ಮಂಗಳೂರು | ವ್ಯಕ್ತಿಗಿಂತ ಮೌಲ್ಯ ಮುಖ್ಯವಾಗಬೇಕು: ಸುಧೀರ್ ಕುಮಾರ್ ಮುರೊಳ್ಳಿ

Date:

“ವ್ಯಕ್ತಿಯು ಹುಟ್ಟಿನಿಂದ ಶ್ರೇಷ್ಠನಾಗುವುದಿಲ್ಲ, ಬದಲಾಗಿ ಕರ್ಮದಿಂದ ಶ್ರೇಷ್ಠನಾಗುತ್ತಾನೆ ಎಂದು ಪ್ರತಿಪಾದಿಸಿದ ಪ್ರವಾದಿಯವರು ವ್ಯಕ್ತಿ ನಿರಪೇಕ್ಷಿತ ಸಮಾಜವನ್ನು ಬೆಳೆಸಿದರು. ನಾವು ಇಸ್ಲಾಮನ್ನು ಅರಿಯಬೇಕಾದುದು ರಾಜಕೀಯದಿಂದಲ್ಲ, ಬದಲಾಗಿ ಇಸ್ಲಾಮಿನ ಸಂದೇಶಗಳಿಂದ ಎಂಬುದನ್ನು ಜನರಿಗೆ ನಾವು ತಿಳಿಸಬೇಕಾದ ಅಗತ್ಯವಿದೆ” ಎಂದು ಖ್ಯಾತ ನ್ಯಾಯವಾದಿ ಮತ್ತು ಸಾಮಾಜಿಕ ಹೋರಾಟಗಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.

ಅವರು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರ ಶಾಖೆಯು ‘ಪ್ರವಾದಿ ಮುಹಮ್ಮದ್(ಸ) ಪರಿಚಯಿಸಿದ ಆದರ್ಶ ಸಮಾಜ ಮತ್ತು ಇಂದಿನ ಸವಾಲುಗಳು’ ಎಂಬ ವಿಷಯದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಿದ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು.

“ಬಹಳ ಮುಂದುವರಿದ ರಾಷ್ಟ್ರವೆನಿಸಿಕೊಂಡಿದ್ದ ಅಮೇರಿಕಕ್ಕೆ ಕರಿವರ್ಣೀಯ ಸ್ತ್ರೀಯನ್ನು ಅಧ್ಯಕ್ಷೆಯನ್ನಾಗಿ ಮಾಡಲಾಗದುದಕ್ಕೆ ವರ್ಣ ಪಕ್ಷಪಾತ ಕಾರಣವಾಗಿದೆ. ಅದೇ ವೇಳೆ ಕರಿಯ, ಬಿಳಿಯ ಭೇದವಿಲ್ಲದೆ ಎಲ್ಲರೂ ಸಮಾನರೆಂದು ಕಲಿಸಿದ ಪ್ರವಾದಿಯವರು ವಿಶ್ವ ಮಾನವ ವಿಚಾರಧಾರೆಯನ್ನು ಕಲಿಸಿದರು. ಮದ್ಯ ವಿರೋಧಿ ಹೋರಾಟಕ್ಕೆ ಗಾಂಧೀಜಿಯವರಿಗೆ ಪ್ರೇರಣೆಯಾದದ್ದೂ ಪ್ರವಾದಿಯವರ ಸಂದೇಶವಾಗಿತ್ತು. ವ್ಯಕ್ತಿಗಿಂತ ಮೌಲ್ಯ ಮುಖ್ಯ ಎಂದು ಕಲಿಸಿದ ಬಸವಣ್ಣ ಮತ್ತು ಪ್ರವಾದಿಯವರ ಆದರ್ಶವನ್ನು ನಾವು ಪಾಲಿಸಬೇಕಾಗಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2024 11 09 at 12.36.12 PM

ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮಾತನಾಡಿ, “ಪ್ರವಾದಿಯವರು ಕೇವಲ ಬೋಧಕರಾಗಿರಲಿಲ್ಲ. ನುಡಿದಂತೆ ನಡೆದು ತೋರಿಸಿದ ಅವರು ನಿರ್ಮಲ ಚಾರಿತ್ರ್ಯದ ವ್ಯಕ್ತಿತ್ವವನ್ನು ಬೆಳೆಸಿದರು. ಸತ್ಯ, ನ್ಯಾಯ, ಸಮಾನತೆ ತುಂಬಿದ ಸಮಾಜ ನಿರ್ಮಿಸಿದರು. ದೇವನಿಗೆ ಹತ್ತಿರವಾಗಲು ಮನುಷ್ಯ ಸನ್ಯಾಸವನ್ನು ಸ್ವೀಕರಿಸಬೇಕಿಲ್ಲ ಬದಲಾಗಿ ಸಾಂಸಾರಿಕರಾಗಿ, ವ್ಯಾಪಾರಿಗಳಾಗಿ ಆಧ್ಯಾತ್ಮಿಕತೆಯನ್ನು ಬೆಳೆಸಬಹುದಾಗಿದೆ” ಎಂದು ಹೇಳಿದರು.

ಮತ್ತೋರ್ವ ಅತಿಥಿಯಾಗಿ ಭಾಗವಹಿಸಿದ್ದ ಧಾರ್ಮಿಕ ಪರಿಷತ್ತು ಕರ್ನಾಟಕ ದ.ಕ. ಜಿಲ್ಲಾ ಘಟಕದ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ , “ಧರ್ಮ ಎಂದರೆ ಮೌಲ್ಯಗಳು. ಮೌಲ್ಯಗಳನ್ನು ಅರ್ಥ ಮಾಡಿ ಬದುಕಿದರೆ ಆದರ್ಶ ಸಮಾಜ ನಿರ್ಮಾಣವಾಗುತ್ತದೆ, ಭಾವೈಕ್ಯತೆ ಉಂಟಾಗುತ್ತದೆ. ಇಲ್ಲಿ ಕೆರಳಿಸುವವರು ಬಹಳ ಜನ ಇದ್ದಾರೆ, ನೀವು ಕೆರಳಿದಷ್ಟೂ ಅವರಿಗೆ ಲಾಭವಾಗುತ್ತದೆ. ಆದರೆ ನೀವು ಕೆರಳದಿರುವುದೇ ಶ್ರೇಯಸ್ಕರ. ನನ್ನ ಆರಾಧನೆ ನನಗೆ, ನಿಮ್ಮ ಆರಾಧನೆ ನಿಮಗೆ. ಆದರೆ ಪರಸ್ಪರ ಒಳಿತುಗಳನ್ನು ಸ್ವೀಕರಿಸೋಣ. ಧರ್ಮದ ಮೂಲ ಗುಣಗಳನ್ನು ಕೆಡಿಸದೆ ಪರಸ್ಪರ ಭಾವೈಕ್ಯತೆಯಿಂದ ಕೂಡಿ ಬಾಳೋಣ” ಎಂದರು.

WhatsApp Image 2024 11 09 at 12.36.08 PM

“ಇಂದು ಸಮಾಜ ಕೆಟ್ಟಿದೆ, ನೈತಿಕತೆ ಶಿಥಿಲಗೊಂಡಿದೆ ಎಂದಾದರೆ ನಮ್ಮ ಹೊಣೆಗಾರಿಕೆ ಏನಾದರೂ ಇದೆಯಾ, ನಮ್ಮ ಜವಾಬ್ದಾರಿ ಏನು, ಪಾಲು ಎಷ್ಟು ಎಂದು ಪ್ರಶ್ನಿಸಿಕೊಳ್ಳಬೇಕು. ಎಲ್ಲೋ ಇರುವ ವ್ಯಕ್ತಿಯ ಸಮಸ್ಯೆಗೆ ನಾವು ಸ್ಪಂದಿಸಿ ಮರುಕಪಡುತ್ತೇವೆ ಎಂದಾದರೆ ನಾವೆಲ್ಲಾ ಒಂದು ಎಂದು ಅರ್ಥ. ನಮ್ಮ ಸಮುದಾಯದ ಮಕ್ಕಳು, ಯುವಕರು ತಪ್ಪು ದಾರಿ ಹಿಡಿದರೆ ನಾವೇ ತಿದ್ದಿ, ಮಾರ್ಗದರ್ಶನ ಮಾಡಿ ಸರಿಪಡಿಸೋಣ. ಪ್ರತಿಯೊಂದು ಧರ್ಮಗಳನ್ನು ಗೌರವಿಸಿ, ಅದರಲ್ಲಿನ ಉತ್ತಮ ಅಂಶಗಳನ್ನು ಸ್ವೀಕರಿಸಿ ಅಳವಡಿಸಿಕೊಳ್ಳೋಣ” ಎಂದು ಕರೆ ನೀಡಿದರು.

ಇದನ್ನು ಓದಿದ್ದೀರಾ? 330 ರೂ. ಕಿಟ್‌ಗೆ 2,200 ರೂ. ಪಾವತಿಸಿದ್ದ ಬಿಎಸ್‌ವೈ ಸರ್ಕಾರ; ಏಳು ಪಟ್ಟು ಹೆಚ್ಚು ಹಣಕ್ಕೆ ಕಾರಣಗಳೇ ಇಲ್ಲ!

ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಘಟಕ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮಾತನಾಡಿ, “ಪ್ರವಾದಿಯವರು ಆರನೆಯ ಶತಮಾನದಲ್ಲಿ ಜಗತ್ತಿಗೆ ಮಾದರಿಯಾದ ಸಮಾಜವನ್ನು ಕಟ್ಟಿ ಬೆಳೆಸಿದ್ದರು. ಆ ಸಮಾಜವು ಎಲ್ಲ ಕೆಡುಕುಗಳಿಂದ ಮುಕ್ತವಾದ, ಎಲ್ಲ ಒಳಿತುಗಳನ್ನು ತುಂಬಿದ ಸಮಾಜವಾಗಿತ್ತು” ಎಂದರು.

WhatsApp Image 2024 11 09 at 12.36.11 PM 1

“ಅಪರಾಧಗಳ ಹಿನ್ನೆಲೆ ಜನಾಂಗೀಯತೆ. ನಾನು ನಿನಗಿಂತ ಶ್ರೇಷ್ಠ ಎಂಬ ಭಾವನೆ. ಇದು ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಮುಖ್ಯ ಕಾರಣ. ನೀವೆಲ್ಲರೂ ಆದಮರಿಂದ ಹುಟ್ಟಿದವರು ಮತ್ತು ಆದಮರಾದರೋ ಮಣ್ಣಿನಿಂದ ಸೃಷ್ಟಿಸಲ್ಪಟ್ಟವರು ಎಂಬ ಪ್ರವಾದಿವಚನದಂತೆ ಸಕಲರೂ ಸಮಾನರು ಎಂಬ ಭಾವನೆ ಬೆಳೆದು ಬಂದರೆ ಆದರ್ಶ ಸಮಾಜ ನಿರ್ಮಾಣ ಸಾಧ್ಯ” ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಶರೀಫ್ ನೀರ್ಮುಂಜೆಯವರು ಸ್ತುತಿಗೀತೆ ಹಾಡಿದರು. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರ ಶಾಖೆಯ ಅಧ್ಯಕ್ಷರಾದ ಮುಹಮ್ಮದ್ ಇಸ್ಹಾಕ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಮುಹಮ್ಮದ್ ಅಲಿ ಕಮ್ಮರಡಿಯವರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದಿಂದ ಹಮ್ಮಿಕೊಂಡಿದ್ದ ‘ನೈತಿಕತೆಯೇ ಸ್ವಾತಂತ್ರ್ಯ’ ಅಭಿಯಾನದ ಪ್ರಯುಕ್ತ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

WhatsApp Image 2024 11 09 at 12.36.11 PM 2
WhatsApp Image 2024 11 09 at 12.36.12 PM 1
WhatsApp Image 2024 11 09 at 12.36.13 PM
WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...