ಬಟ್ಟೆ ತೊಳೆಯಲು ಹೋಗಿ ಕಾಲು ಜಾರಿ ಕಾಲುವೆಗೆ ಬಿದ್ದ ಸಹೋದರಿಯನ್ನು ರಕ್ಷಿಸಲು ಹೋದ ಇಬ್ಬರು ಸಹೋದರರೂ ನೀರುಪಾಲಾಗಿರುವ ಹೃದಯ ವಿದ್ರಾವಕ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಶಿರೋಳ್ ಗ್ರಾಮದ ಸಮೀದಲ್ಲಿ ಹಾದು ಹೋಗಿರುವ ಕೆಬಿಜೆಎನ್ಎಲ್ ಎಡದಂಡೆ ಕಾಲುವೆಯಲ್ಲಿ ನಡೆದಿದೆ.
ಪಟ್ಟಣದ ಶಿರೋಳ್ ರಸ್ತೆಯಲ್ಲಿರುವ ಗೊಲ್ಲರ ಓಣಿಯ ಪಕ್ಕದಲ್ಲಿರುವ ವೇಷಗಾರರ ಬಡಾವಣೆಯ ನಿವಾಸಿಗಳಾದ ಬಸಮ್ಮ ಚೆನ್ನಪ್ಪ ಕೊಣ್ಣುರು( 21), ಸಂತೋಷ ಚೆನ್ನಪ್ಪ ಕೊಣ್ಣುರು (16) ಹಾಗೂ ರವಿ ಹಣಮಂತ ಕೊಣ್ಣುರು (15) ಕಾಲುವೆಯಲ್ಲಿ ಮುಳಿಗಿದವರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ | ಕಬ್ಬು ದರ ನಿಗದಿ ಕೇಂದ್ರದ ಅಧಿಕಾರ; ರಾಜ್ಯದ್ದು ಜಾರಿಯ ಕೆಲಸ: ಸಚಿವ ಎಂ ಬಿ ಪಾಟೀಲ್
ಅಗ್ನಿ ಶಾಮಕ ಠಾಣೆ ಹಾಗೂ ಪೊಲೀಸ್ ಇಲಾಖೆಯಿಂದ ಮಂಗಳವಾರ ಸಂಜೆ ಜಂಟಿ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಪಿಎಸ್ಐ ಸಂಜಯ್ ತಿಪ್ಪರೆಡ್ಡಿ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.





