ಕೆದಿಲ-ಪನಡ್ಕ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ: 12 ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ

Date:

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆದಿಲ ಗ್ರಾಮದ ಕೆದಿಲ-ಪನಡ್ಕ ರಸ್ತೆ ವಿವಾದ ಕೊನೆಗೂ ಇತ್ಯರ್ಥವಾಗಿದೆ. ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ರಾಜಿ ಮಾತುಕತೆಯಲ್ಲಿ ವಿವಾದ ಇತ್ಯರ್ಥಗೊಂಡಿದ್ದು, ಸುಮಾರು 12 ವರ್ಷಗಳಿಂದ ಇದ್ದ ವಿವಾದಕ್ಕೆ ತೆರೆ ಎಳೆಯಲಾಗಿದೆ.

ಈ ರಸ್ತೆಯು ಪ್ರಸನ್ನ ಭಟ್ ವಳಂಗಜೆ ಅವರ ಪಟ್ಡಾ ಜಾಗದಲ್ಲಿ ಸಾಗುತ್ತಿದ್ದು, ರಸ್ತೆ ನಿರ್ಮಾಣಕ್ಕೆ ಜಾಗದ ತಕರಾರು ಅಡ್ಡಿಯಾಗಿತ್ತು.‌ ಪಟ್ಟಾ ಜಾಗವಾದ ಕಾರಣ ರಸ್ತೆ ಬೇಡಿಕೆ ಫಲಾನುಭವಿಗಳಿಗೆ ಏನೂ ಮಾಡಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಶಾಸಕರಲ್ಲಿ ಫಲಾನುಭವಿಗಳು ಮನವಿ ಮಾಡಿಕೊಂಡಿದ್ದರು. ವಿವಾದದ ಬಗ್ಗೆ ಮತ್ತು ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡುವ ಬಗ್ಗೆ ಶಾಸಕರ ನೇತೃತ್ವದಲ್ಲಿ ಪಂಜಿಗುಡ್ಡೆ ಈಶ್ವರಭಟ್ ಹಾಗೂ ಕಾಂಗ್ರೆಸ್ ಮುಖಂಡ ಲೋಕೇಶ್ ಪಡ್ಡಾಯೂರು ಪ್ರಸನ್ನ ಭಟ್ ವಳಂಗಜೆಯವರಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆ ರಸ್ತೆ ನಿರ್ಮಾಣಕ್ಕೆ ಭಟ್ ಅವರು ಒಪ್ಪಿಗೆ ನೀಡಿದ್ದರು‌. ಆ ಬಳಿಕ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದೆ. ಇದೇ ರಸ್ತೆಯ ಕಾಂಕ್ರಿಟೀಕರಣಕ್ಕೆ ಶಾಸಕರು 5 ಲಕ್ಷ ರೂ. ಅನುದಾನವನ್ನೂ ಇರಿಸಿದ್ದಾರೆ.

ರಸ್ತೆ ವಿವಾದ ಇತ್ಯರ್ಥಗೊಂಡ ಸಂತಸದಲ್ಲಿ ರಸ್ತೆ ಫಲಾನುಭವಿಗಳಾದ ಸುಮಾರು 25 ಕುಟುಂಬಸ್ಥರು ಶಾಸಕ ಅಶೋಕ್ ರೈ ಮನೆಗೆ ಬಂದು ಕೃತಜ್ಞತಾ ಸಲ್ಲಿಕೆಗಾಗಿ ಕಾಲಿಗೆ ಬಿದ್ದು ನಮಸ್ಕಾರ ಮಾಡಿದರು. ಈ ವೇಳೆ ಮಾತನಾಡಿದ ಗ್ರಾಮಸ್ಥರು, “12 ವರ್ಷಗಳಿಂದ ನಾವು ರಸ್ತೆ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಶಾಸಕರು ಇತ್ಯರ್ಥ ಮಾಡಿದ್ದಾರೆ. ನಾವು ಎಂದಿಗೂ ಈ ಸೇವೆಯನ್ನು ಮರೆಯಲಾರೆವು” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪುತ್ತೂರು ಶಾಸಕ ಆಶೋಕ ರೈ ಮಾತನಾಡಿ, “ರಸ್ತೆ ಸಮಸ್ಯೆಯ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು. ಖಾಸಗಿ ಜಾಗವಾದ ಕಾರಣ ಅಲ್ಲಿ ರಸ್ತೆ ಮಾಡುವುದು ಕಷ್ಟಸಾಧ್ಯವಾಗಿತ್ತು. ಜಾಗದ ಮಾಲೀಕ ಪ್ರಸನ್ನ ಭಟ್ ಅವರು ಜಾಗ ಬಿಟ್ಟುಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸುಮಾರು 25 ಕುಟುಂಬಗಳಿಗೆ ಇದು ನೆರವಾಗಿದೆ. ಮುಂದಕ್ಕೆ ಈ ರಸ್ತೆಯನ್ನು ಅಭಿವೃದ್ದಿ ಮಾಡಲಾಗುವುದು” ಎಂದು ಭರವಸೆ ನೀಡಿದರು.

ಪಂಜಿಗುಡ್ಡೆ ಈಶ್ವರಭಟ್ ಮಾತನಾಡಿ, “ಶಾಸಕರು ಮಾಡಿದ ಪುಣ್ಯದ ಕೆಲಸ ಇದಾಗಿದ್ದು, ಬಡವರ ಮನೆಗೆ ದಾರಿ ಮಾಡಿಕೊಟ್ಟಿದ್ದಾರೆ. ಇಷ್ಟು ವರ್ಷದಲ್ಲಿ ಹಲವು‌ ಮಂದಿಯ‌ ಬಳಿ ಅರ್ಜಿ ಹಾಕಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಬಾರಿ ಬೇಡಿಕೆ ಈಡೇರಿದೆ, ಮುಂದೆ ರಸ್ತೆಯನ್ನು ಶಾಸಕರು ಅಭಿವೃದ್ದಿ ಮಾಡಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಪುತ್ತೂರು | ಆಟೋ ಚಾಲಕನ ಮೇಲೆ ಸಂಚಾರಿ ಪೊಲೀಸರ ದರ್ಪ: ಆಟೋ ಚಾಲಕರ ಯೂನಿಯನ್ ಪ್ರತಿಭಟನೆ

ಈ‌ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್ ಗೌಡ ಪಡ್ಡೆಯೂರು, ಕೆದಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ವಿ ವಾಲ್ತಾಜೆ, ಪ್ರಸನ್ನ ಭಟ್ ವಳಂಗಜೆ, ಸಾಹುಲ್ ಹಮೀದ್ ಕುಕ್ಕಾಜೆ, ಪ್ರಮೋದ್ ಅಡ್ಡಯೂರು, ಹರೀಶ್ ಬಂಗೇರ ಪಡ್ಡೆಯೂರು, ಪ್ರಕಾಶ್ ಗೌಡ ನೆಕ್ಕಿಲಾಡಿ, ಸೀತಾರಾಮ ಭಟ್ ಬಡೆಕ್ಕಿಲ, ಶಶಾಂಕ್ ಬಡೆಕ್ಕಿಲ, ವೆಂಕಪ್ಪ ಗೌಡ ಪನಡ್ಕ, ವಾರಿಜ ತಿಮ್ಮಕ್ಕ ಪೂವಪ್ಪ, ದಿವಾಕರ ನಾಯ್ಕ, ಪೂರ್ಣಿಮಾ, ಯಶೋಧ, ವೆಂಕಪ್ಪ ರಾನ್ಯ, ಲಕ್ಷ್ಮಿ ಪನಡ್ಕ, ವನಿತ ವಲಂಕುಮೇರಿ ಇದ್ಧರು.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...