ಉಡುಪಿ | ನಾಪತ್ತೆಯಾದ ವ್ಯಕ್ತಿ‌ ಶವವಾಗಿ ಪತ್ತೆ, ಪ್ರಕರಣ ದಾಖಲು

Date:

ಗುಡ್ಡದ ಇಳಿಜಾರು ತಗ್ಗು ಕಾಡು ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಗಂಡಸಿನ ಶವವು, ಬುಧವಾರ ತಡಸಂಜೆಯಲ್ಲಿ ಪತ್ತೆಯಾಗಿರುವ ಘಟನೆಯು ನಡೆದಿದೆ. ಮೃತ ವ್ಯಕ್ತಿಯನ್ನು ವಾರದ ಹಿಂದೆ ನಾಪತ್ತೆಯಾಗಿರುವ‌ ಮಣಿಪಾಲ ಪ್ರಗತಿನಗರದ ನಿವಾಸಿ ಚೌರಪ್ಪ ದಂಡಾವತಿ (51ವ) ಎಂದು ಗುರುತಿಸಲಾಗಿದೆ. ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ.‌ ಘಟನಾ ಸ್ಥಳದಲ್ಲಿದ್ದು ಮಣಿಪಾಲ ಪೋಲಿಸ್ ಠಾಣೆಯ‌ ಎ ಎಸ್ ಐ ವಿವೇಕಾನಂದ, ಎ ಎಸ್ ಐ ವಿಜಯ, ಪ್ರಸನ್ನ ಉಪ್ಪೂರು, ಸಂಗೀತ ಮಣಿಪಾಲ ಮಹಜರು ಪ್ರಕ್ರಿಯೆ ನಡೆಸಿದರು.

ಶವ ಪತ್ತೆಯಾದ ಸ್ಥಳವು ಗಿಡಗಂಟಿ ಬೆಳೆದು ಪೊದೆಗಳಾಗಿರುವ ಕಾಡು ಪ್ರದೇಶವಾಗಿತ್ತು. ಕತ್ತಲಲ್ಲಿ ಶವವನ್ನು ಆಂಬುಲೆನ್ಸ್ ವಾಹನ ನಿಲುಗಡೆ ಇರುವ ಸ್ಥಳದೆಡೆಗೆ‌ ಶವ ಹೊತ್ತು ತರಲು ಪೋಲಿಸರು ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರು ಕತ್ತಲಲ್ಲಿ ಪ್ರಯಾಶ ಪಡಬೇಕಾಯಿತು. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲು, ಅಜ್ಜರಕಾಡು ಜಿಲ್ಲಾಸ್ಪತ್ರೆಯ ವೈದಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಒಳಕಾಡುವರು ನೆರವಾದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...