ಚಿಂತಾಮಣಿ : ತಾಲೂಕಿನ ಕೈವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶದ ಗ್ರಾಮಗಳಲ್ಲಿ ಕೈಗಾರಿಕೆಗೆ ಜಮೀನು ನೀಡಿದ ರೈತರ ಭೂಮಿಯಲ್ಲಿ ಇದ್ದಂತಹ ಮರ ಮಾಲ್ಕಿಗಳ ಪರಿಹಾರ ಧನವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ ಸಿ ಸುಧಾಕರ್ ರವರು ವಿತರಣೆ ಮಾಡಿದರು.
ಇದನ್ನು ಓದಿದ್ದೀರಾ..? ಕಾರ್ಮಿಕ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿ ಮಾಡದಂತೆ ಆಕ್ಷೇಪಣೆಗಳ ಸಲ್ಲಿಕೆ
ಒಟ್ಟು ರೈತರಿಗೆ 4.04 ಕೋಟಿ ಮೊತ್ತದ ಪರಿಹಾರವನ್ನು ನೀಡಲಾಯಿತು ಇದೇ ಸಭೆಯಲ್ಲಿ ಭೂಮಿ ಪರಿಷ್ಕರಣೆ ಕುರಿತು ಇದ್ದಂತಹ ವಿವಾದಗಳ ಬಗ್ಗೆ ಸಹ ಚರ್ಚಿಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಲಾಯಿತು ಭೂಮಿ ನೀಡಿದಂತಹ ರೈತರಿಗೆ ಯಾವುದೇ ಬಿಕ್ಕಟ್ಟು ಆಗದೆ ಪರಿಹಾರ ನೀಡುವಲ್ಲಿ ಯಶಸ್ವಿಯಾಗಿ ಅಧಿಕಾರಿ ವರ್ಗವು ಕಾರ್ಯನಿರ್ವಹಿಸಿದೆ.





