ಸಾರ್ವಜನಿಕರು ಸೈಬರ್ ಅಪರಾಧ ಮತ್ತು ಅದರ ವಂಚನೆಗೆ ಬಲಿಯಾಗುತ್ತಿದ್ದಾರೆ. ಸೈಬರ್ ವಂಚನೆಯಿಂದ ಕೇವಲ ಹಣ ಮಾತ್ರವಲ್ಲ ಮಾನಸಿಕ ನೆಮ್ಮದಿಯನ್ನೂ ಕಳೆದುಕೊಳ್ಳುತ್ತಿದ್ದಾರೆ ಎಂದು ಮಂಗಳೂರು ನಗರದ ಖ್ಯಾತ ವಕೀಲ ಸರ್ಫರಾಝ್ ಹೇಳಿದರು
ದಕ್ಷಿಣ ಕನ್ನಡ ಜಿಲ್ಲೆಯ ಪಕ್ಕಲಡ್ಕದ ಮಾರ್ಹೂಮ್ ಇಬ್ರಾಹಿಂ ಸಯೀದ್ ಸಭಾಂಗಣದಲ್ಲಿ ಜಮಾಅತೇ ಇಸ್ಲಾಮಿ ವತಿಯಿಂದ ಹಮ್ಮಿಕೊಂಡಿದ್ದ ಸೈಬರ್ ಅಪರಾಧದ ಬಗ್ಗೆ ಜನ ಜಾಗೃತಿ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಂಕನಾಡಿ ಪೋಲಿಸ್ ಠಾಣೆಯ ಉಪ ನಿರೀಕ್ಷಕ ಯೋಗೇಶ್ವರ್ ಮಾತನಾಡಿ, “ಸೈಬರ್ ಅಪರಾಧ, ಮಾದಕ ವ್ಯಸನ, ವಂಚನೆ ಇತ್ಯಾದಿಗಳ ಬಗ್ಗೆ ಹೆತ್ತವರು ತಮ್ಮ ಮಕ್ಕಳ ಮೇಲೆ ಒಂದು ನಿಗಾ ಇಟ್ಟಿರಬೇಕು. ಅರೆಸ್ಟ್ ಆದ ಮೇಲೆ ಖೇದಿಸದೆ ಮಕ್ಕಳನ್ನು ಒಳ್ಳೆಯ ವಾತಾವರಣದಲ್ಲಿ ಬೆಳೆಸಬೇಕು. ಅವರ ಗೆಳೆತನ, ಪರಿಸರದ ಬಗ್ಗೆ ತಿಳಿದಿರಬೇಕು” ಎಂಬುದರ ಬಗ್ಗೆ ತನ್ನ ಅನುಭವಕ್ಕೆ ಬಂದ ಹಲವಾರು ಘಟನೆಗಳನ್ನು ಹೇಳಿ ಪೋಷಕರಿಗೆ ಜಾಗೃತಿ ಮೂಡಿಸಿದರು.
ಸೈಬರ್ ಅಪರಾಧಕ್ಕೆ ಅಥವಾ ವಂಚನೆಗೆ ಒಳಗಾದಾಗ ಸಾರ್ವಜನಿಕರು ಹೇಗೆ ಅದರಿಂದ ರಕ್ಷಣೆ ಹೊಂದಬಹುದು ಅದರ ಆಳ ಎಷ್ಟಿದೆ, ನಾವು ಹೇಗೆ ಜಾಗೃತರಾಗಬೇಕು ಎಂಬ ಇತ್ಯಾದಿ ವಿಷಯಗಳನ್ನು ಕಾನ್‌ಸ್ಟೆಬಲ್ ಪ್ರಶಾಂತ್ ವಿವರಿಸಿದರು.
ಪೋಲೀಸರಾದ ಪ್ರದೀಪ್ ಮತ್ತು ನಟರಾಜ್‌ರವರು ಸಾರ್ವಜನಿಕ ಸಂಶಯ ಮತ್ತು ಪ್ರಶ್ನೋತ್ತರದಲ್ಲಿ ಭಾಗವಹಿಸಿದರು.
ಇದನ್ನೂ ಓದಿದ್ದೀರಾ? ಹೊಲಯ ಸಮುದಾಯದ ವಿಶಿಷ್ಟ ಸಾಂಸ್ಕೃತಿಕ ಆಚರಣೆ ʼಬಲಿ ಚಕ್ರವರ್ತಿ ಚಟ್ಟʼದ ರಹಸ್ಯ ಗೊತ್ತೇ?
ಮುಖ್ಯ ಅತಿಥಿ ಪಕ್ಕಲಡ್ಕ ಜುಮಾ ಮಸೀದಿಯ ಮೊಹಿಯುದ್ದೀನ್, ಅಧ್ಯಕ್ಷ ಜನಾಬ್ ಅಲ್ತಾಫ್ ಇಸ್ಮಾಯಿಲ್, ಜಮಾಅತೇ ಇಸ್ಲಾಮಿ ಮಂಗಳೂರು ದಕ್ಷಿಣ ಘಟಕದ ಕಾರ್ಯದರ್ಶಿ ಜನಾಬ್ ಸಮೀರ್ ದೀನ್ ಅಧ್ಯಕ್ಷತೆ ವಹಿಸಿದ್ದರು. ಮುಸ್ ಅದ್ ಕಿರಾಅತ್ ಪಠಿಸಿದರು, ಜಮಾಅತೇ ಇಸ್ಲಾಮಿ ಹಿಂದ್ ಪಕ್ಕಲಡ್ಕ, ವರ್ತುಲ ಸಂಚಾಲಕ ಸುಲೈಮಾನ್ ಪಕ್ಕಲಡ್ಕ, ಧನ್ಯವಾದವಿತ್ತರು. ಕಾರ್ಯದರ್ಶಿ ಅಶೀರುದ್ದೀನ್ ಆಲಿಯಾ ನಿರೂಪಿಸಿದರು. ಬಿಲಾಲ್ ಪಕ್ಕಲಡ್ಕ, ಮೊಯಿದಿನ್ ಪಕ್ಕಲಡ್ಕ, ಸಲೀಮ್ ಮಲಾರ್ ಸಹಕರಿಸಿದರು. ಮಹಿಳಾ ಘಟಕದ ಸಂಚಾಲಕಿ ಝೀನತ್ ಮೊಯಿದಿನ್ ಉಪಸ್ಥಿತರಿದ್ದರು.





