ಮೈಸೂರು ನಗರದ ಮಂಚೇಗೌಡನ ಕೊಪ್ಪಲಿನಲ್ಲಿರುವ ಪ್ರತಿಮಾ ನ್ಯಾಯಬೆಲೆ ಅಂಗಡಿಯ ಮಾಲೀಕ ರಾಮಚಂದ್ರ ಅವರು ಸರಿಯಾದ ಸಮಯಕ್ಕೆ ಪಡಿತರ ನೀಡದೆ, ಅನಾವಶ್ಯಕ ಕಾಲಾಹರಣ ಮಾಡುತಿದ್ದ ಬಗ್ಗೆ ಪ್ರಶ್ನಿಸಿದ್ದಕ್ಕೆ ಅವಾಚ್ಯವಾಗಿ ನಿಂದಿಸಿ, ದಬ್ಬಾಳಿಕೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈದಿನ.ಕಾಮ್ ಜೊತೆ ಮಾತನಾಡಿದ ಸ್ವರ್ಣರವರು, ಮೈಸೂರು ನಗರದ, ಹೆಬ್ಬಾಳ ವ್ಯಾಪ್ತಿಯ, ಮಂಚೇಗೌಡನ ಕೊಪ್ಪಲಿನಲ್ಲಿರುವ ಪ್ರತಿಮಾ ನ್ಯಾಯಬೆಲೆ ಅಂಗಡಿಯ ಪಡಿತರ ಫಲಾನುಭವಿಯಾಗಿದ್ದು, ಜನವರಿ ತಿಂಗಳ ಪಡಿತರ ತರಲು ಬುಧವಾರ (ದಿನಾಂಕ-21-01-2026)ರಂದು ಬೆಳಗ್ಗೆ ಸರಿಸುಮಾರು 7-30ಕ್ಕೆ ತೆರಳಿರುತ್ತೇನೆ. ನ್ಯಾಯಬೆಲೆ ಅಂಗಡಿ ತೆರೆದಿದ್ದರು ಮಾಲೀಕ ಯಾವುದೇ ಮಾಹಿತಿ ನೀಡದೆ ಅನಾಗತ್ಯ ಕಾಲಾಹರಣ ಮಾಡುತಿದ್ದರು.
ಮೈಸೂರು ನಗರದಲ್ಲಿ ಸರ್ವೇ ಸಾಮಾನ್ಯವಾಗಿ ಬೆಳಗ್ಗೆ ಜೀವನಾಗತ್ಯ ಕೆಲಸ ನಿರ್ವಹಿಸಿ ತಮ್ಮ ತಮ್ಮ ಕೆಲಸಕ್ಕೆ ಹೋರಾಡಬೇಕಾದ ಅನಿವಾರ್ಯ ಸಮಯ. ಅಂತಹದ್ದರಲ್ಲಿ ಗಂಟೆ 8-45 ಆದರೂ ಸಹ ಸರತಿ ಸಾಲಿನಲ್ಲೇ ನಿಂತಿದ್ದರು ಪಡಿತರ ನೀಡುತ್ತಿರಲಿಲ್ಲ.
ಸುಮಾರು 50ಕ್ಕೂ ಹೆಚ್ಚು ಜನರು ಸಹ ಕಾದು ನಿಂತಿದ್ದರು.
ಇದನ್ನೆಲ್ಲಾ ಗಮನಿಸಿ ನ್ಯಾಯಬೆಲೆ ಅಂಗಡಿ ಮಾಲೀಕ ರಾಮಚಂದ್ರ ಆರಾಮಾಗಿ ಕುಳಿತ್ತಿದ್ದನ್ನು ಕಂಡು ಪಡಿತರ ನೀಡದಿರುವುದಕ್ಕೆ ಏನು ಸಮಸ್ಯೆ?, ಇಷ್ಟು ಹೊತ್ತು ಕಾದರು ಕೊಡುತಿಲ್ಲವಲ್ಲ? ಎಂದು ಪ್ರಶ್ನಿಸಿದ್ದಕ್ಕೆ, ಸರ್ಕಾರದಲ್ಲೇ ಅಕ್ಕಿ ಇಲ್ಲ ಹೋಗಮ್ಮ(ಅವಾಚ್ಯ ನಿಂದನೆ ಮೂಲಕ), ಕಂಪ್ಯೂಟರ್ ಸಮಸ್ಯೆ ಸರ್ವರ್ ಇಲ್ಲ ಎಂತೆಲ್ಲ ವಾದ ಮುಂದುವರೆಸುತ್ತಾರೆ, ಅದೇನು ಸಮಸ್ಯೆ ತೋರಿಸಿ ಎಂದಾಗ ನಿಮ್ ಅಪ್ಪಂದ ಲ್ಯಾಪ್ಟಾಪ್ ಎಂದು ಏಕವಚನದಲ್ಲಿ ನಿಂದಿಸಿದ್ದಾರೆ. ಅಲ್ಲದೇ ಅಸಭ್ಯವಾಗಿ, ಅವಾಚ್ಯವಾಗಿ ಮಾತನಾಡಿದ್ದಾರೆ. ಇದಕ್ಕೆ ಪೂರಕವಾಗಿ ವಿಡಿಯೋ ರೆಕಾರ್ಡ್ ಇದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುತ್ತದೆ. ಅಲ್ಲದೇ, ಸರ್ಕಾರವನ್ನು ಹೋಗಿ ಪ್ರಶ್ನಿಸು, ಬೇರೆ ಅಂಗಡಿಯಲ್ಲಿ ತೆಗೆದುಕೋ, ಹೇಯ್ ಸೈಡ್‌ಗೆ ಹೋಗು, ಎಂತೆಲ್ಲಾ ದುರಂಹಕಾರದಿಂದ ಮಾತನಾಡಿ, ದುರ್ವರ್ತನೆ ತೋರಿರುತ್ತಾರೆ. ಜೊತೆಗೆ ಅಕ್ಕಿ ಇಲ್ಲ ಎಂದು ದಬ್ಬಾಳಿಕೆ ಮಾಡಿರುತ್ತಾರೆ ಎಂದು ಆರೋಪ ಮಾಡಿದರು.
ಸರ್ಕಾರದ ಅನ್ನಭಾಗ್ಯ ಯೋಜನೆ ಉಚಿತವಾಗಿರುವಾಗ ಪ್ರತಿಯೊಬ್ಬರಿಂದಲೂ ₹10 ರೂಪಾಯಿ ವಸೂಲಿ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಇದನ್ನ ಸಂಬಂಧಪಟ್ಟ ಅಧಿಕಾರಿಗಳು, ಆಹಾರ ಇಲಾಖೆ ಕ್ರಮ ವಹಿಸಬೇಕು. ಸಮಸ್ಯೆ ಬಗ್ಗೆ ದೂರು ನೀಡಲು ಸಹಾಯವಾಣಿ 1967 ಕರೆ ಮಾಡಿದರೆ ಯಾವುದೇ ಪ್ರಯೋಜನವಾಗಿರುವುದಿಲ್ಲ. ಸಹಾಯವಾಣಿ ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸುತಿಲ್ಲ. ಹಾಗೆಯೇ, ಕರೆ ಮಾಡಲು ಸಾಧ್ಯವೇ ಆಗದ ಪರಿಸ್ಥಿತಿ. ಹೀಗಿರುವಾಗ ಇಂತಹ ಸಹಾಯವಾಣಿ ಏತಕ್ಕೆ
ಇರಿಸಿದ್ದಾರೆ? ಎಂದು ಪ್ರಶ್ನೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ‘ಪ್ರಸಾದ್ ಯೋಜನೆ’ಯಿಂದ ಚಾಮುಂಡಿಬೆಟ್ಟ ಪಾರಂಪರಿಕತೆಗೆ ದಕ್ಕೆಯಾಗದಂತೆ ಅಭಿವೃದ್ಧಿ ಮಾಡಲಾಗುವುದು: ಸಚಿವ ಮಹದೇವಪ್ಪ
ಪ್ರಶ್ನೆ ಮಾಡಿದಕ್ಕೆ ನ್ಯಾಯಬೆಲೆ ಅಂಗಡಿ ಮಾಲೀಕ ಅವಾಚ್ಯವಾಗಿ ನಿಂದಿಸಿ, ದಬ್ಬಾಳಿಕೆ ನಡೆಸಿರುವುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ರೀತ್ಯಾ ಕ್ರಮ ವಹಿಸಬೇಕು, ನ್ಯಾಯಬೆಲೆ ಅಂಗಡಿ ಪರವಾನಿಗೆ ರದ್ದುಗೊಳಿಸಬೇಕು. ಮಹಿಳಾ ಆಯೋಗ ಸೇರಿದಂತೆ, ಮೇಲಾಧಿಕಾರಿಗಳಿಗೆ ಈ ಸಂಬಂಧ ದೂರು ಸಲ್ಲಿಸುವುದಾಗಿ ಹೇಳಿದರು.





