ಮಂಡ್ಯ | ಮನ್ಮುಲ್ ನಿರ್ದೇಶಕ ರವಿ ವಿರುದ್ಧ ಶಾಸಕ ಎಚ್ ಟಿ ಮಂಜು ಸಿಡಿಮಿಡಿ

Date:

ಮಂಡ್ಯ ಜಿಲ್ಲೆ,ಕೃಷ್ಣರಾಜಪೇಟೆ ಶಾಸಕರಾದ ಎಚ್‌‌. ಟಿ. ಮಂಜು ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಗ್ರಾಮ ಪಂಚಾಯ್ತಿ ಕೆಡಿಪಿ ಸಭೆಗೆ ಡೈರಿ ಕಾರ್ಯದರ್ಶಿಗಳು ಹೋಗುವಂತಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ ಬೇರೆಯವರ ಬಳಿ ಹೇಳಿಸಿಕೊಳ್ಳುವಷ್ಟು ಅವಿವೇಕಿ ಅಲ್ಲ ಎಂದು ಸಿಡಿಮಿಡಿಗೊಂಡರು.

ಶಾಸಕರ ಕೆಡಿಪಿ ಸಭೆಗೆ ಮನ್ಮುಲ್ ಡಿಎಂ, ಎಂಡಿಸಿಸಿ ವ್ಯವಸ್ಥಾಪಕರು ಬರುತ್ತಾರೆ. ಗ್ರಾಪಂ ಕೆಡಿಪಿ ಸಭೆಗೆ ಸ್ಥಳೀಯ ಡೈರಿಯ ಕಾರ್ಯದರ್ಶಿಗಳು ಬರಬೇಕು ಎಂದು ಸರ್ಕಾರ 2019 ರಲ್ಲಿ ಆದೇಶ ನೀಡಿದೆ. ಗೋಂದಿಹಳ್ಳಿ ರೈತರು ತಿಂಗಳಲ್ಲಿ 24 ದಿನ ಹಾಲು ಫೇಲ್ ಆಗಿರುವುದಾಗಿ ತಿಳಿಸಿದ್ದರಿಂದ ಮಾದಾಪುರ ಗ್ರಾಪಂ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿ ಸಮಸ್ಯೆ ಆಲಿಸಿದ್ದೀನಿ. ಇದಕ್ಕೆ ಮನ್ಮುಲ್ ನಿರ್ದೇಶಕ ರವಿ‌ ಡೈರಿ ಕಾರ್ಯದರ್ಶಿಗಳನ್ನು ಕೆಡಿಪಿ ಸಭೆಗೆ ಕರೆಯಲು ಶಾಸಕ ಯಾರು? ಎಂದು ಏಕ ವಚನದಲ್ಲಿ ಪ್ರಶ್ನಿಸಿದ್ದಾರೆ. ನನ್ನ ಪ್ರಶ್ನಿಸಲು ಡಾಲು ರವಿ ಯಾರು? ಎಂದು ಮರು ಪ್ರಶ್ನಿಸಿದರು.

ನಾನು ಸರ್ಕಾರದ ಪ್ರತಿನಿಧಿ. ಹಾಲು ಉತ್ಪಾದಕರಿಗೆ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿರುವುದರಿಂದ, ಸರ್ಕಾರದ ಅನುದಾನ ಪಡೆಯುತ್ತಿರುವುದರಿಂದ ಕೆಡಿಪಿ ಪರಿಶೀಲನೆಗೊಳಪಡುತ್ತಿದೆ. ಮಂಡ್ಯ ಜಿಲ್ಲಾ ಒಕ್ಕೂಟ ರವಿ ಒಡತನದಲ್ಲಿಲ್ಲ. ಡೈರಿಗಳು ಅವರ ಉಪ ಶಾಖೆಗಳಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹರಿರಾಯನಹಳ್ಳಿ ಡೈರಿ ಉದ್ಘಾಟನೆಗೆ ಶಾಸಕ ಬಂದರೆ ಕೆಎಂಎಫ್, ಮನ್ಮುಲ್ ಅನುದಾನ ಕೊಡಿಸುವುದಿಲ್ಲ ಎಂಬ ಬೆದರಿಕೆ ಹಾಕಿದ್ದಾರೆ. ಕೆಲವರ ಬಳಿ ಶಾಸಕರು ನನ್ನ ಹತ್ತಿರ ಬರಲೇಬೇಕು ಎಂದು ಹೇಳಿದ್ದಾರೆ. ಆದರೆ, ಇಂತಹ ಬೆದರಿಕೆಗೆ ನಾನು ಹೆದುರುವುದಿಲ್ಲ. ಅಭಿವೃದ್ಧಿ ಕೆಲಸಗಳಿಗೆ ಆಧ್ಯತೆ ನೀಡುತ್ತೇನೆ.

ಹರಿರಾಯನಹಳ್ಳಿ ಡೈರಿ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದೇನೆ. ಡೈರಿ ವಾರ್ಷಿಕ ಸಭೆಯಲ್ಲಿ ಮನ್ಮುಲ್ ನಿರ್ದೇಶಕರ ಯಾಕೆ ಹೋಗಬೇಕು ಎಂದು ಪ್ರಶ್ನೆ
ಮಾಡಿದರು.

ಭಾರತಿಪುರ, ಮಾದಾಪುರ, ಸೇರಿ ನಾಲ್ಕು ಪಂಚಾಯಿತಿಗೆ ಹೋಗಿದ್ದೀನಿ. ಮುಂದಿನ ದಿನಗಳಲ್ಲಿ ಕೆಡಿಪಿ ಸಭೆಗೆ ಹೋಗುತ್ತೇನೆ. ರೈತರು ಶುಂಠಿಯನ್ನು ದಲ್ಲಾಳಿಗಳಿಗೆ ಮಾರಾಟ ಮಾಡಬೇಡಿ. ದಲ್ಲಾಳಿಗಳಿಂದ ಶುಂಠಿ ಬೆಳೆ ದರ ಕುಸಿದಿದೆ. ಶುಂಠಿ ಬೆಳೆಗೆ ಸರ್ಕಾರ ಬೆಂಬಲ ದರ ನಿಗಧಿ ಮಾಡಿದೆ. ಟಿಎಪಿಸಿಎಂಎಸ್ ಯಲ್ಲಿ ಶುಂಠಿ ಕೇಂದ್ರ ಪ್ರಾರಂಭಿಸಲಾಗುತ್ತದೆ. ರೈತರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿ ನಂತರ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗುವುದು. ಆದ್ದರಿಂದ, ದಲ್ಲಾಳಿಗಳಿಗೆ ಶುಂಠಿ ಮಾರದಂತೆ ರೈತರಲ್ಲಿ ಮನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಬಿಜೆಪಿಗರಿಂದ ಅವಹೇಳನಕಾರಿ ಹೇಳಿಕೆ; ನಗರ ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ದೂರು

ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಜೆಡಿಎಸ್ ಮುಖಂಡ ಬೂಕನಕೆರೆ ಹುಲ್ಲೇಗೌಡ, ಕುರಬಹಳ್ಳಿ ನಾಗೇಶ್, ಸಂತೇಬಾಚಹಳ್ಳಿ ಹೋಬಳಿ ಅಧ್ಯಕ್ಷ ರವಿಕುಮಾರ್, ತಾಪಂ ಮಾಜಿ ಸದಸ್ಯ ಹೊಸಹೊಳಲು ರಾಜು, ಎಂ ಪಿ ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಪತ್ರಿಕಾಗೋಷ್ಟಿಯಲ್ಲಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...