ಲಾರಿ – ಬೈಕ್ ನಡುವೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ದುರ್ಘಟನೆ ಮಾನ್ವಿ ನಗರದ ಕೆನರಾ ಬ್ಯಾಂಕ್ ಸಮೀಪ ಮಧ್ಯಾಹ್ನ 12 ಗಂಟೆ ಸುಮಾರು ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಚನ್ನಪ್ಪ ಮೇಟಿ ಗೌಡ ಎಂದು ಗುರುತಿಸಲಾಗಿದೆ. ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಡಿಕ್ಕಿಯ ಪರಿಣಾಮ ಬೈಕ್ ಸವಾರ ಚನ್ನಪ್ಪ ಲಾರಿಯ ಚಕ್ರದಡಿ ಸಿಲುಕಿ ದೇಹ ಛಿದ್ರಗೊಂಡಿರುವುದಾಗಿ ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಲಿಂಗಸೂಗೂರು | ವಸತಿ ನಿಲಯದಲ್ಲಿ ಅವ್ಯವಸ್ಥೆ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಾನ್ವಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.




