ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದ ಹಿಂದಿನ ವರ್ಷ 2022ರಲ್ಲಿ ಪ್ರಧಾನಿ ಮೋದಿ ಮೈಸೂರಿನಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿದ್ದರು. 15 ಗಂಟೆಗಳ ಕಾಲ ಮೈಸೂರಿನಲ್ಲಿದ್ದ ಅವರು ಸಾರ್ವಜನಿಕ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಯೋಗ ಮಾಡಿ, ಭಾಷಣಗೈದು ಹೋಗಿದ್ದರು.
ಅಂದು, ಅವರ ಆ 15 ಗಂಟೆಗಳ ಪ್ರವಾಸ ಮತ್ತು ಗರಿಷ್ಠ 2 ಗಂಟೆಗಳ ಕಾರ್ಯಕ್ರಮಕ್ಕಾಗಿ ಬರೋಬ್ಬರಿ 21.6 ಕೋಟಿ ರೂ. ವೆಚ್ಚವಾಗಿತ್ತು. ಅಂದರೆ, 15 ಗಂಟೆಗಳ ಪ್ರವಾಸದಲ್ಲಿ ಗಂಟೆಗೆ ಸರಾಸರಿ 1.4 ಕೋಟಿ ರೂ. ವೆಚ್ಚವಾಗಿತ್ತು. 21 ಕೋಟಿ ರೂ. ವ್ಯಯಿಸಿ ಯೋಗ ಮಾಡಿದ ದುಬಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದರೆ, ತಪ್ಪಾಗಲಾದರು.
ಅದಾಗ್ಯೂ, ಆ ಯೋಗ ದಿನದ ಆಚರಣೆಯಿಂದ ರಾಜ್ಯಕ್ಕಾಗಲೀ, ಮೈಸೂರಿಗಾಗಲೀ ಯಾವುದೇ ಪ್ರಯೋಜನವಾಗಿದ್ದು ಈವರೆಗೆ ಕಾಣಸಿಗುತ್ತಿಲ್ಲ.
ಅಂದು, ಜೂನ್ 2022ರ ಜೂನ್ 21ರಂದು ಮೈಸೂರಿನಲ್ಲಿ ಯೋಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದ ಮೋದಿ, 45 ನಿಮಿಷ ಯೋಗ ಮಾಡಿ, ರಾಮ ಮನೆತನದ ಪ್ರಮೋದಾ ದೇವಿ (ಹಾಲಿ ಸಂಸದ ಯದುವೀರ್ ಒಡೆಯಾರ್ ತಾಯಿ) ಅವರ ಮನೆಯಲ್ಲಿ ರಾಜಾತಿಥ್ಯ ಪಡೆದು, ಬೆಳ್ಳಿ ತಟ್ಟೆಯಲ್ಲಿ ಉಪಹಾರ ತಿಂದು ದೆಹಲಿಗೆ ತೆರಳಿದ್ದರು.
ದೇಶ ಸ್ವಾತಂತ್ರ್ಯಗೊಂಡು 75 ವರ್ಷಗಳ ಪೂರೈಸಿದ್ದ ಅಮೃತ ಮಹೋತ್ಸವದ ಆ ವರ್ಷ ಮೋದಿ ಯೋಗದಿನವನ್ನು ಮೈಸೂರಿನಲ್ಲಿ ಆಚರಿಸಿದ್ದು, ಹಲವಾರು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಮೈಸೂರಿನಲ್ಲಿ ಯೋಗ ವಿಶ್ವವಿದ್ಯಾಲಯ ತೆರೆಯಲಾಗುತ್ತದೆ ಎಂಬ ಚರ್ಚೆ ಆಗ್ಗಾಗ್ಗೆ ನಡೆದಿತ್ತು. ಆದರೆ, ಅದರ ಯಾವುದೇ ಕುರುಹು ಈವರೆಗೆ ದೊರೆತಿಲ್ಲ.
🧘♂️ 𝐀𝐡𝐚𝐧𝐤𝐚𝐫𝐚𝐬𝐚𝐧𝐚, 𝐩𝐫𝐨 𝐦𝐚𝐱 𝐮𝐥𝐭𝐫𝐚@narendramodi‘s 15-hour trip to Mysore for World Yoga Day in 2022—on the eve of assembly elections in Karnataka—cost ₹21.6 crore.
Or, ₹1.4 crore per hour.
Or, ₹2.4 lakh per minute
Multiply that by 10, add 28% GST https://t.co/o86q2zJYJu pic.twitter.com/wlh2RYDWcS
— churumuri (@churumuri) June 21, 2024
ಇದೀಗ, ಯೋಗದಲ್ಲಿ ಭಾಗಿಯಾಗಿ 2 ವರ್ಷಗಳ ಕಳೆದಿವೆ. ಯೋಗ ವಿಶ್ವವಿದ್ಯಾಲಯ ನಿರ್ಮಾಣ ಮಾಡದೇ ಇದ್ದರೂ, ಪರವಾಗಿಲ್ಲ. ಕನಿಷ್ಠ, ಯೋಗ ಭವನವನ್ನಾದರೂ ನಿರ್ಮಾಣ ಮಾಡಿ ಎಂಬ ಬೇಡಿಕೆಯನ್ನ ಮೈಸೂರಿನ ಯೋಗಾಸಕ್ತರು ಆಯುಷ್ ಇಲಾಖೆಯ ಮುಂದಿಟ್ಟಿದ್ದಾರೆ. ಆದರೆ, ಅದಕ್ಕೂ ಯಾವುದೇ ಸ್ಪಂದನೆ ತೊರೆದಿಲ್ಲ.
ಮೋದಿ ಅವರು ಬಂದರು, ನಾಲ್ಕಾರು ಯೋಗಾಸನಗಳನ್ನು ಮಾಡಿದರು, ಅಬ್ಬರದ ಭಾಷಣ ಮಾಡಿ ಪ್ರಚಾರ ಪಡೆದರು, ರಾಜಾತಿಥ್ಯ ಪಡೆದು ಮರಳಿದರು. ಇದಕ್ಕಾಗಿ ಖರ್ಚಾಗಿದ್ದು ಬರೋಬ್ಬರಿ 21.6 ಕೋಟಿ ರೂ.ಗಳು. ಆದರೆ, ಮೈಸೂರಿಗೆ ದೊರೆತದ್ದು, ಶೂನ್ಯ ಪ್ರತಿಫಲ.




