ಮೈಸೂರು | ಸಂವಿಧಾನ ಕಾಪಾಡಿಕೊಳ್ಳಲು ʼದೇಶ ಉಳಿಸಿ ಸಂಕಲ್ಪ ಯಾತ್ರೆʼ

Date:

ಮೈಸೂರಿನಲ್ಲಿ ಪ್ರಗತಿಪರ ಸಂಘಟನೆಗಳು ʼದೇಶ ಉಳಿಸಿ ಸಂಕಲ್ಪ ಯಾತ್ರೆʼಯ ಭಾಗವಾಗಿ ಸಮಾವೇಶ ಸಭೆ ನಡೆಸಿದವು.

ನಗರದ ಜನಚೈತನ್ಯ ಸೇವಾ ಟ್ರಸ್ಟ್, ವಿಶ್ವ ಮಾನವ ಜೋಡಿ ರಸ್ತೆ ಕುವೆಂಪುನಗರದಲ್ಲಿ ಸಂವಿಧಾನವನ್ನು ಕಾಪಾಡಿಕೊಳ್ಳಲು, ಸರ್ವ ಜನಾಂಗದ ಶಾಂತಿಯ ತೋಟವನ್ನು ಕಾಪಾಡಿಕೊಳ್ಳಲು ಸಂಘಟನೆಗಳು ಸಭೆ ನಡೆಸಿದ್ದು, ದಸಂಸ, ಕರ್ನಾಟಕ ರಾಜ್ಯ ರೈತ ಸಂಘ, ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರುಗಳ ಒಳಗೊಂಡ ಸಭೆ ನಡೆದು ಈ ಭಾರಿ ಸಂವಿಧಾನ ಉಳಿಸಿಕೊಳ್ಳಲು ಕೋಮುವಾದಿ ಶಕ್ತಿಗಳನ್ನು ಮಣಿಸುವ ನಿರ್ಧಾರ ತೆಗೆದುಕೊಂಡರು.

ಸಭೆಯಲ್ಲಿ ವಿಶ್ರಾಂತ ಉಪ ಕುಲಪತಿ ಸಬಿಹಾ ಭೂಮಿಗೌಡ ಮಾತನಾಡಿ, ಸಂವಿಧಾನ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಈಗಾಗಲೇ ಸಂವಿಧಾನಕ್ಕೆ ಅಪಾಯ ಬಂದೊದಗಿದೆ. ಈಗಿರುವ ಸರ್ವಾಧಿಕಾರಿ ಧೋರಣೆಯ ಕೇಂದ್ರ ಸರ್ಕಾರದ ಸಂಸದರು ಸಿಕ್ಕಸಿಕ್ಕಲ್ಲಿ ನಮಗೆ ಅಧಿಕಾರ ಕೊಡಿ ಸಂವಿಧಾನ ಬದಯಿಸುತ್ತೇವೆ ಎನ್ನುವ ದುಂಡಾವರ್ತನೆ ತೋರುತ್ತಿದ್ದಾರೆ. ನಮಗೆ ಸಂವಿಧಾನ ಬೇಕಾ! ಬಿಜೆಪಿ ಬೇಕಾ ಎನ್ನುವುದನ್ನು ಜನರೇ ತೀರ್ಮಾನಿಸಬೇಕು. ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ಲೂಟಿ, ಸುಲಿಗೆಯಲ್ಲಿ ನಿರತವಾಗಿದೆ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಹಣ ನೀಡದೆ ಮಲತಾಯಿ ಧೋರಣೆ ಅನುಸರಿಸಿದೆ. ಅಲ್ಲದೆ ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು ಇದುವರೆಗೆ ಬರ ಪರಿಹಾರ ಬಿಡಿಕಾಸು ನೀಡದೆ ಉದ್ಧಟತನ ಮೆರೆದಿದೆ. ನಾವು 25 ಜನ ಸಂಸದರ ಆಯ್ಕೆ ಮಾಡಿ ಕಳಿಸಿದ್ದು, ಆದರೆ ಬಿಜೆಪಿ ಸಂಸದರಲ್ಲಿ ಒಬ್ಬರು ಸಹ ಇದರ ಬಗ್ಗೆ ಮಾತಾಡಲಿಲ್ಲ. ಯಾವ ಪುರುಷಾರ್ಥಕ್ಕೇ ಇಂತವರನ್ನು ಗೆಲ್ಲಿಸಬೇಕು. ಯಾವ ಮುಖ ಹೊತ್ತುಕೊಂಡು ರಾಜ್ಯಕ್ಕೆ ಬರುತ್ತಾರೆ ಇವರೆಲ್ಲ. ಮಾನ ಮರ್ಯಾದೆ ಇರದ ಬಿಜೆಪಿ ಪಕ್ಷದವರು ಜನರಿಗೆ ಅನ್ಯಾಯ ಮಾಡೋದು ಚುನಾವಣೆ ಸಮಯದಲ್ಲಿ ಮಾತ್ರ ಜನರ ಮುಂದೆ ಬರೋದು ಇಂತವರಿಗೆ ಈ ಭಾರಿ ಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಬುದ್ದಿ ಕಲಿಸುತ್ತೇವೆ ಎಂದು ಗುಡುಗಿದರು.

ಹಿರಿಯ ಸಾಹಿತಿಗಳಾದ ಮುಕುಂದರಾಜ್ ಎಂ.ಎನ್ ಮಾತನಾಡಿ, ಬಿಜೆಪಿ ಕೇವಲ 10ವರ್ಷದಿಂದ ಆಳ್ವಿಕೆ ಮಾಡ್ತಿದೆ ಅನ್ನುವುದು ತಪ್ಪು 2 ಸಾವಿರ ವರ್ಷಗಳ ಇತಿಹಾಸ ಗಮನಿಸಿದರೆ ತಿಳಿಯುತ್ತದೆ ಪುರೋಹಿತರ ಹಿಡಿತ ಆಗಿನಿಂದ ಹಿಡಿದು ಇಗಿನವರೆಗು ಇದೆ ಆದೆ ಮನುಸ್ಮೃತಿ ಎಂದರು.

ಉದಾಹರಣೆಗೆ ಮೈಸೂರಿನಲ್ಲಿ ಟಿಪ್ಪು ಹೈದರಾಲಿ ಕಾಲದಿಂದಲೂ ನೋಡಿ, ಮೈಸೂರು ಒಡೆಯರ ಅಧಿಕಾರದಲ್ಲಿ, ಬ್ರಿಟಿಷರ ಕಾಲದಲ್ಲಿ ಕೂಡ ಗಮನಿಸಿ ದಿವಾನ್ ಪೂರ್ಣಯ್ಯ ಅವ್ರೆ ಮಂತ್ರಿ. ರಾಜ ಬದಲಾದರು ಮಂತ್ರಿ ಬದಲಾಗಲಿಲ್ಲ ಎಲ್ಲರ ಕಾಲದಲ್ಲೂ ಅವರೇ ಇದ್ದರೂ ಅಂದ್ರೆ ಅದೆ ಬ್ರಾಹ್ಮಣ್ಯ ಎಂದರು.

ಯಾವುದೇ ದೇಶ, ರಾಜ್ಯ ಸುಭಿಕ್ಷವಾಗಿ ನೆಮ್ಮದಿಯಾಗಿ ಇರುವಂತಿಲ್ಲ, ನೆಮ್ಮದಿಯಾಗಿ ಇದ್ದಾಗಲೆಲ್ಲ ನಡೆದ ಯಾಗ, ಯಜ್ಞ, ಅಶ್ವಮೇಧ ಇದೆಲ್ಲವೂ ಪುರೋಹಿತರ ಕುತಂತ್ರ ಅದರಿಂದಲೇ ಘರ್ಷಣೆ ತಂದು ಹಾಕಿ ಅದರಲ್ಲಿ ತಮ್ಮ ಹಿಡಿತ ಸಾಧಿಸಿದವರು.ಈಗಲೂ ಅಷ್ಟೇ ಜನ ಸಾಮಾನ್ಯರ ಬದುಕಿನ ಜತೆ ಆಟವಾಡುತ್ತಾ ಸಂವಿಧಾನ ಬದಲಾಯಿಸಲು ಹೊರಟಿದ್ದಾರೆ ಬಿಜೆಪಿ, ಆರ್‌ಎಸ್‌ಎಸ್‌ ಎಂದು ವಿಷಾಧಿಸಿದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಉಗ್ರ ನರಸಿಂಹೆ ಗೌಡ, ಅಲಗೂಡು ಶಿವಕುಮಾರ್, ಭೂಮಿಗೌಡ, ಖಲೀಲ್ ಉರ್ ರೆಹಮಾನ್, ಡಾ.ರಮೇಶ್ ಚೆಲ್ಲಂಕೊಂಡ, ಅಖಿಲಾ ನಾಗಸಂದ್ರ, ಕೆ.ವಿ.ಭಟ್, ಆರ್. ನಾಗೇಶ್ ಅರಳಕುಪ್ಪೆ, ಸವಿತಾ ಪಾ ಮಲ್ಲೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...