ಕಾಡುಹಂದಿ‌, ಕರಡಿಗಳ ಹಾವಳಿಗೆ ಅಪಾರ ಬೆಳೆನಾಶ: ಮುಗಿಲು ಮುಟ್ಟಿದ ರೈತರ ರೋದನೆ, ಕೈಕಟ್ಟಿ ಕುಳಿತ ಅರಣ್ಯ ಇಲಾಖೆ

Date:

ರೈತ ದೇಶದ ಬೆನ್ನೆಲುಬು ಎಂಬುದು ನಿಜವಾದರೂ ಕೆಲವು ಇಲಾಖೆಗಳು ಮಾತ್ರ ರೈತರ ಹಿತ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ನಿದ್ರೆಗೆ ಜಾರಿವೆ ಎಂದರೂ ತಪ್ಪಾಗಲಾರದು ಎಂಬ ಗಂಭೀರ ಆರೋಪ ಮಾಡಿರುವ ರೈತರು, ತಮ್ಮ ಜಮೀನಿನಲ್ಲಿ ಕಾಡುಹಂದಿ‌, ಕರಡಿಗಳ ಹಾವಳಿಗೆ ಅಪಾರ ಬೆಳೆನಾಶವಾಗಿದ್ದು, ರೋಧನೆ ಮುಗಿಲು ಮುಟ್ಟುವಂತಾಗಿದೆ. ಇಷ್ಟಾದರೂ ಅರಣ್ಯ ಇಲಾಖೆ ಮಾತ್ರ ತನಗೆ ಸಂಬಂಧವಿಲ್ಲ ಎನ್ನುವಂತೆ ಕೈ ಕಟ್ಟಿ ಕುಳಿತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹರವದಿ, ಕಕ್ಕುಪ್ಪಿ, ಜರ್ಮಲಿ ಗ್ರಾಮಗಳು, ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಹೊಲಗಳಿಗೆ ಕರಡಿ, ಹಂದಿಗಳ ಹಾವಳಿ ಮಿತಿ ಮೀರಿದೆ. ಆದರೂ ಸಂಬಂಧಿಸಿದ ಅರಣ್ಯ ಇಲಾಖೆ ಅಗತ್ಯ ಕ್ರಮ ಜರುಗಿಸುತ್ತಿಲ್ಲ ಎಂಬುದು ರೈತರ ಆಕ್ರೋಶವಾಗಿದೆ.

“ಹೊಲದಲ್ಲಿನ ಮೆಕ್ಕೆಜೋಳ ಹಾಗೂ ಜೋಳದ ಫಸಲನ್ನು ಕರಡಿಗಳು, ಕಾಡುಹಂದಿಗಳು ತಿಂದು ಹಾಳು ಮಾಡಿದ್ದು, ಹತ್ತಾರು ವರ್ಷಗಳಿಂದಲೂ ಇದ್ದು, ಪ್ರತಿಬಾರಿಯಂತೆ ಈ ವರ್ಷವೂ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ. ಕಾಡುಪ್ರಾಣಿಗಳ ಹಾವಳಿ ನಿಯಂತ್ರಿಸುವಂತೆ ಹಾಗೂ ಅಗತ್ಯ ಕ್ರಮಗಳನ್ನು ಜರುಗಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆಯಾದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ” ಎಂದು ರೈತರು ದೂರಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಕರಡಿ ದಾಳಿಯಿಂದ ಬೆಳೆನಾಶ

“ಕಾಡುಹಂದಿಗಳು ಹಾಗೂ ಕರಡಿಗಳು ರೈತರ ಹೊಲಗಳಿಗೆ ನುಗ್ಗಿ, ಕಟಾವು ಹಂತದಲ್ಲಿದ್ದ ಮೆಕ್ಕೆಜೋಳ, ಜೋಳ, ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ನಾಶಪಡಿಸಿ ಅಪಾರ ಪ್ರಮಾಣದ ನಷ್ಟಕ್ಕೆ ಕಾರಣವಾಗುತ್ತಿವೆ. ಈ ಸಂಬಂಧ ಈಗಾಗಾಲೇ ಹರವದಿ ಗ್ರಾಮದ ರೈತರು, ಕೂಡ್ಲಿಗಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದು, ತಮಗಾದ ಬೆಳೆನಷ್ಟ ತುಂಬಿಕೊಡಬೇಕು. ಅದಕ್ಕಾಗಿ ಸೂಕ್ತ ಪರಿಹಾರ ನೀಡಬೇಕು” ಎಂದು ರೈತರು ಒತ್ತಾಯಿಸಿದ್ದಾರೆ.

ಕರಡಿಗಳು ಕೆಲವೊಮ್ಮೆ ಹಾಡಹಗಲಿನಲ್ಲಿಯೇ ಹೊಲದಲ್ಲಿ ಕಾರ್ಯನಿರತ, ರೈತರ ಮೇಲೆ ದಾಳಿ ಮಾಡಿ ಮಾರಣಾಂತಿಕವಾಗಿ ಗಾಯಗೊಳಿಸಿರುವ ಹಲವು ನಿದರ್ಶನಗಳಿವೆ. ರಾತ್ರಿ ಸಮಯದಲ್ಲಿ ಕಾಡುಹಂದಿಗಳ ಹಾಗೂ ಕರಡಿ ಅತಿಕ್ರಮಣ ಮಿತಿಮೀರಿದ್ದು, ಕರಡಿಗಳು, ಕಾಡುಹಂದಿಗಳು ಕಾಡು ಪ್ರದೇಶಗಳಿಂದ ಹೊರಬಂದು ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ.

ಹರವದಿ ಗ್ರಾಮ

ಫಸಲಿನ ಕಟಾವು ಸಮೀಪಿಸುತ್ತಿದ್ದಂತೆ ಕಾಡುಹಂದಿಗಳು ದಾಳಿ ಮಾಡಿ, ಮೆಕ್ಕೆಜೋಳ, ಜೋಳ ಮತ್ತು ರಾಗಿ ಸೇರಿದಂತೆ ಮುಂತಾದ ಬೆಳೆಗಳನ್ನು ತಿನ್ನುವುದಲ್ಲದೇ, ಬೆಳೆಯನ್ನು ಬೇಕಾಬಿಟ್ಟಿಯಾಗಿ ತುಳಿದು ನಾಶಪಡಿಸುತ್ತಿವೆ. ಕರಡಿ, ಹಂದಿಗಳ ದಾಳಿಗಳಿಂದ ಪ್ರತಿ ರೈತರಿಗೆ ಸಾವಿರಾರು ರೂಪಾಯಿಗಳ ನಷ್ಟ ಸಂಭವಿಸುತ್ತಿದ್ದು, ನೊಂದ ರೈತರು
ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಲಕ್ಷಾಂತರ ರೂಪಾಯಿ ಬೆಲೆಯ ಬೆಳೆನಾಶ

ತಾಲೂಕಿನ ಹರವದಿ ಗ್ರಾಮದಲ್ಲಿ ಸುಮಾರು ಐವತ್ತು ಮಂದಿ ರೈತರ ಹೊಲಗಳಿಗೆ ಕಾಡುಪ್ರಾಣಿಗಳು ಲಗ್ಗೆ ಹಾಕಿದ್ದು, ಲಕ್ಷಾಂತರ ರೂಪಾಯಿಯ ಬೆಳೆಯನ್ನು ನಾಶಪಡಿಸಿವೆ. ಓರ್ವ ರೈತ ತನ್ನ ಮೂರು ಎಕರೆಯಿಂದ ಐದು ಎಕರೆ ಜಮೀನಿನಲ್ಲಿ ಐದರಿಂದ ಹತ್ತು ಕ್ವಿಂಟಲ್‌ನಷ್ಟು ಫಸಲು ನಷ್ಟವಾಗಿದ್ದು, ಹರವದಿ ಗ್ರಾಮದ ಸಮಸ್ತ ರೈತರ ಒಟ್ಟು ಬೆಳೆನಷ್ಟ ಉಂಟಾಗಿದ್ದು, ಹತ್ತಾರು ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ದಾರೆಂದು ಅಂದಾಜಿಸಲಾಗಿದೆ.

ಕಾಡುಪ್ರಾಣಿ

ನಷ್ಟಕ್ಕೊಳಗಾಗಿರುವ ಗ್ರಾಮದ ರೈತರು ನಷ್ಟದ ಕುರಿತು ಅರಣ್ಯ ಇಲಾಖೆಗೆ ಅಗತ್ಯ ದಾಖಲೆಗಳ ಸಹಿತ ಮಾಹಿತಿ ನೀಡಿದ್ದು, ಸೂಕ್ತ ಪರಿಹಾರ ನೀಡುವಂತೆ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹರವದಿ, ಜರ್ಮಲಿ, ಕಕುಪ್ಪಿ ಗ್ರ‍ಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡುಹಂದಿ, ಕರಡಿಗಳು ಒಳಗೊಂಡಂತೆ ಇತರೆ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿದೆ. ತಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ನಾಶಪಡಿಸುತ್ತಿವೆ , ಅವು ರ‍ಾತ್ರೊರಾತ್ರಿ ಹೊಲಕ್ಕೆ ನುಗ್ಗಿ ಬೇಳ ನಾಶ ಮಾಡುತ್ತಿದ್ದು , ಇದರಿಂದಾಗಿ ರೈತರು ಅಪಾರ ಪ್ರಮ‍ಾಣದಲ್ಲಿ ನಷ್ಟಕ್ಕೆ ಈಡಾಗುತ್ತಿರುವುದಾಗಿ ರೈತರು ಅಳಲು ತೋಡಿಕೊಂಡಿದ್ದಾರೆ.

ಕಾಡುಪ್ರಾಣಿಗಳಿಂದ ಬೆಳೆಹಾನಿ

ಅರಣ್ಯ ಇಲಾಖೆಯ ವೈಫಲ್ಯ- ರೈತರ ಆಕ್ರೋಶ, ಆರೋಪ- ಕಾಡು ಪ್ರಾಣಿಗಳ ಹಾವಳಿ ಪ್ರಕರಣಗಳು ಹತ್ತು ಹಲವಾರು ವರ್ಷಗಳಿಂದಲೂ ನಡೆಯುತ್ತಿದ್ದು, ಪ್ರತಿ ವರ್ಷವೂ ಜರುಗುತ್ತಿರುವ ದುರಂತವಾಗಿದೆ. ಪ್ರತಿ ಬಾರಿಯೂ ಕ್ರಮ ಕೈಗೊಳ್ಳುವಂತೆ ಹಾಗೂ ಸೂಕ್ತ ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ ಮನವಿ ಮಾಡುತ್ತೇವೆ. ಆದರೆ ಮನವಿಯನ್ನು ಡಸ್ಟ್ ಬಿನ್‌ಗೆ ಹಾಕಿ ಸಾಗಹಾಕಲಾಗುತ್ತಿದೆಯೇ ಹೊರತು ಏನೂ ಪ್ರಯೋಜನವಾಗುತ್ತಿಲ್ಲ. ಅಪಾರ ನಷ್ಟ ಅನುಭವಿಸಿದವರಿಗೆ ಇಲಾಖೆಯಿಂದ ಬಿಡಿಗಾಸಿನ ಪರಿಹಾರ ನೀಡಲಾಗುತ್ತಿದೆಯೇ ಹೊರತು ಬೆಳೆಗಳ ರಕ್ಷಣೆಗೆ ಮುಂದಾಗುತ್ತಿಲ್ಲ. ಸರ್ಕಾರದಿಂದ ಹಾಗೂ ಅರಣ್ಯ ಇಲಾಖೆಯಿಂದ ಕಾಡು ಪ್ರಾಣಿಗಳ ಹಾವಳಿ ನಿಂಯತ್ರಿಸಲು, ಹತ್ತು ಹಲವು ಯೋಜನೆಗಳಿದ್ದು, ಅದಾವುದನ್ನು ಇಲ್ಲಿ ಜಾರಿಗೆ ತರುತ್ತಿಲ್ಲ.

ಕಾಡುಪ್ರಾಣಿಗಳು

ಬದಲಿಗೆ ಭರವಸೆಗಳ ಮಹಾಪೂರ ಹರಿಸಿ ರೈತರನ್ನು ಸಮಾಧನ ಮಾಡುವುದಕ್ಕಾಗಿ ಅಲ್ಪ ಪ್ರಮಾಣದ ಪರಿಹಾರ ನೀಡಿ ಮೂಗಿಗೆ ತುಪ್ಪ ಸವರಿದಂತೆ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ತಮ್ಮ ರೋಧನ ಅಕ್ಷರಶಃ ಅರಣ್ಯ ರೋಧನವಾಗಿದ್ದು, ಸಂಬಂಧಿಸಿದ ಉನ್ನತಾಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಬೇಕು. ಜಿಲ್ಲಾಧಿಕಾರಿ, ಸಚಿವರು, ಶಾಸಕರು ಖುದ್ದು ಪರಿಶೀಲಿಸಿ ನಂತರವಷ್ಟೇ ಸರ್ಕಾರದ ಮಟ್ಟದಲ್ಲಿ ಗಂಭೀರವಾಗಿ ಚರ್ಚೆ ನಡೆಸಿ ದಿಟ್ಟ ನಿರ್ಣಯಗಳನ್ನು ಕೈಗೊಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ.

ಕಾಡು ಪ್ರಾಣಿಗಳು ಜಮೀನುಗಳಿಗೆ ಲಗ್ಗೆ ಇಡುವುದನ್ನು ತಪ್ಪಿಸಲು ಅರಣ್ಯ ಇಲಾಖೆಯಿಂದ ಕಾಯಂ ಸೂಕ್ತ ಪರಿಹಾರ ಕ್ರಮಗಳನ್ನು ಶೀಘ್ರವೇ ಕೈಗೊಳ್ಳುವಂತೆ ಹರವದಿ ಗ್ರಾಮ, ಕಕ್ಕುಪ್ಪಿ ಗ್ರಾಮ, ಜರ್ಮಲಿ ಗ್ರಾಮಗಳ ರೈತರು ಹಾಗೂ ವನ್ಯ ಪ್ರಾಣಿಗಳ ಬಾಧಿತ ತಾಲೂಕಿನ ಎಲ್ಲ ಗ್ರಾಮಗಳ ರೈತರು, ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿದ್ದೀರಾ? ಶುದ್ಧ ಗಾಳಿ | ಇಂದೋರ್ ಪ್ರಥಮ; ಬೆಂಗಳೂರು 36ನೇ ಸ್ಥಾನಕ್ಕೆ ಕುಸಿತ

ಕಾಡುಹಂದಿ ಹಾವಳಿ

ಪರಿಹಾರವನ್ನು ದುಪ್ಪಟ್ಟು ಮಾಡಬೇಕು, ಬೆಳೆಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ವಿಧಾನ ಸರಳಗೊಳಿಸಬೇಕು. ಪರಿಹಾರ ಧನವು ಅವೈಜ್ಞಾನಿಕ ಮಾನದಂಡದಿಂದ ಕೂಡಿದ್ದು, ಅದನ್ನು ಸರಿಪಡಿಸಬೇಕು. ಪರಿಹಾರ ಹಣಕ್ಕಾಗಿ ಅರ್ಜಿ ಸಲ್ಲಿಸಬೇಕಾದ ವಿಧಾನವು ಜಠಿಲಾಗಿರುವುದನ್ನು ಸರಳವಾಗಿಸಬೇಕು. ಪರಿಹಾರ ಧನ ಶೀಘ್ರವಾಗಿ, ನೇರವಾಗಿ ನಷ್ಟ ಹೊಂದಿರುವ ರೈತನ ಖಾತೆಗೆ ಜಮಾ ಆಗುವಂತೆ ಅಗತ್ಯ ಕ್ರಮ ಜರುಗಿಸಬೇಕು” ಎಂದು ಕೂಡ್ಲಿಗಿ ತಾಲೂಕಿನ ಸಮಸ್ತ ರೈತರು, ರೈತ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ವರದಿ : ವಿ ಜಿ ವೃಷಭೇಂದ್ರ ಕೂಡ್ಲಿಗಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...