂಗದ ಶಾಂತಿಯ ತೋಟʼವೆಂದು ಕುವೆಂಪು ಅವರು ಬಣ್ಣಿಸಿದ ಕರ್ನಾಟಕದ ಪುಣ್ಯಭೂಮಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಪ್ರಜ್ಞಾವಂತರ ವೇದಿಕೆಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 163ನೇ ಜಯಂತ್ಯೋತ್ಸವದ ಆಚರಣೆಯಲ್ಲಿ ಮಾತನಾಡಿದರು.

“ಜಾತಿ ಮತ್ತು ಧರ್ಮಗಳ ನಡುವೆ ಕಂದಕ ಸೃಷ್ಟಿಸಿ, ಜನರನ್ನು ಎತ್ತಿಕಟ್ಟುವವರು ವಿವೇಕಾನಂದರ ತತ್ವಗಳಿಗೆ ವಿರೋಧಿಗಳು ಹಾಗೂ ದೇಶದ್ರೋಹಿಗಳು” ಎಂದು ಕಟುವಾಗಿ ಟೀಕಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಇಂದಿನ ಕಾಲದ ಐಷಾರಾಮಿ ಬದುಕು ನಡೆಸುವ, ಆಸ್ತಿ ಮಾಡುವ ಸನ್ಯಾಸಿಗಳು ವಿವೇಕಾನಂದರ ಬದುಕನ್ನು ನೋಡಿ ಕಲಿಯಬೇಕು. ಸನ್ಯಾಸತ್ವ ಎಂದರೆ ಜನಸೇವೆಯೇ ಹೊರತು ಸ್ವಾರ್ಥವಲ್ಲ. ʼಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿʼ ಎಂಬ ವಿವೇಕಾನಂದರ ವಾಣಿಯಂತೆ ನಾವೆಲ್ಲರೂ ಭ್ರಾತೃತ್ವದಿಂದ ಬದುಕೋಣ” ಎಂದು ಕಿವಿಮಾತು ಹೇಳಿದರು.

ಗಂಜಾಂ ಅಬೆ ದುಬೆ ಚರ್ಚ್‌ನ ಧರ್ಮಾಧಿಕಾರಿ ಸಾಂಗೈ ಪುಷ್ಪರಾಜ್ ಮಾತನಾಡಿ, “1888ರಲ್ಲಿ ಭಾರತ ಪರ್ಯಟನೆಗೆ ಹೊರಟಾಗ ವಿವೇಕಾನಂದರು ತಮ್ಮೊಂದಿಗೆ ಕಮಂಡಲ, ದಂಡದ ಜತೆಗೆ ತಮಗೆ ಪ್ರಿಯವಾದ ಭಗವದ್ಗೀತೆ ಮತ್ತು ‘ದಿ ಇಮಿಟೇಶನ್ ಆಫ್ ಕ್ರೈಸ್ಟ್’ ಪುಸ್ತಕಗಳನ್ನು ಕೊಂಡೊಯ್ಯುತ್ತಿದ್ದರು. ಇದು ಅವರು ಧರ್ಮಗಳನ್ನು ಮೀರಿ ಪ್ರೀತಿ ಮತ್ತು ಮಾನವೀಯತೆಗೆ ನೀಡುತ್ತಿದ್ದ ಮಹತ್ವವನ್ನು ತೋರಿಸುತ್ತದೆ” ಎಂದರು.

ಈ ಸುದ್ದಿ ಓದಿದ್ದೀರಾ? ಕುಶಾಲನಗರ | ಸ್ವಾಮಿ ವಿವೇಕಾನಂದರ ಆದರ್ಶಗಳು ಯುವ ಜನಾಂಗಕ್ಕೆ ಸ್ಫೂರ್ತಿ: ಟಿ ಜಿ ಪ್ರೇಮ್ ಕುಮಾರ್

​ಈ ಸಂದರ್ಭದಲ್ಲಿ ಮುಸ್ಲಿಂ ಸೌಹಾರ್ದ ವೇದಿಕೆಯ ಅಧ್ಯಕ್ಷ ಅಫ್ಸರ್ ಖಾನ್, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ತಾಲೂಕು ಬೌದ್ಧ ಮಹಾಸಭಾದ ಮಾಜಿ ಅಧ್ಯಕ್ಷ ಕೆ ಟಿ ರಂಗಪ್ಪ, ಸಾಮಾಜಿಕ ಹೋರಾಟಗಾರ ಪಾಲಹಳ್ಳಿ ಪ್ರಸನ್ನ, ಆಂತೋನಿರಾಜ್, ಚಿಕ್ಕತಮೇಗೌಡ, ಗಂಜಾಂ ಆಯುಬ್, ದಾಸ ಪ್ರಕಾಶ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ವಿವಿಧ ಧರ್ಮಗಳ ಮುಖಂಡರು ಒಂದಾಗಿ ವಿವೇಕಾನಂದರ ಜಯಂತಿ ಆಚರಿಸುವ ಮೂಲಕ ಶ್ರೀರಂಗಪಟ್ಟಣದಲ್ಲಿ ಭಾವೈಕ್ಯತೆಯ ಸಂದೇಶವನ್ನು ಸಾರಲಾಯಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಶಸ್ಸಿನ ಶಿಖರವನ್ನೇರಲು ಉತ್ತಮ ಚಿಂತನೆಗಳಿಂದ ಮಾತ್ರ ಸಾಧ್ಯ: ಪದ್ಮಶ್ರೀ ಪುರಸ್ಕೃತ ಎಂ ಅಂಕೇಗೌಡ ಅಭಿಮತ

ವಿದ್ಯಾರ್ಥಿಗಳು ಮನರಂಜನೆಗಳಿಂದ ದೂರ ಉಳಿದು ಉತ್ತಮ ಚಿಂತನೆಗಳತ್ತ ಮುಖ ಮಾಡಿದರೆ ಮಾತ್ರ...

ಕೆ ಆರ್ ಪೇಟೆ | ಅಕ್ಕಿಹೆಬ್ಬಾಳು ಶಾಲೆ ಜಾಗ ಒತ್ತುವರಿ ಆರೋಪ; ಗ್ರಾಮಸ್ಥರಿಂದ ಶಿಕ್ಷಣ ಸಚಿವರಿಗೆ ದೂರು

ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ...