ಮೈಸೂರು | ಸಮಾಜ ಕಲ್ಯಾಣ ಸಚಿವರ ಸ್ವಕ್ಷೇತ್ರದಲ್ಲೇ ಕೊರಚ ಕುಟುಂಬಗಳ ಬದುಕು ಅತಂತ್ರ; ಅಂತ್ಯಕ್ರಿಯೆಗೂ ಪರದಾಟ

Date:

ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ ಅವರ ಸ್ವಕ್ಷೇತ್ರದಲ್ಲೇ ಕೊರಚ ಕುಟುಂಬಗಳ ಬದುಕು ಅತಂತ್ರವಾಗಿದ್ದು, ಮೃತದೇಹಗಳ ಅಂತ್ಯಕ್ರಿಯೆಗೂ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಮೈಸೂರು ಜಿಲ್ಲೆಯ ಟಿ ನರಸೀಪುರ ಪಟ್ಟಣದಲ್ಲಿ ಕರುಣಾಜನಕ ಘಟನೆಯೊಂದು ವರದಿಯಾಗಿದ್ದು, ಅಲೆಮಾರಿ ಕೊರಚ‌ ಜನಾಂಗದ ದಿ. ಹನುಮಂತಪ್ಪ ಅವರ ಪತ್ನಿ ರತ್ನಮ್ಮ(49) ಅವರು ಅನಾರೋಗ್ಯದಿಂದ ನಿಧನರಾಗಿದ್ದರು. ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಸ್ಥಳೀಯರು ಅವಕಾಶ ಮಾಡಿಕೊಡದೆ ಅಮಾನವೀಯವಾಗಿ ವರ್ತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಕುಟುಂಬ ಅಂತ್ಯಕ್ರಿಯೆ ನೆರವೇರಿಸಲು ಪರದಾಡಿದ ಘಟನೆ ಸಂಭವಿಸಿದೆ.

ಮೈಸೂರು ಜಿಲ್ಲೆಯ ತಿ ನರಸೀಪುರದಲ್ಲಿ ಪಟ್ಟಣದ ಮಾರ್ಕೆಟ್ ರಸ್ತೆಯ ಹೊಸ ರೇಷ್ಮೆ ಗೂಡಿನ ಎದುರಿನ ಭೈರಾಪುರ ಪಟ್ಟಣದಲ್ಲಿ ವಾಸವಾಗಿರುವ ಅಲೆಮಾರಿ ಕೊರಚ‌ ಜನಾಂಗ ಸುಮಾರು 35 ವರ್ಷಗಳ ಹಿಂದೆ ದಾವಣಗೆರೆ ಕಡೆಯಿಂದ ವಲಸೆ ಬಂದು ಟಿ ನರಸೀಪುರ ಪಟ್ಟಣದಲ್ಲಿ ನೆಲೆನಿಂತು ತಲೆಕೂದಲಿಗೆ, ಬಟ್ಟೆಪಿನ್ನು, ಹಣೆಬೊಟ್ಟು ಸೇರಿದಂತೆ ಇತರೆ ಸಣ್ಣಪುಟ್ಟ ವಸ್ತುಗಳ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಕೊರಚ ಕುಟುಂಬ 1

ಈ ಹಿಂದೆ ಈಗಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಅರ್ಧ ಗುಂಟೆ ಜಾಗ ಖರೀದಿ ಮಾಡಿ ವಾಸ ಮಾಡುತ್ತಿರುವಾಗ ಕಬಿನಿ ನದಿಗೆ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾದ ಹಿನ್ನೆಲೆಯಲ್ಲಿ ನಿವೇಶನ ಕಳೆದುಕೊಂಡು ಬದುಕು ಆತಂತ್ರವಾಗಿತ್ತು. ಇದೇ ಸಮಯದಲ್ಲಿ ಖಾಸಗಿಯವರಿಂದ ನಿವೇಶನವನ್ನು ಬಾಡಿಗೆ ಪಡೆದು ಪುಟ್ಟ ಗುಡಿಸಲು ಮಾಡಿ ತಮ್ಮ ಕೊಟ್ರೇಸಿ ಎಂಬುವವರೊಂದಿಗೆ ಜೀವನ ಮಾಡುತಿದ್ದರು.

ಅನಾರೋಗ್ಯದಿಂದ ನರಳುತ್ತಿದ್ದ ರತ್ನಮ್ಮ ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ. ಅವರ ಅಂತ್ಯಸಂಸ್ಕಾರಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಕಾರಣಕ್ಕೆ ದಾವಣಗೆರೆಗೆ ಮೃತದೇಹ ರವಾನಿಸಿದ ಕರುಣಾಜನಕ ಘಟನೆ ನಿಜಕ್ಕೂ ಕಣ್ಣೀರು ತರಿಸಿದೆ.

ಕೊರಚ ಕುಟುಂಬ 2

ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಕ್ಷೇತ್ರ, ಇನ್ನೊಂದು ಕಡೆ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಬೇಕಾದ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ ಅವರಿರುವ ಸ್ವಕ್ಷೇತ್ರದಲ್ಲಿ ಇಂತಹ ಘಟನೆ ನಡೆದಿರುವುದು ಶೋಚನೀಯ.

ಸ್ಥಳೀಯ ವೆಂಕಟೇಶ್ ಮಾತನಾಡಿ, “ಸರಿ ಸುಮಾರು ಐವತ್ತು ವರ್ಷಗಳಿಂದ ಇಲ್ಲಿ ವಾಸವಾಗಿದ್ದೀವಿ. ಈಗಿರುವ ಹೊಸ ಬಸ್ ನಿಲ್ದಾಣದ ಜಾಗದಲ್ಲಿ ಅಂದು ಗೂಡಂಗಡಿಗಳು ಇದ್ದವು. ನಾವು ದಾವಣಗೆರೆ ಕಡೆಯಿಂದ ಬಂದು ಅಲ್ಲಿ ಸುಮಾರು 25 ಕುಟುಂಬಗಳು ಸೇರಿ ಒಂದೂವರೆ ಎಕರೆ ಖರೀದಿ ಮಾಡಿ ಶಕ್ತಿ ಅನುಸಾರ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದೆವು. ಆದರೆ ಕಬಿನಿ ನದಿಗೆ ಹೊಸದಾಗಿ ಸೇತುವೆ ನಿರ್ಮಾಣ ಮಾಡುವ ಯೋಜನೆ ಬಂದಾಗ ನಮ್ಮ ಇಡೀ ಜಾಗ ರಸ್ತೆಗೆ ಸೇರಿತು. ಹಾಗಾಗಿ ಸರಿಸುಮಾರು 35 ಕುಟುಂಬಗಳು ಅಲ್ಲಿಂದ ದಿಕ್ಕೆಟ್ಟು ಅತಂತ್ರ ಪರಿಸ್ಥಿತಿಗೆ ದೂಡಲ್ಪಟ್ಟೆವು. ಇದಾದ ಬಳಿಕ ಈಗಿರುವ ಜಾಗಕ್ಕೆ ಬಾಡಿಗೆ ಕೊಡುತ್ತ ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದೇವೆ” ಎಂದು ಅವಲತ್ತುಕೊಂಡರು.

ಕೊರಚ ಕುಟುಂಬ 3

“ನಮಗೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಈವರೆಗೆ ಎಲ್ಲ ಕಚೇರಿಗಳಿಗೆ, ಪುರಸಭೆಗೆ ಅರ್ಜಿ ಕೊಡುವುದೇ ಆಗಿದೆಯೇ ಹೊರತು ಯಾರೂ ಕೂಡಾ ನಮ್ಮ ನೆರವಿಗೆ ಬರಲಿಲ್ಲ. ಯಾವ ಅಧಿಕಾರಿಗಳೂ ನಮಗೆ ಸೂರು ಕೊಡಲಿಲ್ಲ,ಇದ್ದ ಮನೆಯನ್ನು ಕಳೆದುಕೊಂಡ ನಮಗೆ ಬದಲಿ ವ್ಯವಸ್ಥೆ ಮಾಡಲಿಲ್ಲ. ಸಮಾಜ ಕಲ್ಯಾಣ ಇಲಾಖೆ ಸಚಿವರು ಇದ್ದಾರೆ, ಅವರಾದರೂ ಈಗ ನಮ್ಮ ಕಡೆ ಗಮನಹರಿಸಬೇಕು” ಎಂದು ಮನವಿ ಮಾಡಿದರು.

ಕೊರಚ ಕುಟುಂಬದ ಮಹಿಳೆ ಅಂತ್ಯಕ್ರಿಯೆಗೆ ಅಡ್ಡಿ

ಈ ದಿನ.ಕಾಮ್ ಸ್ಥಳೀಯ ವಾರ್ಡ್ ಪುರಸಭೆ ಸದಸ್ಯ ಮಂಜುನಾಥ ಅವರಿಗೆ ಕರೆ ಮಾಡಿದಾಗ, “ಕೊರಚ ಸಮುದಾಯದ ಮಹಿಳೆ ರತ್ನಮ್ಮ ಅವರ ಸಾವು, ಅಂತ್ಯಕ್ರಿಯೆಗೆ ಅವಕಾಶ ಸಿಗದೇ ಇರುವುದರ ಬಗ್ಗೆ ಯಾವುದೇ ಮಾಹಿತಿ ಗೊತ್ತಿಲ್ಲ, ಯಾರೂ ಬಂದು ಕೇಳಿಲ್ಲ, ಯಾವ ಮಾಹಿತಿಯೂ ನಮಗಿಲ್ಲ” ಎನ್ನುವ ಹಾರಿಕೆ ಉತ್ತರ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮೈಸೂರು | ಹಂದಿಜೋಗಿ ಕುಟುಂಬ ಬೀದಿಪಾಲು; ʼಈ ದಿನ ವರದಿʼಗೆ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಭೇಟಿ

ದಸಂಸ ಮುಖಂಡ ಅಲಗೂಡು ಶಿವಕುಮಾರ್ ಈ ಬಗ್ಗೆ ಗಮನ ಸೆಳೆದಿದ್ದು, “ಟಿ ನರಸೀಪುರ ವ್ಯಾಪ್ತಿಯಲ್ಲಿ ಹಲವಾರು ಕುಟುಂಬಗಳು ನಿವೇಶನ ರಹಿತರಾಗಿ, ವಾಸಿಸಲು ಮನೆಯೂ ಇರದೆ ಕಷ್ಟ ಪಡುತ್ತಿದ್ದಾರೆ. ಇರಲು ಮನೆಯಿಲ್ಲ, ಸತ್ತರೆ ಹೂಳಲು ಸ್ಮಶಾನವಿಲ್ಲ. ಇಂತಹ ಪರಿಸ್ಥಿತಿ ಒದಗಿ ಬಂದಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವರು ಗಮನ ಹರಿಸಿ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಬೇಕು, ಮನೆ ನಿರ್ಮಿಸಿಕೊಡಬೇಕು ಜತೆಗೆ ಸ್ಮಶಾನ ಜಾಗ ಕಲ್ಪಿಸಬೇಕು” ಎಂದು ವಿನಂತಿಸಿದರು.

WhatsApp Image 2023 09 02 at 8.42.26 PM
ಮೋಹನ್ ಜಿ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...