ಮುಂಡಗೋಡ | ಕಾಳಗನಕೊಪ್ಪ ಶಾಲಾ ಶಿಕ್ಷಕಿ ಅಮಾನತು; ಪುನರ್‌ ನೇಮಕಕ್ಕೆ ಗ್ರಾಮಸ್ಥರ ಆಗ್ರಹ

Date:

ಮುಂಡಗೋಡ ಪಟ್ಟಣ ವ್ಯಾಪ್ತಿಯ ಕಾಳಗನಕೊಪ್ಪದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಭಾರತಿ ನಾಯ್ಕ್ ಅವರ ಅಮಾನತು ಆದೇಶವನ್ನು ಹಿಂಪಡೆದು, ಅದೇ ಶಾಲೆಗೆ ಪುನರ್‌ನೇಮಕ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಭಾರತಿ ನಾಯ್ಕ ಅವರು, ಕಾಳಗನಕೊಪ್ಪ ಶಾಲೆಯ 2ನೇ ತರಗತಿ ವಿದ್ಯಾರ್ಥಿಗೆ “ಬಾಸುಂಡೆ ಬರುವಂತೆ ಹೊಡೆದಿದ್ದಾರೆ” ಎಂಬ ಆರೋಪ ಕೇಳಿಬಂದ ಹಿನ್ನೆಲೆ ಇಲಾಖೆಯು ತುರ್ತು ಕ್ರಮ ಕೈಗೊಂಡು ಅವರನ್ನು ಅಮಾನತು ಮಾಡಿದೆ. ಆದರೆ, ಈ ಕ್ರಮದ ವಿರುದ್ಧ ಗ್ರಾಮಸ್ಥರು, ಎಸ್‌ಡಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರು, ವಿದ್ಯಾರ್ಥಿಯ ತಾಯಿ ಹಾಗೂ ಹಳ್ಳಿಯ ಮಹಿಳೆಯರು, ಪುರುಷರು ಎಲ್ಲರೂ ಈ ಕ್ರಮವನ್ನು ಖಂಡಿಸಿ ಶಿಕ್ಷಕಿಯನ್ನು ಮತ್ತೆ ಇದೇ ಶಾಲೆಗೆ ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಶಾಲಾ ಶಿಕ್ಷಕಿ ಕಳೆದ 2 ವರ್ಷಗಳಿಂದ ಆ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರು ಬಂದ ಮೇಲೆಯೇ ಮಕ್ಕಳ ಓದು-ಬರಹದಲ್ಲಿ ಹಾಗೂ ಶಿಸ್ತು-ಸಂಸ್ಕಾರಗಳಲ್ಲಿ ಗಮನಾರ್ಹ ಬದಲಾವಣೆ ಆಗಿದೆ. “ಅವಳು ಕೇವಲ ಶಿಕ್ಷಕಿ ಮಾತ್ರವಲ್ಲ, ನಮ್ಮ ಮಕ್ಕಳಿಗೆ ತಾಯಿ ಸಮಾನ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತನ್ನ ಮಗುವಿನಂತೆ ನೋಡಿಕೊಳ್ಳುತ್ತಾಳೆ. ಶಾಲೆಗೆ ಬಂದ ಮೇಲೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಅಪಾರ ಪ್ರಗತಿ ಕಂಡಿದ್ದೇವೆ” ಎನ್ನುತ್ತಾರೆ ಪೋಷಕರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2025 08 12 at 5.44.39 PM

ಆರೋಪದ ದಿನ ನಡೆದ ಘಟನೆ ಕುರಿತು ಗ್ರಾಮಸ್ಥರು, “ಮಕ್ಕಳು ಓದದೆ ಇದ್ದಾಗ ಅವರು ಒಂದು ಏಟು ಬೆನ್ನಿನ ಮೇಲೆ ಹೊಡೆದಿದ್ದಾರೆ ಅಷ್ಟೇ. ಓದದೆ ಇದ್ದಾಗ ಮತ್ತು ಅವರು ಹೇಳಿದ್ದನ್ನು ಕೇಳದೆ ಇದ್ದಾಗ ಶಿಕ್ಷಕರಾದವರು ಗದರುವುದು, ಹೊಡೆಯುವುದು ಸಾಮಾನ್ಯ. ಎಷ್ಟೋ ಸಲ ನಾವೇ ಅವರಿಗೆ ಹೇಳಿರುತ್ತೇವೆ. ಶಾಲೆಯಿಂದ ಸಂಜೆ ಮನೆಗೆ ಹೋದ ಮಗು ತನ್ನ ಅಜ್ಜಿ ಬೆನ್ನಿನ ಮೇಲೆ ಝಂಡು ಬಾಮ್ ಹಚ್ಚಿದಾಗ ಅದರ ಉರಿ ತಾಳಲಾರದೆ ಬೆನ್ನನ್ನು ಗೋಡೆಗೆ ಉಜ್ಜಿದರಿಂದ ಬೆನ್ನು ಕೆಂಪಾಗಿದೆ ಅಷ್ಟೇ. ಬೆಳಿಗ್ಗೆ 11.30ಕ್ಕೆ ಶಿಕ್ಷಕಿ ಹೊಡೆದಿದ್ದು ಅಲ್ಲಿಂದ ಮಗು ಶಾಲೆಯಲ್ಲಿ ಓದಿ ಬರೆದು ಊಟ ಮಾಡಿ ಸಂಜೆ ಮೇಲೆ ಈ ವಿಷಯ ಗೊತ್ತಾಗಿದೆ. ಆದ್ದರಿಂದ ಇದು ಶಿಕ್ಷಕಿ ಹೊಡೆತದಿಂದ ಆಗಿದ್ದಲ್ಲ ಎಂಬುದು ಸ್ಪಷ್ಟ. ವಿನಾಃ ಕಾರಣ ಅವರ ಮೇಲೆ ಅಪಾದನೆ ಹಾಕಲಾಗುತ್ತಿದೆ ಎಂದು ಪಾಲಕರು ಹೇಳಿದರು. ಇದನ್ನು ಹೊಡೆದ ಪರಿಣಾಮ ಎಂದು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ” ಎಂದು ಗ್ರಾಮಸ್ಥರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ | ಕುಮಟಾ ಉಪವಿಭಾಗದ ಸಹಾಯಕ ಆಯುಕ್ತರಾಗಿ ಪಿ ಶ್ರವಣ್ ಕುಮಾರ್ ನೇಮಕ

ಈ ಸಂದರ್ಭದಲ್ಲಿ ಗ್ರಾಮಸ್ಥರು, “ಶಾಲೆಯಲ್ಲಿ ಶೌಚಾಲಯ, ಅಡುಗೆಮನೆ, ಕಾಂಪೌಂಡ್ ವಾಲ್ ಸೇರಿ ಹಲವು ಮೂಲಸೌಕರ್ಯಗಳು ಇಲ್ಲ. ಇಷ್ಟು ಸಮಸ್ಯೆಗಳಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಆದರೆ, ಇಂಥಾ ಸಣ್ಣ ವಿಚಾರಕ್ಕೆ ಶಿಕ್ಷಕಿಯನ್ನು ಅಮಾನತು ಮಾಡಿರುವುದು ದೊಡ್ಡ ಅನ್ಯಾಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಯ ತಾಯಿಯೂ ಕೂಡ ಶಿಕ್ಷಕಿಯ ಪರ ನಿಂತು, “ನನಗೆ ಈ ಶಿಕ್ಷಕಿಯ ಮೇಲೆ ಸಂಪೂರ್ಣ ವಿಶ್ವಾಸವಿದೆ. ನನ್ನ ಮಗುವನ್ನು ಯಾವಾಗಲೂ ಕಾಳಜಿಯಿಂದ ನೋಡಿಕೊಂಡಿದ್ದಾರೆ. ತಕ್ಷಣ ಅಮಾನತು ಹಿಂಪಡೆದು ನಮ್ಮ ಶಾಲೆಗೆ ಅವರನ್ನು ಹಿಂತಿರುಗಿಸಬೇಕು” ಎಂದು ಮನವಿ ಮಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...