ಮೈಸೂರು | ಸದ್ದಿಲ್ಲದೆ ಬಾಗಿಲು ಮುಚ್ಚುತ್ತಿವೆ ಚಿತ್ರಮಂದಿರಗಳು

Date:

ಮೈಸೂರು ಸಾಂಸ್ಕೃತಿಕ ನಗರಿ ಹಾಗೆಯೇ ವಿಶ್ವವಿಖ್ಯಾತ ನಗರ. ಕಲಾಸಕ್ತರಿಗೆ, ಕಲಾವಿದರಿಗೆ, ಸಾಹಿತಿಗಳಿಗೆ ತವರೂರಾಗಿದೆ. ಮೈಸೂರು ಪ್ರೇಕ್ಷಣೀಯ ಸ್ಥಳವನ್ನಷ್ಟೇ ಅಲ್ಲದೆ ಚಿತ್ರಮಂದಿರಗಳಿಂದಾಗಿಯೂ ಕಲಾ ರಸಿಕರನ್ನು ಸೆಳೆಯುವುದರಲ್ಲಿ ಮುಂದಿತ್ತು.

ಮೈಸೂರಿನಲ್ಲಿ ಖ್ಯಾತ ನಟರ ಚಿತ್ರಗಳು ಬಿಡುಗಡೆಯಾದರೆ ಜನವೋ ಜನ. ಚಿತ್ರ ಮಂದಿರದ ಮುಂದೆ ಬೃಹತ್ ಕಟೌಟ್, ಪಟಾಕಿ ಸಿಡಿಸುವುದು ಒಂಥರಾ ಹಬ್ಬದ ವಾತಾವರಣ. ಸಿನಿ ಆಸಕ್ತರು ಸಿನಿಮಾ ನೋಡಲು ಟಿಕೆಟ್ ಸಿಗಲಿಲ್ಲವೆಂದರೆ ಬ್ಲಾಕ್ ಟಿಕೆಟ್ ಪಡೆದಾದರೂ ಸಿನಿಮಾ ನೋಡಬೇಕು ಅನ್ನುವಷ್ಟರ ಮಟ್ಟಿಗಿದ್ದರು. ಬದಲಾದ ಬದುಕಿನ ಶೈಲಿಯಲ್ಲಿ ಸಿನಿಮಾ ಮಂದಿರಗಳನ್ನು ಮರೆತಂತಿದೆ.

ಸಧ್ಯದ ಪರಿಸ್ಥಿತಿಯಲ್ಲಿ ನಾ ಮುಂದು, ತಾ ಮುಂದು ಎನ್ನುವಂತೆ ಸದ್ದಿಲ್ಲದೆ ಒಂದೊಂದೇ ಚಿತ್ರ ಮಂದಿರಗಳು ಮುಚ್ಚುತ್ತಿವೆ.
ಒಂದು ಕಡೆ ವೀಕ್ಷಕರ ಕೊರತೆ, ಇನ್ನೊಂದು ಕಡೆ ಚಿತ್ರ ಮಂದಿರ ನಡೆಸಲಾರದ ಪರಿಸ್ಥಿತಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಚಿತ್ರಮಂದಿರ 1

ಕೋವಿಡ್ ಸಮಯದಲ್ಲಂತೂ ಚಿತ್ರ ಮಂದಿರದ ನಿರ್ವಹಣೆ ದುಬಾರಿಯಾಗಿ ಪರಿಣಮಿಸಿದೆ, ಚಿತ್ರ ಮಂದಿರಗಳ ಮೇಲಿನ ಹೆಚ್ಚಿನ ತೆರಿಗೆ. ಇದೆಲ್ಲವೂ ಕಾರಣವಾದರೆ ಇನ್ನೊಂದು ಕಡೆ ಮಾಲ್, ಮಲ್ಟಿಪ್ಲೆಕ್ಸ್‌ಗಳ ನಡುವೆ ಪೈಪೋಟಿ. ಓಟಿಟಿಯಲ್ಲಿ ಸಿನಿಮಾಗಳ ಬಿಡುಗಡೆ. ಪ್ರೇಕ್ಷಕರು ಮನೆಯಲ್ಲಿಯೇ ತಮ್ಮ ಮೊಬೈಲ್ ಬಳಸಿ ಕೂತಲ್ಲಿ ಸಿನಿಮಾ ನೋಡುವ ಸ್ಥಿತಿ ಬಂದಾಗಿನಿಂದ ಚಿತ್ರ ಮಂದಿರಗಳ ಮಾಲೀಕರು ಹೈರಾಣಾಗಿದ್ದಾರೆ.

ಚಿತ್ರಮಂದಿರ 4

ಚಿತ್ರಮಂದಿರಗಳು ಬಣಗುಡುತ್ತಿವೆ. ಆಗೊಮ್ಮೆ ಈಗೊಮ್ಮೆ ಅನ್ನುವಂತೆ ಒಂದೆರೆಡು ದಿನ, ಅಪರೂಪಕ್ಕೊಮ್ಮೆ ಚಿತ್ರ ಮಂದಿರಗಳು ಭರ್ತಿಯಾಗಬಹುದೇ ವಿನಃ ಪ್ರತಿ ದಿನ ಪ್ರೇಕ್ಷಕರಿಲ್ಲದೆ ನಿರ್ವಹಣೆ ಮಾಡಲು ಆಗದ ಪರಿಸ್ಥಿತಿ ಕಾಡ ಹೊರಟಿದೆ. ಇದರಿಂದ ನೊಂದ ಚಿತ್ರ ಮಂದಿರಗಳ ಮಾಲೀಕರು ಚಿತ್ರ ಮಂದಿರಗಳನ್ನು ಕೆಡವಿ ವಾಣಿಜ್ಯ ಕಟ್ಟಡಗಳ ಮೊರೆ ಹೋಗುತ್ತಿದ್ದಾರೆ. ಮೈಸೂರಿನಲ್ಲಿ ಈಗಾಗಲೇ ಸಾಕಷ್ಟು ಚಿತ್ರಮಂದಿರಗಳು ನೆಲಸಮವಾಗಿವೆ. ಅದರಲ್ಲಿ ಹೊಸ ಸೇರ್ಪಡೆ ಸರಸ್ವತಿ ಚಿತ್ರಮಂದಿರ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆಚ್ಚಿನ ಚಿತ್ರಮಂದಿರ ಕೆ ಜಿ ಕೊಪ್ಪಲಿನ ಸರಸ್ವತಿ ಚಿತ್ರಮಂದಿರ. ಆದರೆ ಇದೀಗ ಚಿತ್ರ ಪ್ರದರ್ಶನ ನಿಲ್ಲಿಸಿದೆ. ಮೈಸೂರಿನಲ್ಲಿ ಈವರೆಗೆ ಒಟ್ಟು 15 ಚಿತ್ರ ಮಂದಿರಗಳ ಬಾಗಿಲುಗಳು ಮುಚ್ಚಿವೆ.

ಚಿತ್ರಮಂದಿರ 2
  • ಶ್ರೀ ನಾಗರಾಜ
  • ಶಾಳುಮಾರ್
  • ರಣಜಿತ್
  • ಅಪೇರ
  • ರತ್ನ
  • ಶಾಂತಲಾ
  • ಲಕ್ಷ್ಮಿ
  • ಗಣೇಶ
  • ಒಲಂಪಿಯಾ
  • ಗೋಕುಲ
  • ರಿಜೆನ್ಸಿ
  • ಸ್ಟರ್ಲಿಂಗ್
  • ವಿದ್ಯಾರಣ್ಯ
  • ಚಾಮುಂಡೇಶ್ವರಿ
  • ಉಮಾ

ಈಗ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಾಗಿ ಚಾಮರಾಜ ಜೋಡಿ ರಸ್ತೆಯ ಗಾಯತ್ರಿ, ಗಾಂಧಿ ವೃತ್ತದ ಪ್ರಭಾ, ಹಳ್ಳದ ಕೇರಿಯ ಸಂಗಮ್, ಬಿ ಎನ್ ರಸ್ತೆ ಉಡ್ ಲ್ಯಾಂಡ್, ಅಗ್ರಹಾರದ ಪದ್ಮ ಇವಿಷ್ಟು ಚಿತ್ರಮಂದಿರಗಳು ಮಾತ್ರ ನಮ್ಮ ಮುಂದಿವೆ.

ಚಿತ್ರಮಂದಿರ 5

ಸಿನಿ ರಸಿಕರು ಚಿತ್ರ ಮಂದಿರಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ, ಚಿತ್ರ ಮಂದಿರದಲ್ಲಿಯೇ ಸಿನಿಮಾ ನೋಡುವಂತಾಗಬೇಕು. ಕಲಾವಿದರನ್ನು ಪ್ರೋತ್ಸಾಹಿಸಿ, ಬೆಂಬಲಿಸಬೇಕು. ಮನರಂಜನೆಯ ತಾಣವಾದ ಚಿತ್ರ ಮಂದಿರಗಳು ಇತಿಹಾಸದ ಪುಟ ಸೇರುವಂತಾಗಬಾರದು. ಇನ್ನಾದರೂ ಸಿನಿ ರಸಿಕರು ಚಿತ್ರ ಮಂದಿರದ ಕಡೆಗೆ ಹೆಜ್ಜೆ ಇಡುವಂತಾಗಲಿ.

ಈ ಸುದ್ದಿ ಓದಿದ್ದೀರಾ? ಈ ದಿನ ಇಂಪ್ಯಾಕ್ಟ್‌ | ಶಿಕ್ಷಕನ ಎಡವಟ್ಟಿಂದ ವಿದ್ಯಾರ್ಥಿಯ ಎದೆ ಭಾಗದ ಮೂಳೆ ಮುರಿತ; ಬಿಇಒ ರಮೇಶ್ ಪೋಷಕರಿಗೆ ಪರಿಹಾರ ಕೊಡಿಸಿದ್ದಾದರೂ ಹೇಗೆ?

ಸ್ಥಳೀಯ ಕಾರ್ಪೊರೇಷನ್ ಚಿತ್ರ ಮಂದಿರಗಳಿಗೆ ಸರ್ಕಾರ ತೆರಿಗೆ ವಿನಾಯಿತಿ ನೀಡಬೇಕು. ಹಾಗೆಯೇ ಚಿತ್ರ ಮಂದಿರಗಳ ಉಳಿವಿಗೆ ಮುಂದಾಗಬೇಕು.

WhatsApp Image 2023 09 02 at 8.42.26 PM
ಮೋಹನ್ ಜಿ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...