ಮುಂಡಗೋಡ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ, ಸುಮಾರು ₹8 ಲಕ್ಷ ಮೌಲ್ಯದ ನಿಷೇಧಿತ ಮಾದಕ ವಸ್ತುವಾದ ಚರಸ್ನ್ನು (ಗಾಂಜಾ ಗೋಂದು) ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿರುವ ಘಟನೆ ನಡೆದಿದೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆ 1985ರ ಕಲಂ 8(c) r/w 20(b)(ii)(B) ಅಡಿ ಪ್ರಕರಣ ದಾಖಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆಯ CPI ರಂಗನಾಥ ನೀಲಮ್ಮನವರ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ, ಆಪಾದಿತನಾದ ಸಚಿನ್, ತಂದೆ ಟೆಕ್ಬಹದ್ದೂರ ಗೋರ್ಖಾ, ಇಂಜಿನೀಯರ್ ವೃತ್ತಿ ಸಾ|| ಸುಭಾಷ್ ನಗರ ಮುಂಡಗೋಡ, ನಿವಾಸಿ, ಈತನು ನಿಷೇಧಿತ ಮಾದಕ ವಸ್ತುವಾದ ಚರಸ್ ಅನ್ನು ಯಾವುದೇ ಪಾಸ್ ಅಥವಾ ಪರವಾನಗಿ ಇಲ್ಲದೆ ಅಕ್ರಮವಾಗಿ ಲಾಭ ಗಳಿಸುವ ಉದ್ದೇಶದಿಂದ ಸಾಗಿಸುತ್ತಿದ್ದ ಎನ್ನಲಾದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಅಬಕಾರಿ ಇಲಾಖೆಯ ಕಾರ್ಯಾಚರಣೆ; ಅಕ್ರಮ ಮದ್ಯ ಸೇರಿ ₹7 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ
ಸುಮಾರು ₹8,00,000 ಮೌಲ್ಯದ 781 ಗ್ರಾಂ ತೂಕದ ಚರಸ್ನನ್ನು ಮಾರಾಟ ಮಾಡಲು, ಆರೋಪಿತನು ಹೀರೋ ಕಂಪನಿಯ ಕಪ್ಪು ಬಣ್ಣದ ಸ್ಪ್ಲೆಂಡರ್ ಮೋಟಾರ್ಸೈಕಲ್ (ನಂಬರ: KA-31/ED-9939) ಮೇಲೆ ಮುಂಡಗೋಡ ಕಡೆಗೆ ಬರುತ್ತಿದ್ದಾಗ, ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಈ ಘಟನೆ ಮುಂಡಗೋಡ ಪಟ್ಟಣದ ಶಿರಸಿ–ಹುಬ್ಬಳ್ಳಿ ಮಾರ್ಗ (ರಾಜ್ಯ ಹೆದ್ದಾರಿ–69) ಮೇಲಿನ ಕೆಎಸ್ಆರ್ಟಿಸಿ ಬಸ್ ಡಿಪೋ ಹತ್ತಿರ ನಡೆದಿದೆ. ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ದೀಪನ್ ಎಮ್,ಎನ್ ಐ,ಪಿ,ಎಸ್ ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಕೃಷ್ಣಮೂರ್ತಿ ಜಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕಾರವಾರ, ಜಗದೀಶ ನಾಯ್ಕ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕಾರವಾರ, ಶ್ರೀಮತಿ ಗೀತಾ ಪಾಟೀಲ ಡಿ.ಎಸ್.ಪಿ ಶಿರಸಿ ರವರ ಮಾರ್ಗದರ್ಶನದಲ್ಲಿ ಮುಂಡಗೋಡ ಪೋಲಿಸ್ ಠಾಣೆಯ CPI ರಂಗನಾಥ ನಿಲಮ್ಮನವರ ಅವರು, PSI ಯಲ್ಲಾಲಿಂಗ ಕುನ್ನುರ ಅವರು, ಸಿಬ್ಬಂದಿಗಳಾದ ಕೋಟೇಶ ನಾಗರೊಳ್ಳಿ, ಮಹಾಂತೇಶ ಕುಂದೋಳ, ಅಣ್ಣಪ್ಪ ಬಡಿಗೇರ, ಶಿವಾನಂದ ದಾನಣ್ಣನವರ, ಅನ್ವರ್ ಬಮ್ಮಿಗಟ್ಟಿ, ಗುರು ಬಿಶಟ್ಟಪ್ಪನವರ ಅವರು ಭಾಗವಹಿಸಿದ್ದರು.





