ಬೀದರ್ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಮುಕುಲ್ ಜೈನ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಬಸವಕಲ್ಯಾಣ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮುಕುಲ್ ಜೈನ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಹಾಂತೇಶ ಅವರು ವರ್ಗಾವಣೆ ಮಾಡಿ ನ.3ರಂದು ಆದೇಶಿಸಿದ್ದಾರೆ.
ಇದಕ್ಕೂ ಮುನ್ನ ಅವರು ಐಎಎಸ್ ಅಧಿಕಾರಿ ರಮ್ಯ ಅವರು ಪ್ರಭಾರಿ ಆಯುಕ್ತರಾಗಿ ಕೆಲ ದಿನಗಳ ಕಾಲ ಕೆಲಸ ಮಾಡಿದ್ದಾರೆ. ಇದೀಗ ಆ ಸ್ಥಳಕ್ಕೆ ನೂತನ ಆಯುಕ್ತರಾಗಿ ಮುಕುಲ್ ಜೈನ್ ಅವರನ್ನು ನೇಮಿಸಲಾಗಿದೆ.
2022ರ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಮುಕುಲ್ ಜೈನ್ ಅವರು ಮೂಲತಃ ರಾಜಸ್ಥಾನದ ಅಲ್ವಾರ್‌ನವರು. 2023ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು.





