ಮೈಸೂರು | ಖಾಲಿಯಿರುವ ಹುದ್ದೆಗಳ ಭರ್ತಿ ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ

Date:

ಮೈಸೂರಿನ ಮಾನಸ ಗಂಗೋತ್ರಿ, ಕ್ಲಾಕ್ ಟವರ್ ಬಳಿ ವಿದ್ಯಾರ್ಥಿ ನಿರುದ್ಯೋಗಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಸರ್ಕಾರದಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿದರು.

‘ಉದ್ಯೋಗಕ್ಕಾಗಿ ಯುವಜನತೆ’ ಘೋಷಣೆಯೊಂದಿಗೆ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು ಉದ್ಯೋಗ ಕಲ್ಪಿಸುವಂತೆ, ಖಾಲಿಯಿರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡುವಂತೆ ಒತ್ತಾಯಿಸಿ, ಸರ್ಕಾರ ಖಾಸಗಿ ಉದ್ಯೋಗ ಮೇಳ ನಡೆಸುವುದು ಬೇಡ, ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಿ ಎಂದರು.

ಸರ್ಕಾರಗಳು ದುಡಿಯುವ ಕೈಗಳಿಗೆ ಕೆಲಸ ನೀಡದೆ, ಉದ್ಯೋಗ ನಿಧಿ ಹೆಸರಿನಲ್ಲಿ ಭಿಕ್ಷೆ ನೀಡಬೇಡಿ. ನೀವು ಕೊಡುವ ಹಣ ಪಡೆಯಲು ನಮಗೂ ಸ್ವಾಭಿಮಾನವಿದೆ. ಈ ದೇಶದ ಬೆನ್ನೆಲಬು, ದೇಶ ನಿಂತಿರುವುದೇ ಯುವ ಜನತೆಯ ಮೇಲೆ. ಹೀಗಿರುವಾಗ ನಮಗೆ ದುಡಿಯುವ ಅವಕಾಶ ಕಲ್ಪಿಸಿ. ತಂದೆ ತಾಯಿ ಕಷ್ಟಪಟ್ಟು, ಸಾಲಸೋಲ ಮಾಡಿ ವಿದ್ಯಾಭ್ಯಾಸ ಮಾಡಿಸುತಿದ್ದಾರೆ. ನಾವು ಸಹ ಓದಿದ್ದೇವೆ. ಆದರೇ, ಉದ್ಯೋಗವೇ ಸಿಗದಿರುವಾಗ ನಮ್ಮಗಳ ಬದುಕೇನು?.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆಳುವ ಸರ್ಕಾರಗಳು ನಿರುದ್ಯೋಗ ತೊಲಗಿಸುವಲ್ಲಿ ಮಹತ್ವದ ಹೆಜ್ಜೆ ಇರಿಸಬೇಕಿತ್ತು. ಆದರೇ, ಯಾವುದೇ ಇಚ್ಛಾ ಶಕ್ತಿ ಕಾಣುತಿಲ್ಲ. ಸರ್ಕಾರ ಉದ್ಯೋಗ ನೀಡಲಿ ಎಂದರೆ. ಖಾಸಗಿ ಉದ್ಯೋಗ ಮೇಳ ನಡೆಸುತ್ತಾರೆ. ಖಾಸಗಿ ಕ್ಷೇತ್ರದಲ್ಲಿ ದುಡಿಯುವುದಾದರೆ ಸರ್ಕಾರದ ಅಗತ್ಯತೆ ಏನು?. ನಿಮ್ಮಗಳ ಪ್ರಕಾರ ಖಾಸಗಿ ವಲಯವದವರು ಯುವ ಜನರ ಶಕ್ತಿ, ಶ್ರಮವನ್ನು ತಮ್ಮಿಚ್ಚೆಯಂತೆ ಹೀರುವುದು. ಭವಿಷ್ಯದಲ್ಲಿ ಯುವ ಜನತೆಯ ಪಾತ್ರವೇ ಇಲ್ಲದಂತೆ ಮಾಡುವ ನಯವಾದ ವಂಚನೆ.

ಗ್ಯಾರೆಂಟಿ ನೀಡುವ ಸರ್ಕಾರ, ಉದ್ಯೋಗ ಭದ್ರತೆ ನೀಡುತ್ತಿಲ್ಲ. ಖಾಸಗಿಯವರಿಗೆ ಮಣೆ ಹಾಕಿ ಜೀವನ ಪರ್ಯಂತ ಅಲ್ಪ ಹಣಕ್ಕೆ ಜೀವ ತೇಯಬೇಕು. ಖಾಸಗಿ, ಕಾರ್ಪೋರೆಟ್ ವಲಯಗಳ ಓಲೈಕೆಗೆ ನಿಂತಿರುವುದು ಶೋಚನಿಯ ಸಂಗತಿ. ರಾಜಕೀಯ ಲಾಭಕಾಗಿ
ಸರ್ಕಾರ ಖಾಲಿ ಇರುವ ಉದ್ಯೋಗ ನೀಡದೆ, ಖಾಸಗಿ ವಲಯಕ್ಕೆ ಆಧ್ಯತೆ ನೀಡಿ ಉದ್ಯೋಗ ಮೇಳ ಮಾಡುವ ಹುನ್ನಾರ ಸಹಿಸಲು ಸಾಧ್ಯವಿಲ್ಲ.ನಿಮ್ಮ ರಾಜಕೀಯಕ್ಕೆ ಹಣದ ಮೂಲ ಖಾಸಗಿ ವಲಯ, ಅವರ ಓಲೈಕೆಗೆ ಬಲಿಯಾಗುವುದು ಯುವ ಜನತೆ. ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಇನ್ನ ಕೇಂದ್ರ ಸರ್ಕಾರ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿತು. ಹತ್ತು ವರ್ಷ ಕಳೆದರೂ ಕೊಟ್ಟ ಮಾತನ್ನು ಈಡೇರಿಸಿಲ್ಲ. ವಿದ್ಯಾವಂತರು ನಿರುದ್ಯೋಗಿಗಳಾಗಿ ಊರಿಗೂ ಹೋಗಲಾರದೆ, ಮನೆಯಲ್ಲಿ ಇರಲಾರದೆ ಹೆಣಗಾಡುವ ಪರಿಸ್ಥಿತಿ. ಊರಿಗೋದರೆ ಏನು ಕೆಲಸ ಮಾಡ್ತಾ ಇದ್ದೀಯ ಎಂದು ಕೇಳಿದರೆ ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ. ಪಿಎಚ್ಡ ಮಾಡಿದವರಿಗೆ ಉತ್ತಮ ಕೆಲಸ ಸಿಗಲ್ಲ, ತಳ ಮಟ್ಟದ ಕೆಲಸಕ್ಕೆ ಹೋದರೆ, ಈ ಕೆಲಸ ಮಾಡಲು ಸಿಟಿಯಲ್ಲಿ, ಇಷ್ಟೆಲ್ಲಾ ಖರ್ಚು ಮಾಡಿ ಓದಬೇಕಿತ್ತಾ, ಊರಲ್ಲಿ ಧನ ಮೇಯಿಸಿದ್ದರೆ ಆಗ್ತಾ ಇರಲಿಲ್ವಾ ಎನ್ನುವ ಚುಚ್ಚು ಮಾತುಗಳು.

ಎಷ್ಟೋ ವಿದ್ಯಾರ್ಥಿಗಳು ಉದ್ಯೋಗವಾಕಾಶ ಸಿಗದೇ ಪಿಎಚ್ಡಿ ಮಾಡುವ ಪರಿಸ್ಥಿತಿ ಬಂದಿದೆ. ಪಿಎಚ್ಡಿ ಆದವರು ಕೆಲಸ ಸಿಗದೇ ಅತಂತ್ರರಾಗುತ್ತಿದ್ದಾರೆ. ಊರಿನಲ್ಲಿ ಚಿಕ್ಕ ಪುಟ್ಟ ಕೆಲಸ ಮಾಡುವವರು ಉತ್ತಮ ಸ್ಥಿತಿಯಲ್ಲಿ ಇದ್ದಾರೆ. ನಾವುಗಳು ಕಷ್ಟಪಟ್ಟು ಓದಿದರೂ ಉದ್ಯೋಗವಿಲ್ಲ, ಉತ್ತಮ ಭವಿಷ್ಯವಿಲ್ಲ. ವಯಸ್ಸಿನ ಮಿತಿ ಮಿರುತ್ತಿದೆ. ಜೀವನ ಕಟ್ಟುವುದಾದರೂ ಹೇಗೆ?.

ಹೆಣ್ಣು ಮಕ್ಕಳ ಮದುವೆ ಮಾಡಲು ಅಳಿಯ ಉದ್ಯೋಗದಲ್ಲಿ ಇರಬೇಕೆಂದು ಬಯಸುತ್ತಾರೆ. ಅದೇ ಮನೆಯ ಮಗ ಉದ್ಯೋಗವಿಲ್ಲದೆ, ತನ್ನ ಮನೆಯಲ್ಲೇ ಅವಗಣನೆಗೆ ಒಳಪಡುತ್ತಾನೆ. ವಿದ್ಯಾರ್ಥಿಗಳ ಬದುಕು ಉದ್ಯೋಗ ಸಿಕ್ಕರೆ ಮಾತ್ರ. ಉದ್ಯೋಗವಿದ್ದರೆ ಗೌರವ. ಇಲವಾದಲ್ಲಿ ಸಮಾಜದಲ್ಲಿ, ಮನೆಯಲ್ಲಿ ಅಗೌರವದಿಂದ ಕಾಣುವ ಪರಿಸ್ಥಿತಿ ಎದುರಾಗುತ್ತಿದೆ. ಎಷ್ಟೋ ನಿರುದ್ಯೋಗಿಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ, ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಉತ್ತಮವಾಗಿ ಓದಿ ಪದವಿ ಪಡೆದು ಊರೂರು ಅಲೆಯುವ ಪರಿಸ್ಥಿತಿ.

ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿಯವರನ್ನ ಉದ್ಯೋಗ ಕೊಡಿ ಎಂದರೆ ಪಕೋಡ ಮಾರಿ ಎನ್ನುತ್ತಾರೆ. ರಾಜ್ಯ ಸರ್ಕಾರದ ಕಡೆ ನೋಡಿದರೆ ಖಾಸಗಿ ಉದ್ಯೋಗ ಮೇಳ ಮಾಡಿಕೊಂಡು ಕಾಲಹರಣ ಮಾಡುತ್ತಾರೆ. ಹೀಗಾದರೆ, ಯುವ ಜನತೆಯ ಪಾಡೇನು?.

ನಮಗೆ ಸರ್ಕಾರ ಯಾವುದನ್ನೂ ಕೊಡುವುದು ಬೇಡ ಉದ್ಯೋಗ ಕೊಡಲಿ. ರಾಜ್ಯ ಸರ್ಕಾರದಲ್ಲಿ 2,76,386 ಹುದ್ದೆಗಳು ಖಾಲಿಯಿವೆ. ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಿ ಎಂದು ಆಗ್ರಹ ಮಾಡಿದರು.

ಈ ವಿಶೇಷ ಸುದ್ದಿ ಓದಿದ್ದೀರಾ? ‘ನಮ್ಮೊಳಗಿನ ಬುದ್ಧ ಬೆಳಕನ್ನು ಹುಡುಕಬೇಕು, ಅಂಬೇಡ್ಕರರಂತೆ ಜ್ಞಾನದಾಹಿಗಳಾಗಬೇಕು’; ವಿಶ್ವಶಾಂತಿ ಸಾರಿದ ಬೌದ್ಧ ಮಹಾ ಸಮ್ಮೇಳನ

ಪ್ರತಿಭಟನೆಯಲ್ಲಿ ಸಂಶೋಧಕ ವಿದ್ಯಾರ್ಥಿ ಪ್ರದೀಪ್ ಮುಮ್ಮಡಿ, ಸಂಶೋಧಕರ ಸಂಘದ ಮಾಜಿ ಅಧ್ಯಕ್ಷ ಶಿವಶಂಕರ್, ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ವಿಶ್ವ ಪ್ರಸಾದ್, ಬಾರುಕೋಲು ರಂಗಸ್ವಾಮಿ, ಡಾ. ಚನ್ನಕೇಶವ ಮೂರ್ತಿ, ಕಾರ್ತಿಕ್, ಶರತ್ ಬಂಡಳ್ಳಿ, ರವಿ ಕೊಳ್ಳೆಗಾಲ, ಕೃಷ್ಣ ಗಣಿಗನೂರು, ಸತೀಶ್ ಹೊಸಕೋಟೆ, ನಾಗೇಂದ್ರ, ಚಿರಾಗ್, ಸುಮಂತ್,ಶ್ವೇತಾ, ನಿತಿನ್, ನವೀನ್ ಕೋಳೂರು, ಧೀರಜ್, ಪುನೀತ್, ಸಾಮ್ರಾಟ್, ಕೃಷ್ಣ, ಗೌತಮ್, ರಮ್ಯಾ, ಸ್ನೇಹ, ಜಯ, ಮಮತಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...