ಮೈಸೂರು-ಕುಶಾಲನಗರ ರೈಲು ಮಾರ್ಗ ಯೋಜನೆ ರದ್ದಾಗಿದೆ. ಸುಮಾರು 87.2ಕಿಮೀ ಉದ್ದದ ರೈಲು ಮಾರ್ಗ ಇದಾಗಿದ್ದು, ಈ ಯೋಜನೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚೆಂದು ಕೈಬಿಡಲಾಗಿದೆ. ಕೊಡಗಿಗೆ ರೈಲು ಸಂಪರ್ಕ ಕಲ್ಪಿಸುವ ಬಹುದಿನಗಳ ಕನಸು ಬಾಗಶಃ ಭಗ್ನಗೊಂಡಿದೆ.
2018-19ರ ಆರ್ಥಿಕ ವರ್ಷದಲ್ಲಿ ಅನುಮೋದನೆ ದೊರೆತು, ಪ್ರಸ್ತಾವಿತ ಯೋಜನೆ ವೆಚ್ಚ ₹1,800 ರೂಪಾಯಿ ಎಂದು ಅಂದಾಜಿಸಲಾಗಿತ್ತು. ಮೈಸೂರಿನಿಂದ ಕುಶಾಲನಗರ ವರೆಗಿನ ರೈಲು ಸಂಪರ್ಕಕ್ಕಾಗಿ ಸುಮಾರು 1,379 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದರು. ಆದ್ದರಿಂದ, 2022 ಜೂನ್ ರಲ್ಲಿ ಅಂತಿಮ ಸ್ಥಳ(ಎಫ್ಎಲ್ಎಸ್ )ಸಮೀಕ್ಷೆಗೆ ಅವಕಾಶ ಕಲ್ಪಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಡಿ.ವೈ.ಚಂದ್ರಚೂಡ್ ಅಧಿಕಾರದಲ್ಲಿದ್ದಾಗ ಉಮರ್ ಖಾಲಿದ್ ಪ್ರಕರಣ ಯಾಕೆ ಕಾಣಲಿಲ್ಲ?
ಇದೀಗ ರೈಲ್ವೇ ಅಧಿಕಾರಿಗಳು ಪ್ರತಿಕ್ರಿಯಿಸಿ ಯೋಜನೆಯನ್ನು ಕೈಬಿಡಲಾಗಿದೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗದ ವಾಣಿಜ್ಯ ವ್ಯವಸ್ಥಾಪಕ ಗಿರೀಶ್ ಧರ್ಮರಾಜ್ ಕಲಗೊಂಡ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಆದಾಯ ನಿರೀಕ್ಷೆಯ ಬಗ್ಗೆ ಸರ್ವೇ ನಡೆಸಿ ಆರ್ಥಿಕವಾಗಿ ಆದಾಯ ತರುವುದಿಲ್ಲ ಎನ್ನುವ ನಿಲುವಿಗೆ ಬಂದಿದ್ದು, ಈ ಮಾರ್ಗದಲ್ಲಿ ನಿರೀಕ್ಷಿತ ಪ್ರಯಾಣಿಕರು, ಸರಕು ಸಾಗಣಿಕೆ ಸಾಮರ್ಥ್ಯ ಹೊಂದಿರುವುದಿಲ್ಲ. ಇದಕ್ಕಾಗಿ, ಹೆಚ್ಚಿನ ಅನುದಾನ ನೀಡಬೇಕಾಗುತ್ತದೆ. ಇದರಿಂದ, ಲಾಭವಾಗದೆ ಆರ್ಥಿಕ ಸಂಕಷ್ಟ ಎದುರಾಗಲಿದೆ. ಈ ಕಾರಣಕ್ಕಾಗಿ ಯೋಜನೆಯನ್ನು ಕೈಬಿಡಲಾಗಿದೆ ಎಂದು ತಿಳಿಸಿರುತ್ತಾರೆ.





