ಎಂಜಿ ಹೆಲ್ತ್ ಕೇರ್ ವತಿಯಿಂದ ಮನೆಯಲ್ಲಿರುವ ಡಾಕ್ಟರ್ ಶೀರ್ಷಿಕೆಯಡಿ ‘ವೈಟಲ್ ವೀವ್ಸ್’ ಎಂಬ ಎಐ ತಂತ್ರಜ್ಞಾನ ಆಧಾರಿತ ಮೆಡಿಕಲ್ ಮಾನಿಟರಿಂಗ್ ಉಪಕರಣವನ್ನು ಮೈಸೂರಿನಲ್ಲಿ ಬಿಡುಗಡೆ ಮಾಡಲಾಯಿತು.
‘ವೈಟಲ್ ವೀವ್ಸ್’ ಮನುಷ್ಯನ ಹಾರ್ಟ್ ಬೀಟ್, ಬ್ಲಡ್ ಪ್ರೆಷರ್, ಪಲ್ಸ್ ರೇಟ್ ಇತ್ಯಾದಿ ಬದಲಾವಣೆಗಳನ್ನು ಮಾನಿಟರಿಂಗ್ ಮಾಡುವ ಎಐ ಆಧಾರಿತ ಸಾಧನವಾಗಿದ್ದು, ಆ ವ್ಯಕ್ತಿಯ ಹಿಂದಿನ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ತನ್ನಲ್ಲಿ ಸಂಗ್ರಹಿಸಿಟ್ಟಿರುತ್ತದೆ. ಇದು ರೋಗಿಯ ಸ್ಮಾರ್ಟ್ ಹೆಲ್ತ್ ಮಾನಿಟರಿಂಗ್ ಮಾಡಲು ಮತ್ತು ಆಸ್ಪತ್ರೆಯ ವೈದ್ಯಕೀಯ ದಾಖಲೆಗಳ ಸಂಗ್ರಹಣೆಗೆ ಸಹಕಾರಿಯಾಗಲಿದೆ.
ಸಿಇಓ ಗಣೇಶ್ ನಟೇಶನ್ ಮಾತನಾಡಿ, “ನಮ್ಮ ದೇಶದಲ್ಲಿ ವೈದ್ಯರು ಮತ್ತು ಜನರ ಅನುಪಾತದಲ್ಲಿ ದೊಡ್ಡ ಅಂತರವಿದೆ. ಇದರ ಜೊತೆಗೆ ಆಸ್ಪತ್ರೆಗಳ ಕಾರ್ಯನಿರ್ವಹಣೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ವೈದ್ಯಕೀಯ ಸಾಧನವನ್ನು ಅಭಿವೃದ್ದಿಗೊಳಿಸಲಾಗಿದೆ. ಇದು ಆಸ್ಪತ್ರೆಗಳ ಕಾರ್ಯನಿರ್ವಹಣೆಗೆ ಮತ್ತಷ್ಟು ಸಹಕಾರಿಯಾಗಲಿದೆ. ರೋಗಿಯ ಹಾಗೂ ಆಸ್ಪತ್ರೆಯ ದಾಖಲೆಗಳನ್ನು ಡಿಜಿಲಾಕರ್ ಮಾದರಿಯಲ್ಲಿ ಸಂಗ್ರಹಿಸಿಡಲು ವೈಟಲ್ ವೀವ್ಸ್ ಸಾಧನ ನೆರವಾಗಲಿದೆ” ಎಂದು ಮಾಹಿತಿ ನೀಡಿದರು.
ಮಾರ್ಕೆಟಿಂಗ್ ಪಾಲುದಾರರಾದ ಸತ್ಯ ಶ್ರೀನಿವಾಸನ್ ಮಾತನಾಡಿ, “ವೈಟಲ್ ವೀವ್ಸ್ ಸಾಧನವು ಆಯುಷ್ಮಾನ್ ಭಾರತ್ ಯೋಜನೆಗೆ ಮತ್ತಷ್ಡು ಸಹಕಾರಿಯಾಗಲಿದ್ದು, ಇದರ ಉಪಯೋಗದ ಕುರಿತಂತೆ ಸರ್ಕಾರದ ಜತೆ ಮಾತುಕತೆ ನಡೆಸಲಾಗಿದೆ. ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟ ಕೆಲ ಹಿರಿಯ ನಾಗರಿಕರು ತಮ್ಮ ಆರೋಗ್ಯ ಸಮಸ್ಯೆಗಳ ಕುರಿತಂತೆ ವೈದ್ಯರು ಬಳಿ ಚರ್ಚಿಸಲು ಹಿಂಜರಿಯುತ್ತಾರೆ. ಇನ್ನೂ ಕೆಲವರಿಗೆ ತಮ್ಮ ಹಿಂದಿನ ಆರೊಗ್ಯ ಸಮಸ್ಯೆಗಳ ಬಗ್ಗೆ, ಪಡೆದ ಚಿಕಿತ್ಸೆಯ ಬಗ್ಗೆ
ನೆನಪಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಆ ರೋಗಿ ಈ ಹಿಂದೆ ಯಾವ ರೋಗಕ್ಕೆ ಚಿಕಿತ್ಸೆ ಪಡೆದಿದ್ದರು, ಅವರಿಗೆ ಯಾವ ಸಮಸ್ಯೆ ಇದೆ, ಯಾವ ಚಿಕಿತ್ಸೆ ನೀಡಬೇಕು ಎನ್ನುವ ಎಲ್ಲಾ ವೈದ್ಯಕೀಯ ದಾಖಲೆಗಳು ಡಿಜಿಟಲ್ ರೂಪದಲ್ಲಿದ್ದಾಗ ವೈದ್ಯರಿಗೆ ಮುಂದಿನ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮದ್ದೂರು | ನಗರಸಭೆಗೆ ಗ್ರಾ.ಪಂಗಳ ಸೇರ್ಪಡೆ ಕುರಿತಾಗಿ ಸರ್ಕಾರದ ಹಂತದಲ್ಲಿ ಮಾತುಕತೆ: ಎನ್ ಚಲುವರಾಯಸ್ವಾಮಿ
ಬಿಜೆಪಿ ಮುಖಂಡ ನಿಶಾಂತ್ ಶಿವಮೂರ್ತಿ ಮಾತನಾಡಿ, ವೈಟಲ್ ವೀವ್ಸ್ ಮೆಡಿಕಲ್ ಮಾನಿಟರಿಂಗ್ ಸಾಧನವು ಮೈಸೂರು ಜಿಲ್ಲಾಸ್ಪತ್ರೆಗಳಲ್ಲಿ ವೈದ್ಯಕೀಯ ದಾಖಲೆಗಳನ್ನು ಡಿಜಿಟಲೀಕರಣ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಜತೆಗೆ ರೋಗಿಗಳಿಗೆ ಇದರಿಂದ ಹೆಚ್ಚಿನ ಅನುಕುಲವಾಗಲಿದೆ. ಇಂತಹದೊಂದು ಪ್ರಯತ್ನವನ್ನು ಎಂಜಿ ಹೆಲ್ತ್ ಟೆಕ್ ಮಾಡುತ್ತಿರುವುದು ಶ್ಲಾಘನೀಯ, ಈ ಹೊಸ ಸಾಧನವು ವೈದ್ಯರ ಕಾರ್ಯನಿರ್ವಹಣೆಗೆ ಮತ್ತಷ್ಟು ಅನುಕೂಲವಾಗಲಿದೆ ಇಂತಹ ಸಾಧನಗಳ ಬಳಕೆಯಿಂದ ಆರೋಗ್ಯ ಸೇವೆ ಮತ್ತಷ್ಟು ಕೈಗೆಟಕುವಲ್ಲಿ ನೆರವಾಗಲಿದೆ ಎಂದಿದ್ದಾರೆ.





