ಶಿಕ್ಷಣವು ಭಾಷೆ, ಧರ್ಮ, ರಾಜ್ಯ ಅಥವಾ ದೇಶದ ಗಡಿಗಳನ್ನು ಮೀರಿ ಸಾಗುವ ಶಕ್ತಿಯಾಗಿದೆ. ಶಾಂತಿ ಮತ್ತು ಅಭಿವೃದ್ಧಿಗೆ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳು ಅತ್ಯಗತ್ಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಮುಂಡಗೋಡಿನ ಟಿಬೆಟಿಯನ್ ಕಾಲನಿಯಲ್ಲಿರುವ ಗಾಡೆನ್ ಶಾರ್ಟ್ಸೆ ಥೋಸೆಸಂ ನಾರ್ಲಿಂಗ್ ಶಾಲೆಯ ಸ್ಥಾಪನೆಯ 55ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ವೇಳೆ 14ನೇ ಬೌದ್ಧ ಧಮ್ಮ ಗುರು ದಲೈಲಾಮಾ ಅವರ ಆಶೀರ್ವಾದ ಸ್ಮರಿಸಿ, ಭಿಕ್ಷುಗಳು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗಣ್ಯರಿಗೆ ಶುಭಾಶಯಗಳನ್ನು ತಿಳಿಸಿದರು.

“ರಾಜ್ಯ ಸರ್ಕಾರದ ವತಿಯಿಮದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ, ಮೊಟ್ಟೆ, ಹಾಲು, ರಾಗಿ ಮಾಲ್ಟ್, ಉಚಿತ ಪಠ್ಯಪುಸ್ತಕ, ನೋಟುಪುಸ್ತಕ, ಯೂನಿಫಾರ್ಮ್, ಶೂ ಹಾಗೂ ಸಾಕ್ಸ್‌ಗಳನ್ನು ಒದಗಿಸಲಾಗುತ್ತಿದೆ. ರಾಜ್ಯದ ಶಿಕ್ಷಣ ನೀತಿ ವ್ಯವಸ್ಥೆಯಡಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳನ್ನು ಸೇರಿಸಿ ಸುಮಾರು 1.16 ಕೋಟಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣ (Moral Science)ವನ್ನು ಕಡ್ಡಾಯ ವಿಷಯವಾಗಿ ಜಾರಿಗೆ ತರಲಾಗುವುದು. ಇದು ಮಾನವೀಯ ಮೌಲ್ಯಗಳು, ಆರೋಗ್ಯ, ಪರಿಸರ ಜಾಗೃತಿ, ಸಂಚಾರ ಶಿಸ್ತು ಮತ್ತು ನಾಗರಿಕ ಜವಾಬ್ದಾರಿಯನ್ನು ಬೆಳೆಸಲಿದೆ” ಎಂದರು.
ಇದನ್ನೂ ಓದಿ: ಮುಂಡಗೋಡ-ಹಳಿಯಾಳದ ಮದ್ಯ-ಮಟ್ಕಾ ಅಡ್ಡೆಗಳ ಮೇಲೆ ಪೊಲೀಸ್ ದಾಳಿ; ಪಾಳಾ ಭಾಗದ ಮಟ್ಕಾ ದಂಧೆಗೆ ಬೀಳುತ್ತಾ ಬ್ರೇಕ್?
ಕಾರ್ಯಕ್ರಮದಲ್ಲಿ ಗಾಡೆನ್ ಶಾರ್ಟ್ಸೆ ಥೋಸೆಸಂ ನಾರ್ಲಿಂಗ್ ಶಾಲೆಯ ಪ್ರಾಂಶುಪಾಲ ಗೆಶೆ ಲೋಬ್ಸಾಂಗ್ ಛೆರಿಂಗ್, ಕೇಂದ್ರ ಟಿಬೆಟಿಯನ್ ಆಡಳಿತ (CTA)ದ ಮುಖ್ಯ ಪ್ರತಿನಿಧಿ ಅಧಿಕಾರಿ ಜಿಗ್ಮೆ ತುಲ್ತ್ರಿಮ್, ಭದ್ರತಾ ಇಲಾಖೆಯ ಗೌರವಾನ್ವಿತ ಕಲೋನ್ (ಸಚಿವೆ) ಗ್ಯಾರಿ ಡೋಲ್ಮಾ, CTA, ಧರ್ಮಶಾಲಾ ಹಾಗೂ ಅನೇಕ ಭಿಕ್ಷುಗಳು, ಶಿಕ್ಷಕರು ಮತ್ತು ಸಮುದಾಯದ ಮುಖಂಡರು ಭಾಗವಹಿಸಿದ್ದರು.





