ಶ್ರೀರಂಗಪಟ್ಟಣ | ಸತತ ಅಧ್ಯಯನ, ಪರಿಶ್ರಮದಿಂದ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ: ಡಾ. ಸುಜಾತ ಅಕ್ಕಿ

Date:

​ಮಹಿಳೆಯರು ಸಬಲರಾಗಬೇಕಾದರೆ ಸತತ ಅಧ್ಯಯನ ಮತ್ತು ಪರಿಶ್ರಮ ಇರಬೇಕಾಗುತ್ತದೆ. ಆಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸಲು ಪರಿಶ್ರಮ ಹಾಗೂ ಆಯಾ ಕ್ಷೇತ್ರದ ವಿಚಾರಗಳ ಬಗ್ಗೆ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಾಹಿತಿ ಹಾಗೂ ಜಾನಪದ ವಿದ್ವಾಂಸರಾದ ಡಾ. ಸುಜಾತ ಅಕ್ಕಿ ಅಭಿಪ್ರಾಯಪಟ್ಟರು.

​ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸಂಜಯ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

“ಮಹಿಳೆಯರು ಪ್ರತಿಯೊಂದು ರಂಗದಲ್ಲೂ ಯಶಸ್ಸು ಸಾಧಿಸಲು ಜ್ಞಾನಾರ್ಜನೆ ಮತ್ತು ಶ್ರದ್ಧೆ ಅತ್ಯಗತ್ಯ” ಎಂದು ಕಿವಿಮಾತು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಿರಿಯ ಗಾಂಧಿವಾದಿ ಡಾ. ಬಿ. ಸುಜಯ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಆಧುನಿಕತೆಗೆ ತಕ್ಕಂತೆ ಹೊಸ ರೂಪ ಪಡೆದುಕೊಳ್ಳುತ್ತಿವೆ” ಎಂದು ಕಳವಳ ವ್ಯಕ್ತಪಡಿಸಿದರು.

​”ನಾವು ಪ್ರಗತಿಶೀಲರಾಗಿದ್ದೇವೆ, ಮಾಡರ್ನ್ ಆಗಿದ್ದೇವೆಂದು ಹೇಳಿಕೊಳ್ಳುತ್ತೇವೆ. ಆದರೆ ಅದಕ್ಕೆ ತಕ್ಕಂತೆ ಮಹಿಳೆಯರ ಸಮಸ್ಯೆಗಳೂ ಕೂಡ ಮಾಡರ್ನ್ ಆಗುತ್ತಿವೆ. ಹಿಂದೆ ಮನೆಯ ನಾಲ್ಕು ಗೋಡೆಗಳಿಗೆ ಅಥವಾ ಅಕ್ಕಪಕ್ಕದವರ ಟೀಕೆಗಳಿಗೆ ಸೀಮಿತವಾಗಿದ್ದ ನಿಂದನೆಗಳು, ಇಂದು ಸೋಷಿಯಲ್ ಮೀಡಿಯಾ ಮೂಲಕ ವಿಶ್ವಾದ್ಯಂತ ವ್ಯಾಪಿಸುತ್ತಿವೆ. ಸ್ವಲ್ಪ ಪ್ರಸಿದ್ಧರಾದ ಮಹಿಳೆಯರಂತೂ ಅಪಾರ ಟೀಕೆ, ನಿಂದನೆಗಳನ್ನು ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ” ಎಂದು ಪ್ರಸ್ತು ವಾಸ್ತವತೆಯನ್ನು ಬಿಚ್ಚಿಟ್ಟರು.

​”ಎಲ್ಲ ಕ್ಷೇತ್ರಗಳಲ್ಲೂ ಅಧಿಕಾರಿಶಾಹಿ ಪುರುಷರು ಪ್ರಧಾನರಾಗಿದ್ದಾರೆ. ಕುಟುಂಬದಲ್ಲಿ ಗಂಡ-ಹೆಂಡತಿ ಇಬ್ಬರೂ ಪರಸ್ಪರ ಕೈ ಹಿಡಿದು ಸಾಗದಿದ್ದರೆ ಇಬ್ಬರೂ ಬೀಳುತ್ತಾರೆ. ನಾವು ಹೊರಜಗತ್ತಿಗೆ ಬಹಳ ಸುಖ-ಸಂತೋಷದಿಂದಿದ್ದೇವೆಂದು ಬಿಂಬಿಸಿಕೊಂಡರೂ, ವಾಸ್ತವದಲ್ಲಿ ಮನೆಯೊಳಗೆ ಪರಸ್ಪರ ಗೌರವ ಹಾಗೂ ಅರ್ಥೈಸಿಕೊಳ್ಳುವಿಕೆಯ ಕೊರತೆ ಎದ್ದುಕಾಣುತ್ತಿದೆ. ನಮ್ಮ ಈ ಸೋಲಿಗೆ ಆರ್ಥಿಕ ಪರಿಸ್ಥಿತಿ ಕಾರಣವಲ್ಲ, ಬದಲಾಗಿ ಒಬ್ಬರಿಗಿಂತ ಮತ್ತೊಬ್ಬರು ಮೇಲು ಎಂಬ ‘ಶ್ರೇಷ್ಠತೆಯ ವ್ಯಸನ’ವೇ ಮುಖ್ಯ ಕಾರಣ” ಎಂದು ವಿಶ್ಲೇಷಿಸಿದರು.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಮಹಿಳೆ ಹಗಲಿರುಳು ದಣಿಯುವ  ಶ್ರಮಜೀವಿ : ನ್ಯಾ. ವಿ ಹನುಮಂತಪ್ಪ

“ಸಮಾಜ ಮತ್ತು ಕುಟುಂಬದಲ್ಲಿ ಅಧಿಕಾರಶಾಹಿ ಮನೋಭಾವ ಬಿಟ್ಟು, ಪರಸ್ಪರ ಗೌರವ ನೀಡಿದಾಗ ಮಾತ್ರ ನೈಜ ಪ್ರಗತಿ ಹಾಗೂ ಮಹಿಳೆಯರಿಗೆ ಪ್ರಾಧಾನ್ಯತೆ ದೊರೆಯುತ್ತದೆ” ಎಂದು ತಿಳಿಸಿದರು.

​ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷೆ ಎನ್ ಸರಸ್ವತಿ, ಶ್ರೀರಂಗನಾಯಕಿ ಸಮಾಜದ ಅಧ್ಯಕ್ಷೆ ಬಿ ಎಸ್ ವಿಶಾಲಾಕ್ಷಿ, ಶೀಲಾ ನಂಜುಂಡಯ್ಯ, ಮಂಜುಳಾ, ಸುಮಂಗಲಿ, ವಕೀಲರಾದ ಎಸ್ ಆರ್ ಸಿದ್ದೇಶ್, ಸಿ ಎಸ್ ವೆಂಕಟೇಶ್, ಕೆ ಎಸ್ ಜಯಶಂಕರ್, ಪ್ರೊ. ಮಹದೇವ್, ಚಿಕ್ಕತಮ್ಮೆಗೌಡ, ಧನಂಜಯ, ಎಸ್ ಎಂ ಶಿವಕುಮಾರ್, ರಂಗನಾಥ್ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆ ಆರ್ ಪೇಟೆ | ಅಕ್ಕಿಹೆಬ್ಬಾಳು ಶಾಲೆ ಜಾಗ ಒತ್ತುವರಿ ಆರೋಪ; ಗ್ರಾಮಸ್ಥರಿಂದ ಶಿಕ್ಷಣ ಸಚಿವರಿಗೆ ದೂರು

ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ...

​ಮೊಬೈಲ್ ಗೀಳಿಗೆ ಬಿದ್ದು ಪುಸ್ತಕಗಳ ಕಡೆಗಣಿಸದಿರಿ: ವಿದ್ಯಾರ್ಥಿಗಳಿಗೆ ‘ಪುಸ್ತಕದ ಮನೆ’ ಅಂಕೆಗೌಡ ಕಿವಿಮಾತು

​ಪ್ರಪಂಚದ ಯಾವುದೇ ಕ್ಷೇತ್ರದಲ್ಲಿಯೂ ಹಣ, ಅಂತಸ್ತು ಸಂಪಾದನೆಗಿಂತ ಜ್ಞಾನ ಸಂಪಾದನೆ ಅತಿ...