ಭಾಗ್ಯಲಕ್ಷ್ಮೀ ಬಾಂಡ್ ಪಡೆಯಲು ಸ್ನೇಹಿತರೊಂದಿಗೆ ಅಂಗನವಾಡಿಗೆ ತೆರಳಿದ್ದ ನಾಲತವಾಡ ಪಟ್ಟಣ ಪಂಚಾಯತಿಯ ನಾಮನಿರ್ದೇಶಿತ ಸದಸ್ಯರೊಬ್ಬರಿಗೆ ಜಾತಿ ನಿಂದನೆ ನಡೆದಿದೆ ಎನ್ನುವ ಅರೋಪದ ಹಿನ್ನೆಲೆ, ಆರೋಪಿತ ಅಂಗನವಾಡಿ ಕಾರ್ಯಕರ್ತೆ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಿಡಿಒ ಹೋರಾಟಗಾರರು ಪಪಂ ನಿರ್ದೇಶಕ ಸದಸ್ಯ ನೀಲಪ್ಪ ಸಿದ್ದಾಪುರ ಅವರು ಮನವಿ ಸಲ್ಲಿಸಿದರು.
ಪಟ್ಟಣದ 7ನೇ ವಾರ್ಡಿನ ಅಂಗನವಾಡಿ ಕೇಂದ್ರ-7 ರ ಕಾರ್ಯಕರ್ತೆ, ಪರಿಶಿಷ್ಟ ಜಾತಿಯ ಮಹಿಳೆ ಒಬ್ಬರ ಬಗ್ಗೆ ನಿಂದನಾತ್ಮಕ ಮತ್ತು ಜಾತ್ಯಾಧಾರಿತ ಶಬ್ದಗಳನ್ನು ಬಳಸಲು ‘ಕುಮ್ಮಕ್ಕು’ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇಂತಹ ವರ್ತನೆ ಸೇವಾ ನೀತಿ ಮತ್ತು ಕಾಯ್ದೆ ಎರಡಕ್ಕೂ ವಿರುದ್ಧವಾಗಿರುವುದರಿಂದ, ಆ ಕಾರ್ಯಕರ್ತೆಯನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ವಿಜಯಪುರ | ವಿಕಲಚೇತನರಿಗೆ ಯೋಜನೆಗಳ ಲಾಭ ತಲುಪಿಸಲು ಡಿಸಿ ಆನಂದ ಸೂಚನೆ
ಮನವಿ ಸ್ವೀಕರಿಸಿದ ಎಡಿಪಿಒ ಶಿವಮೂರ್ತಿ ಕುಂಬಾರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವದಾಗಿ ಹೋರಾಟಗಾರರಿಗೆ ತಿಳಿಸಿದರು.
ದೌರ್ಜನ್ಯ ತಡೆ ಸಮಿತಿ ಮಾಜಿ ಸದಸ್ಯ ಬಸವರಾಜ ಪೂಜಾರಿ, ಗುಂಡಪ್ಪ ಛಲವಾಡಿ, ಮಂಜುನಾಥ ಕಟ್ಟಿಮನಿ, ಸಂಗಣ್ಣ ಹಡಲಗೇರಿ, ಮಹಾಂತೇಶ ತಮದಡ್ಡಿ, ಶಶಿಧರ ಹಳ್ಳೂರ, ರಮೇಶ ದೊಡ್ಡಮನಿ, ಮಾಯಪ್ಪ ಮಾದರ, ಮಲ್ಲು ಇದ್ದರು.





