ಚರಂಡಿಯಲ್ಲಿ ವೃದ್ಧೆಯೊಬ್ಬರು ಬಿದ್ದು ಮೃತಪಟ್ಟಿರುವ ದುರ್ಘಟನೆ ಮಾನ್ವಿ ತಾಲ್ಲೂಕು ಕುರ್ಡಿ ಗ್ರಾಮದಲ್ಲಿ ನಡೆದಿದೆ.
ಗಂಗಮ್ಮ ಆರೋಲಿ (60) ಮೃತ ವೃದ್ಧೆ ಎಂದು ಗುರುತಿಸಲಾಗಿದೆ.
ಗ್ರಾಮದ ಚರ್ಚ್ ಮುಂಭಾಗ ಚರಂಡಿಯ ಗುಂಡಿಯಲ್ಲಿ ಬಿದ್ದು ಅವಘಡ ಸಂಭವಿಸಿದೆ ಎನ್ನಲಾಗಿದೆ. ಚರಂಡಿಯ ಕೆಲವು ಕಡೆ ಗುಂಡಿಗಳನ್ನು ಮುಚ್ಚದೆ ಕಾಮಗಾರಿ ಮುಗಿಸಿದ್ದಾರೆ. ಹಲವು ದಿನಗಳಿಂದ ಆ ಗುಂಡಿಯನ್ನು ಮುಚ್ಚಲು ತಿಳಿಸಿದರು ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೇವದುರ್ಗ | ರಾಜಾರೋಷ ಅವ್ಯವಹಾರ ಪ್ರಶ್ನಿಸಿದಕ್ಕೆ ಶಾಸಕಿ ಬೆಂಬಲಿಗರಿಂದ ಬೆದರಿಕೆ; ವಿಶ್ವನಾಥ ಆರೋಪ
ಮೃತರ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.





