ಮುಂಡಗೋಡ | ಹಾವುಗಳ ರಕ್ಷಣೆಯ ಜೊತೆಗೆ ಜಾಗೃತಿ: ಅರಣ್ಯಾಧಿಕಾರಿಗಳ ಮಾದರಿ ಕಾರ್ಯ

Date:

ಮುಂಡಗೋಡ: ಹಾವುಗಳನ್ನು ಕಂಡರೆ ಯಾರಿಗೆ ತಾನೇ ಭಯವೀರುವುದಿಲ್ಲ ಹಾವು ಹೋದ ದಾರಿ ಎಂದು ಗೊತ್ತಾದರೆ ಸಾಕು ಎಷ್ಟೋ ಜನ ಆ ದಾರಿಯಲ್ಲಿ ತಿರುಗಾಡಲು ಸಹ ಭಯಪಡುತ್ತಾರೆ.  ಎಲ್ಲಾ ಹಾವುಗಳು ವಿಷಕಾರಿ ಎಂದು ತಿಳಿದು ಯಾರಿಗೂ ತೊಂದರೆ ಕೊಡದೆ ಇದ್ದರೂ ಅವುಗಳನ್ನು ಕೊಲ್ಲುವರು ಇದ್ದಾರೆ. ಹಾಗೂ ಹಾವುಗಳು ಬಗ್ಗೆ ನಮ್ಮ ಜನರಲ್ಲಿ ಇರುವ ಅತಿಯಾದ ಮೂಢನಂಬಿಕೆ ಅವುಗಳ ಸಂತತಿ ಕ್ರಮೇಣವಾಗಿ ಕಡಿಮೆ ಆಗಲು ಕಾರಣವಾಗುತ್ತಿದೆ.

ಆದರೆ ಮುಂಡಗೋಡ ತಾಲ್ಲೂಕಿನ ಪಾಳಾ ಉಪವಲಯ ಅರಣ್ಯಧಿಕಾರಿ ಸುನೀಲ್ ಹೊನ್ನಾವರ ಮತ್ತು ಪಾಳಾ ಗಸ್ತು ಅರಣ್ಯ ಪಾಲಕರಾದ ಮುತ್ತುರಾಜ ಹಳ್ಳಿ ಇಬ್ಬರು ಅರಣ್ಯ ಇಲಾಖೆಯ ಸಿಬ್ಬಂದಿಗಳು ನಾಗರಹಾವುಗಳು ಮತ್ತು ಇತರೆ ಹಾವುಗಳ ಬಗ್ಗೆ ಜನರಲ್ಲಿ ಇರುವ ಮೂಡನಂಬಿಕೆ ಹೊಗಲಾಡಿಸಿ ಪರಿಸರದ ಸಮತೋಲನಕ್ಕೆ ಸರಿಸೃಪಗಳ ಅವಶ್ಯಕತೆ ಇದೆ ಎಂದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇವರು ತಮ್ಮ ಜೀವದ ಹಂಗು ತೊರೆದು ಹಾವುಗಳನ್ನು ರಕ್ಷಣೆ ಮಾಡುತ್ತಿರುವುದನ್ನು ನೋಡಿದ ತಾಲ್ಲೂಕಿನ ಜನತೆ  ಇವರು ನೀಜವಾದ ವನ್ಯಜೀವಿ ಸಂರಕ್ಷಕರು ಎಂದು ಇವರ ಕಾರ್ಯಕ್ಕೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಇತ್ತೀಚೆಗೆ ಮುಂಡಗೋಡ ತಾಲ್ಲೂಕಿನ ಮಳಗಿಯ ಇಂದ್ರಾನಗರ ಪ್ಲಾಟ್‌ನಲ್ಲಿ ಬಂದಿದ್ದ ದೊಡ್ಡ ಗಾತ್ರದ ನಾಗರಹಾವನ್ನು ಈ ಇಬ್ಬರೂ ಅಧಿಕಾರಿಗಳು ಅತ್ಯಂತ ನೈಪುಣ್ಯದಿಂದ ರಕ್ಷಿಸಿ, ಕಾಡಿಗೆ ಬಿಡುವ ಮೂಲಕ ಮತ್ತೊಮ್ಮೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು. ಅಷ್ಟೇ ಅಲ್ಲದೆ ಅನೇಕ ಕಡೆ ಇದೆ ರೀತಿ ಇಬ್ಬರೂ ಅಧಿಕಾರಿಗಳು ಅನೇಕ ಹಾವುಗಳ ರಕ್ಷಣೆಯನ್ನು ಮಾಡಿದ್ದಾರೆ. ಅಧಿಕಾರಿಗಳ ಮೆಚ್ಚುಗೆಗೆ ಕಾರಣವೇನೆಂದರೆ ಈ ಇಬ್ಬರು ಅಧಿಕಾರಿಗಳು ಕೇವಲ ಹಾವುಗಳನ್ನು ಹಿಡಿದು ಹೋಗುವುದಿಲ್ಲ. ಅವುಗಳ ಜೀವ ಸಂರಕ್ಷಣೆ ಮಾಡಿ ಅವುಗಳ ಜೀವ ರಕ್ಷಕರಾಗಿದ್ದಾರೆ ಹಾಗೂ  ಪರಿಸರ ಸಮತೋಲನ ಕಾಯಲು ನೆರವಾಗಿದ್ದಾರೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಪ್ರತಿ ರಕ್ಷಣಾ ಕಾರ್ಯದ ನಂತರವೂ ಜನರಿಗೆ ಹಾವುಗಳ ಬಗ್ಗೆ ಇರುವ ಮೂಢನಂಬಿಕೆಗಳನ್ನು ಹೋಗಲಾಡಿಸಿ, ಹಾವುಗಳು ಪರಿಸರಕ್ಕೆ ಹೇಗೆ ಮುಖ್ಯ ಎಂದು ಮನವರಿಕೆ ಮಾಡಿಕೊಡುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಪರವಾನಗಿ ಇಲ್ಲದೆ ಮರಳು ಸಂಗ್ರಹ; ಅಧಿಕಾರಿಗಳ ವಿರುದ್ಧ ಜನಾಕ್ರೋಶ

ಅಪಾಯದಲ್ಲಿ ಸೇವೆ: ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ಮನೆ-ಮನೆಗೆ ತೆರಳಿ ಸಾರ್ವಜನಿಕ ಸ್ಥಳಗಳಿಂದ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಬೇರೆ ಕಡೆ ಬೀಡುವ ಪ್ರಕ್ರಿಯೆ ತುಂಬಾ ಅಪಾಯದಿಂದ ಕೂಡಿರುತ್ತದೆ. ಈ ಸಾಹಸದ  ಕಾರ್ಯಕ್ಕೆ ಇವರ ಬಗ್ಗೆ ಜನರಲ್ಲಿ ಅಪಾರ ಗೌರವ ಮೂಡಿದೆ. ಸಮರ್ಪಣಾ ಮನೋಭಾವದ ಅಧಿಕಾರಿಗಳು ನಮ್ಮ ತಾಲ್ಲೂಕಿಗೆ ಹೆಮ್ಮೆ ಎಂದು ಸ್ಥಳಿಯರ ಅಭಿಪ್ರಾಯವಾಗಿದೆ. ಕೇವಲ ಅವರು ತಮ್ಮ ಕರ್ತವ್ಯ ನಿರ್ವಹಿಸದೆ, ಪ್ರೀತಿಯಿಂದ ಪ್ರಾಣಿಗಳನ್ನು ರಕ್ಷಿಸುತ್ತಾರೆ ಎಂಬ ಅಭಿಪ್ರಾಯ ಜನರಲ್ಲಿದೆ. ಮುಂಡಗೋಡ ತಾಲೂಕಿನ ಜನರ ಹೃದಗಳನ್ನು ಗೆದ್ದಿರುವ ಈ ಇಬ್ಬರು ಅರಣ್ಯಾಧಿಕಾರಿಗಳ ಸೇವೆ ಹೀಗೇ ಮುಂದುವರಿಯಲಿ ಎಂಬುದು ತಾಲ್ಲೂಕಿನ ಪ್ರಾಣಿ ಪ್ರಿಯರ ಆಶಯವಾಗಿದೆ .

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...