ಸಾಗರ, ಯಾದಗಿರಿ, ಶಿವಮೊಗ್ಗದಲ್ಲಿ 9ನೇ ತರಗತಿ ಬಾಲಕಿಯರು ಮಕ್ಕಳಿಗೆ ಜನ್ಮ ನೀಡಿದ ಪ್ರಕರಣದ ಬೆನ್ನಲ್ಲೆ, ಸಾಗರದಲ್ಲಿ ಅಪ್ರಾಪ್ತೆಯೊಬ್ಬಳು ಗರ್ಭ ಧರಿಸಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಅಪ್ರಾಪ್ತನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.ಹೊಟ್ಟೆನೋವಿನಿಂದ ಬಳಲುತ್ತಿದ್ದ 16 ವರ್ಷದ ಬಾಲಕಿಯನ್ನು ತಾಯಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಆಕೆ ಗರ್ಭಿಣಿ ಎಂಬುದು ಗೂತ್ತಾಗಿದೆ.
ಕೂಲಂಕಷವಾಗಿ ವಿಚಾರಿಸಿದಾಗ ಪರಿಚಿತ ಅಪ್ರಾಪ್ತನೊಬ್ಬ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ತಿಳಿದು ಬಂದಿದೆ.ಈ ಸಂಬಂಧ ಅಪ್ರಾಪ್ತನ ವಿರುದ್ಧ ಪ್ರಕರಣ ದಾಖಲಾಗಿದೆ.





