ಮುಂಡಗೋಡ ತಾಲೂಕಿನ ಅತ್ತಿವೇರಿ ಗ್ರಾಮಕ್ಕೆ ಸರ್ಕಾರಿ ಬಸ್ಸ ಒಂದನ್ನು ಬಿಡಬೇಕು ಎಂದು ಊರಿನ ಗ್ರಾಮಸ್ಥರು ಮತ್ತು ಸಾಮಾಜಿಕ ಕಾರ್ಯಕರ್ತರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಿ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಗ್ರಾಮದಿಂದ ಪ್ರತಿನಿತ್ಯ ಮಕ್ಕಳು ಶಾಲಾ ಕಾಲೇಜುಗೆ ಪಟ್ಟಣ್ಣಕ್ಕೆ ಹೋಗಬೇಕು ಮತ್ತು ಅನಾರೋಗ್ಯದ ಸಮಯದಲ್ಲಿ ಆಸ್ಪತ್ರೆಗೆ, ಇತರೆ ದಿನಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಪ್ರತಿಯೊಂದಕ್ಕೂ ಮುಂಡಗೋಡ ಪಟ್ಟಣಕ್ಕೆ ಗ್ರಾಮಸ್ಥರು ಬರಬೇಕು.
ಗ್ರಾಮದಿಂದ ತಾಲ್ಲೂಕು ಕೇಂದ್ರಕ್ಕೆ ಇದುವರೆಗೂ ಒಂದೇ ಒಂದು ಬಸ್ಸಿನ ವ್ಯವಸ್ಥೆ ಇರಲಿಲ್ಲ ಮುಖ್ಯ ರಸ್ತೆಯ ವರೆಗೆ ಅಷ್ಟೇ ಬಸ್ಸಿನ ವ್ಯವಸ್ಥೆ ಇತ್ತು ಅಲ್ಲಿಂದ ಸುಮಾರು 4 ರಿಂದ 5 ಕೀ.ಮಿ ವರೆಗೂ ಕಾಲ್ನಡಿಗೆಯಲ್ಲಿ ಗ್ರಾಮಕ್ಕೆ ತೆರಳಬೇಕಿತ್ತು. ಇದರಿಂದ ಗ್ರಾಮಸ್ಥರು ತಮ್ಮ ಊರಿಗೆ ಒಂದು ಬಸ್ಸನ್ನು ಬಿಡುವಂತೆ ದೀರ್ಘಕಾಲದಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದರು. ಅದರ ಫಲವಾಗಿ ಅತ್ತಿವಿರಿ ಗ್ರಾಮಕ್ಕೆ ಕೊನೆಗೆ ಸರ್ಕಾರಿ ಬಸ್ ಸಂಚಾರ ಆರಂಭಗೊಂಡಿದೆ.
ಬಹು ವರ್ಷಗಳಿಂದ ಸಾರಿಗೆ ಸೌಲಭ್ಯಕ್ಕಾಗಿ ಹೋರಾಟ ನಡೆಸಿದ ಗ್ರಾಮಸ್ಥರು ಇಂದು ಆ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಗ್ರಾಮಕ್ಕೆ ಬಸ್ ಮೊದಲ ಬಾರಿಗೆ ಪ್ರವೇಶಿಸಿದ ಕ್ಷಣವನ್ನು ಸ್ಥಳೀಯರು ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭ ಗ್ರಾಮಸ್ಥರು ತಮ್ಮ ಪರವಾಗಿ ನಿಂತು ಸಹಾಯ ಸಹಕಾರ ಕೊಟ್ಟ ದ.ಸಂ.ಸಮಿತಿ ಕಾದ್ರೊಳ್ಳಿ ಬಣದ ಜಿಲ್ಲಾಧ್ಯಕ್ಷರಾದ ಬಸವರಾಜ ಸಂಗಮೇಶ್ವರ ಅವರನ್ನು ಮತ್ತು ಕಾರ್ಯಕರ್ತರನ್ನು ಸನ್ಮಾನಿಸಿ, ಬಸ್ಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಸಿಹಿ ಹಂಚಿಕೊಳ್ಳುವ ಮೂಲಕ ಸಂತೋಷ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕಾರವಾರ | ಮಾಜಾಳಿ ಚೆಕ್ಪೋಸ್ಟ್ನಲ್ಲಿ ದಾಖಲೆ ರಹಿತ ₹1 ಕೋಟಿ ಹಣ ಪತ್ತೆ; ಇಬ್ಬರು ಪೊಲೀಸರ ವಶಕ್ಕೆ
ಕಾರ್ಯಕ್ರಮದಲ್ಲಿ ದ.ಸಂ.ಸಮಿತಿ ಕಾದ್ರೊಳ್ಳಿ ಬಣದ ಜಿಲ್ಲಾಧ್ಯಕ್ಷರಾದ ಬಸವರಾಜ್ ಸಂಗಮೇಶ್ವರ್, ಮೆಹಬೂಬ್ ಸಾಬ್ ಬೀರುವಳ್ಳಿ, ಶ್ರೀ ಶಿವಾಜಿ ಅಮ್ಮಜಿ ಪೀರ್ ಸಾಬ್ ಮತ್ತಿ, ಕಟ್ಟಿ ಚೆನ್ನಯ್ಯ, ದುರ್ಗದ ಮಠ ಬಸವರಾಜ್ ನೀರಲಗಿ, ಮಂಜುನಾಥ ನೀರಲಗಿ, ಶಂಭಾಜಿ ಬ್ಯಾಹಟ್ಟಿ, ಸಂಗನಗೌಡ ತೀರ್ಥ, ಮಂಜುನಾಥ್ ಸಕಾಯಿ, ಚಂದ್ರು ಗೌಡ ಪಾಟೀಲ್ ಮತ್ತು ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.





