ಸರಕಾರದ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವೇಳೆ ಪಟ್ಟಣದ ಇಲ್ಲಿನ ಬಳಗಾನೂರ ವೃತ್ತದ ಬಳಿ ಹತ್ತಿರ ಮಸ್ಕಿ ಪಿಎಸ್‌ಐ ಮತ್ತು ಸಿಬ್ಬಂದಿಗಳು ಟಿಪ್ಪರ್ (ಲಾರಿ) ಜಪ್ತಿ ಮಾಡಿದ್ದಾರೆ.
ಟಿಪ್ಪರ್ ನಲ್ಲಿ ಸರಿ ಸುಮಾರು 16.0ಕ್ಯೂಬಿಕ್ ಮೀಟರ್ ಸರಕಾರದ ಸ್ವತ್ತಾದ ಮರಳನ್ನು ಪರವಾನಿಗೆ ಪಡೆಯದೆ ನಂಬರ್ ಪ್ಲೇಟ್ ಇಲ್ಲದೆ ಕಳ್ಳತನದಿಂದ ತುಂಬಿಕೊಂಡು ಸಾಗುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಕಳ್ಳತನ ಪ್ರಕರಣ; ಇಬ್ಬರ ಬಂಧನ, 3 ತೊಲೆ ಚಿನ್ನ, 15 ತೊಲೆ ಬೆಳ್ಳಿ ಜಪ್ತಿ
ಸಿಂಧನೂರ ಕಡೆಯಿಂದ ಮಸ್ಕಿ ಪಟ್ಟಣದ ಬಳಗಾನೂರ ವೃತ್ತದ ಬಳಿ ವೇಗವಾಗಿ ಚಲಿಸುತ್ತಿದ್ದ ವೇಳೆ ಪಿಎಸ್‌ಐ ಕೆ. ರಂಗಯ್ಯ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಟಿಪ್ಪರ್ ಮಾಲೀಕ ಹಾಗೂ ಚಾಲಕ ವಿರುದ್ಧ ಮಸ್ಕಿ ಪಿಎಸ್‌ಐ ಕೆ.ರಂಗಯ್ಯ ಪ್ರಕರಣ ದಾಖಲಿಸಿ ಟಿಪ್ಪರ್ ಜಪ್ತಿ ಮಾಡಿದ್ದಾರೆ.





