ಉದ್ಯೋಗದ ಹಕ್ಕಿಗಾಗಿ ಡಿವೈಎಫ್ಐ ಯುವಜನ ಜಾಥಾ ನಡೆಯುತ್ತಿದ್ದು, ಸೋಮವಾರ ವಾಂಮಜೂರು ಜಂಕ್ಷನ್‌ನಿಂದ ಎರಡನೇ ದಿನದ ಮೆರವಣಿಗೆ ಪ್ರಾರಂಭಗೊಂಡಿದೆ. ಖ್ಯಾತ ಯುವ ಕವಿ ವಿಲ್ಸನ್ ಕಟೀಲ್ ಎರಡನೇ ದಿನದ ಜಾಥಾಕ್ಕೆ ಚಾಲನೆ ನೀಡಿದ್ದಾರೆ.
ಈ ವೇಳೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಹಿರಿಯ ನೇತಾರ ಕರಿಯ, ಕೆ ಶೇಖರ್ ವಾಮಂಜೂರು, ಸುನೀಲ್ ಕುಮಾರ್ ಬಜಾಲ್, ವಿದ್ದು ಉಚ್ಚಿಲ್, ದಿನೇಶ್ ಬೊಂಡಂತಿಲ, ಚಂದ್ರಹಾಸ ತಾರಿಗುಡ್ಡೆ, ಭವಾನಿ, ಕೊರಗ ಸಮುದಾಯದ ಮಂಜುಳಾ, ಸುನೀತಾ ಸೇರಿದಂತೆ ಬಹುತೇಕ ಮಂದಿ ಪ್ರಮುಖರು ಇದ್ದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ಮತಗಳ್ಳತನ ವಿರೋಧಿಸಿ ಪ್ರತಿಭಟನೆ: ಕಾಂಗ್ರೆಸ್ ಬಣಗಳ ನಡುವೆ ಗಲಾಟೆ
ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ನವೀನ್ ಕೊಂಚಾಡಿ, ನಿತಿನ್ ಕುತ್ತಾರ್, ಚರಣ್ ಪಂಜಿಮೊಗರು, ಮಾಧುರಿ ಬೋಳಾರ ಸೇರಿದಂತೆ ಮುಂತಾದವರು ಡಿವೈಎಫ್ಐ ಯುವಜನ ಜಾಥಾದ ನೇತೃತ್ವ ವಹಿಸಿದ್ದರು.





