ಉತ್ತರ ಕನ್ನಡ: ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಹೊಸದಾಗಿ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಇದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಮುಂಡಗೋಡ ತಾಲೂಕಿನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ವಿಶೇಷ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ನೂತನ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ಅಧಿಕೃತ ಇ-ಸ್ಟ್ಯಾಂಪ್ ಮಾರಾಟ ಕೇಂದ್ರಗಳ (ACC) ಪ್ರತಿನಿಧಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರ ಆದೇಶದನ್ವಯ ಈ ತರಬೇತಿಯನ್ನು ಆಯೋಜಿಸಲಾಗಿದ್ದು, ಡಿಜಿಟಲ್ ಇ-ಸ್ಟ್ಯಾಂಪ್‌ಗಳ ಪ್ರಿಂಟ್ ತೆಗೆಯುವುದು ಮತ್ತು ಅವುಗಳನ್ನು ಯಾವೆಲ್ಲಾ ಉದ್ದೇಶಗಳಿಗೆ ಬಳಸಬಹುದು ಎಂಬುದರ ಬಗ್ಗೆ ತರಬೇತಿಯಲ್ಲಿ ಸವಿಸ್ತಾರವಾಗಿ ಮಾಹಿತಿ ನೀಡಲಾಗುವುದು.
ಈ ತರಬೇತಿ ಕಾರ್ಯಕ್ರಮವು ಮುಂಡಗೋಡಿನ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ದಿನಾಂಕ 13-01-2026 ರಂದು ಮಧ್ಯಾಹ್ನ 04:00 ರಿಂದ 05:00 ಗಂಟೆಯವರೆಗೆ ನಡೆಯಲಿದೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಬೇಡ್ತಿ-ವರದಾ ಯೋಜನೆಗೆ ಶಿವರಾಮ ಹೆಬ್ಬಾರ್ ವಿರೋಧ; ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಬೃಹತ್ ಸಮಾವೇಶ
ಮುಂಡಗೋಡಿನ ಇ-ಸ್ಟ್ಯಾಂಪ್ ಮಾರಾಟ ಕೇಂದ್ರದ ಪ್ರತಿನಿಧಿಗಳು, ಗ್ರಾಮ ಓನ್, ಕರ್ನಾಟಕ ಓನ್, ಬಳಕೆದಾರರು ಮತ್ತು ಸಾರ್ವಜನಿಕರು ಈ ತರಬೇತಿಯಲ್ಲಿ ಕಡ್ಡಾಯವಾಗಿ ಭಾಗವಹಿಸಿ, ಡಿಜಿಟಲ್ ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳಬೇಕೆಂದು ಉಪ ನೋಂದಣಾಧಿಕಾರಿಗಳು ತಿಳಿಸಿದ್ದಾರೆ.





