ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ ಇವರ ಆಶ್ರಯದಲ್ಲಿ ಉದ್ಯಾವರ ಬಲಾಯಿ ಪಾದೆ ಹೆದ್ದಾರಿ ಬಳಿ ನಿರ್ಮಾಣಗೊಳ್ಳಿರುವ ಶ್ರೀ ನಾರಾಯಣಗುರು ಉದ್ಯಾನವನದ ಬಳಿ ದೀಪಾವಳಿ ಹಬ್ಬದ ಸಂಭ್ರಮಕ್ಕೆ ನಾರಾಯಣ ಗುರುಗಳ ಬೃಹತ್ ಗೂಡುದೀಪ ಹಾರಿಸುವ ಮೂಲಕ ಚಾಲನೆ ನೀಡಿದ ಕರ್ನಾಟಕ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಯವರು ಶ್ರೀ ನಾರಾಯಣ ಗುರು ಯುವ ವೇದಿಕೆ ವತಿಯಿಂದ ನಿರ್ಮಾಣ ಗೊಳ್ಳಲಿರುವ ಸಾರ್ವಜನಿಕ ಶ್ರೀ ನಾರಾಯಣ ಗುರು ಉದ್ಯಾನವನದ ನಿರ್ಮಾಣ ನಮ್ಮೆಲ್ಲರ ಮೊದಲ ಆಧ್ಯತೆ, ಅದರ ನಿರ್ಮಾಣಕ್ಕೆ ಸಕಲ ಸಮಾಜ ಬಾಂಧವರು ಸಹಕಾರ ನೀಡಬೇಕು ಮತ್ತು ಕರ್ನಾಟಕ ಸರಕಾರದ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಈ ಯೋಜನೆಗೆ ತನ್ನ ಸಂಪೂರ್ಣ ಸಹಕಾರ ನೀಡಲಿದೆ ಎಂದು ಕೆಲಸಕ್ಕೆ ಶುಭ ಹಾರೈಸಿದರು ಮತ್ತು ನಾಡಿನ ಸಮಸ್ತ ಬಾಂಧವರಿಗೆ ದೀಪಾವಳಿ ಹಬ್ಬದ ಶುಭಾಶಯ ಸಲ್ಲಿಸಿದರು.
ಈ ಸಂಧರ್ಭದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಆಗಮಿಸಿದ ಮಂಜುನಾಥ ಪೂಜಾರಿ ಯವರಿಗೆ ಸನ್ಮಾನ ಮಾಡಲಾಯಿತು, ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ್ ಹೇರೂರು, ಉಡುಪಿ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಪೂಜಾರಿ, ನಾರಾಯಣ ಗುರು ಯುವ ವೇದಿಕೆ ಗೌರವಾಧ್ಯಕ್ಷರಾದ ಸದಾಶಿವ ಅಮೀನ್ ಕಟ್ಟೆ ಗುಡ್ಡೆ, ದಿನೇಶ್ ಜತ್ತನ್ ಅರೂರುತೋಟ, ಕಿರಣ್ ಕುಮಾರ್ ಉದ್ಯವಾರ, ಗಿರೀಶ್ ಕುಮಾರ್, ದಿವಾಕರ್ ಉದ್ಯಾವರ, ಹರೀಶ್ ಪೂಜಾರಿ, ಮಲ್ಪೆ, ಸುನಿಲ್ ಪೂಜಾರಿ ಮಲ್ಪೆ, ಸುಜಯ್ ಪೂಜಾರಿ ನಿಟ್ಟೂರು, ಶೇಖರ್ ಕೋಟ್ಯಾನ್, ಸಾಯಿ ರಾಜ್ ಕಿದಿಯೂರು, ಸಚಿನ್ ಸಾಲ್ಯಾನ್, ಲಕ್ಷ್ಮಣ ಸನಿಲ್, ಸತೀಶ್ ಪೂಜಾರಿ, ನವೀನ್ ಪೂಜಾರಿ, ಸಂದೇಶ ಪೂಜಾರಿ, ರಾಯ್ಸ್ ಫೆರ್ನಾಂಡಿಸ್, ಗುಣಾಕರ ಸನಿಲ್, ಕೇಶವ ಸನಿಲ್, ಸುಪ್ರೀತ್ ಸುವರ್ಣ, ಇರ್ಫಾನ್, ನವೀನ್ ಪೂಜಾರಿ, ಮುಂತಾದವರು ಉಪಸ್ತಿತರಿದ್ದರು. ಶ್ರೀ ನಾರಾಯಣ ಗುರು ಯುವ ವೇದಿಕೆ ಅಧ್ಯಕ್ಷರಾದ ಮಿಥುನ್ ಅಮೀನ್ ಸ್ವಾಗತಿಸಿದರು. ದಿನೇಶ್ ಜತ್ತನ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.




