ಹೆದ್ದಾರಿಯಲ್ಲಿರುವ ಗುಂಡಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ಮಂಗಳೂರಿನ ಕೂಳೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಹತ್ತಿರದ ಎ ಜೆ ಆಸ್ಪತ್ರೆಯ ಸಿಬ್ಬಂದಿ ಮಾಧವಿ (44) ಮೃತ ಮಹಿಳೆ.
ಕೆಲಸದ ನಿಮಿತ್ತ ಸುರತ್ಕಲ್ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಮಂಗಳೂರು ಕಡೆಗೆ ಬರುತ್ತಿದ್ದ ಆಕೆ ಹೆದ್ದಾರಿಯಲ್ಲಿದ್ದ ಗುಂಡಿಯ ಪರಿಣಾಮ ಸ್ಕೂಟರ್ ಸಮೇತ ಹೆದ್ದಾರಿಯಲ್ಲಿ ಬಿದ್ದಿದ್ದಾರೆ. ಈ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಮೀನಿನ ಲಾರಿ ಮಹಿಳೆಯ ಮೇಲೆ ಹರಿದು ಹೋಗಿದೆ. ಈ ಪರಿಣಾಮ ಗಂಭೀರ ಗಾಯಗೊಂಡಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಲಾರಿ ಚಾಲಕ ಮೊಹಮ್ಮದ್ ಫಾರೂಕ್ ನಿರ್ಲಕ್ಷ ಹಾಗೂ ದುಡುಕುತನದಿಂದ ವಾಹನ ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಮಂಗಳೂರು | ಎಸ್‌ಐಓದಿಂದ ‘ಮಾದರಿ ಶಿಕ್ಷಕ ಪೈಗಂಬರ್ ಮುಹಮ್ಮದ್ (ಸ)’ ಅಭಿಯಾನಕ್ಕೆ ಚಾಲನೆ





