ಮೈಸೂರು | ಅರಣ್ಯ ಇಲಾಖೆ ಕಾರ್ಯಾಚರಣೆ; ಬಾಲಕನನ್ನು ಕೊಂದಿದ್ದ ಹುಲಿ ಸೆರೆ

Date:

ಸತತ ಹದಿನೇಳು ದಿನದಿಂದ ಹುಲಿ ಸೆರೆಗೆ ಕರ್ನಾಟಕ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಬಾಲಕನನ್ನು ಕೊಂದು ಹಾಕಿದೆ ಎನ್ನಲಾದ ಎಂಟು ವರ್ಷದ ಗಂಡು ಹುಲಿಯನ್ನು ಸೆರೆ ಹಿಡಿಯಲಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಕ್ಕಪಕ್ಕದ ಪ್ರದೇಶದಲ್ಲಿಯೇ ಆರು ತಿಂಗಳ ಒಳಗೆ ಸೆರೆ ಹಿಡಿದಿರುವ ಮೂರನೇ ಹುಲಿ ಇದಾಗಿದೆ. ಬೋನಿನಲ್ಲಿ ಇರಿಸಿ ಹುಲಿಗೆ ನಾಗರಹೊಳೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಸೆರೆ ಸಿಕ್ಕಿರುವ ಎರಡು ಹುಲಿಗಳು ಮೃಗಾಲಯದ ಪುನರ್ವಸತಿ ಕೇಂದ್ರಗಳಲ್ಲಿವೆ.

ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲೂಕಿನ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತೆ ಇರುವ ಕಲ್ಲಹಟ್ಟಿ ಗ್ರಾಮದ ಜಮೀನಿನಲ್ಲಿಯೇ ಮಂಗಳವಾರ ರಾತ್ರಿ ಹುಲಿಯನ್ನು ಸೆರೆ ಹಿಡಿಯಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎಚ್ ಡಿ ಕೋಟೆ ತಾಲೂಕು ಕಲ್ಲಹಟ್ಟಿ ಗ್ರಾಮದ ರೈತ ಕೃಷ್ಣನಾಯಕ ಮತ್ತು ಮಾದೇವಿ ಬಾಯಿ ಎಂಬವರ ಪುತ್ರ ಚರಣ್ ನಾಯಕ್ (9) ಸೆಪ್ಟಂಬರ್‌ 4ರಂದು ಶಾಲೆ ಮುಗಿಸಿಕೊಂಡು ತಂದೆ ತಾಯಿ ಇದ್ದ ಜಮೀನಿಗೆ ಹೋಗುತ್ತಿದ್ದ. ಈ ವೇಳೆ ಹುಲಿ ದಾಳಿ ನಡೆಸಿದ್ದರಿಂದ ಆತ ಮೃತಪಟ್ಟಿದ್ದ. ಆತನ ದೇಹದ ಭಾಗವನ್ನು ಹುಲಿ ತಿಂದು ಹೋಗಿತ್ತು. ದಾಳಿಯಾಗಿದ್ದನ್ನು ಗಮನಿಸಿದ್ದ ಸ್ಥಳೀಯರು ಹುಲಿ ಹೊಡೆತದಿಂದಲೇ ಬಾಲಕ ಮೃತಪಟ್ಟಿರುವುದಾಗಿ ಹೇಳಿದ್ದು, ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು.

ಹದಿನೇಳು ದಿನದಿಂದಲೂ ಎಚ್‌ಡಿಕೋಟೆ ತಾಲೂಕಿನ ಕಲ್ಲಹಟ್ಟಿ ಹಾಗೂ ಸುತ್ತಮುತ್ತಲ ಭಾಗದಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ಮುಂದುವರಿದಿತ್ತು. ಕಾರ್ಯಾಚರಣೆಯಲ್ಲಿ ಎಸಿಎಫ್ ರಂಗಸ್ವಾಮಿ, ದಯಾನಂದ್, ಅಂತರಸಂತೆ ವಲಯ ಅರಣ್ಯ ಅಧಿಕಾರಿ ಭರತ್ ನೇತೃತ್ವದಲ್ಲಿ ನೂರಕ್ಕೂ ಅಧಿಕ ಮಂದಿ ಸಿಬ್ಬಂದಿ, ಅರಣ್ಯ ಇಲಾಖೆ ವಿಶೇಷ ಕಾರ್ಯಪಡೆ( STPF) ಸೇರಿದಂತೆ ಅಧಿಕಾರಿಗಳು, ತಜ್ಞರು ಸ್ಥಳದಲ್ಲೇ ಬೀಡುಬಿಟ್ಟಿದ್ದರು.

ದಸರಾದಲ್ಲಿ ಪಾಲ್ಗೊಂಡಿದ್ದ ಅರ್ಜುನ ಸೇರಿದಂತೆ ಆರಕ್ಕೂ ಹೆಚ್ಚು ಆನೆಗಳನ್ನು ಬಳಸಿಕೊಂಡು ಕೂಂಬಿಂಗ್‌ ಮಾಡಿದ್ದರೂ ಹುಲಿ ಪತ್ತೆಯಾಗಿರಲಿಲ್ಲ. ನಿರಂತರವಾಗಿ ಕಾರ್ಯಾಚರಣೆ ನಡೆದಿತ್ತು. ಅರ್ಜುನ ಆನೆ ನಾಲ್ಕು ದಿನದ ಹಿಂದೆಯೇ ವಾಪಾಸಾಗಿತ್ತು. ಮೂರ್ನಾಲ್ಕು ಕಡೆ ಬೋನು ಇರಿಸಿ ಕ್ಯಾಮರಾಗಳನ್ನೂ ಅಳವಡಿಸಲಾಗಿತ್ತು. ಥರ್ಮಲ್‌ ಡ್ರೋನ್ ಬಳಸಿ ಹುಲಿ ಇರುವಿಕೆ ಮಾಹಿತಿ ಪಡೆಯಲಾಗಿತ್ತು. ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದರೂ ಹುಲಿ ಕಂಡಿರಲಿಲ್ಲ.

ಈ ಸುದ್ದಿ ಓದಿದ್ದೀರಾ? ಹಾಸನ | ಮದ್ಯ ಸೇವಿಸುವ ಪಂದ್ಯ; ಓರ್ವನ ಸಾವಿನಲ್ಲಿ ಅಂತ್ಯ

ಸಾಮಾನ್ಯವಾಗಿ ಹುಲಿಗಳು ಏನನ್ನಾದರೂ ಸಾಯಿಸಿದರೆ ಮತ್ತೆ ಅದೇ ಜಾಗಕ್ಕೆ ಆಹಾರ ಹುಡುಕಿ ಬಂದೇ ಬರುತ್ತವೆ. ಅಲ್ಲಿಗೆ ಈ ಹುಲಿ ಬರಬಹುದು ಎನ್ನುವ ಲೆಕ್ಕಾಚಾರದೊಂದಿಗೆ ಸಿಬ್ಬಂದಿ ಸುತ್ತಮುತ್ತ ಕಾಯುತ್ತಲೇ ಇದ್ದರು. ಮಂಗಳವಾರ ಸಂಜೆ ಹೊತ್ತಿಗೆ ಕಲ್ಲಹಟ್ಟಿ ಸಮೀಪದಲ್ಲೇ ಹುಲಿ ಇರುವುದನ್ನು ಸಿಬ್ಬಂದಿ ಕಂಡಿದ್ದಾರೆ. ಕೂಡಲೇ ನಾಗರಹೊಳೆ ವನ್ಯಜೀವಿ ವೈದ್ಯಾಧಿಕಾರಿ ಡಾ.ರಮೇಶ್‌, ಅರವಳಿಕೆ ತಜ್ಞ ರಂಜನ್‌ ಸಹಿತ ಹಲವರು ಅಲ್ಲಿಗೆ ಧಾವಿಸಿದ್ದು ಹುಲಿ ಇರುವುದನ್ನು ಗಮನಿಸಿ ಅರವಳಿಕೆ ನೀಡಿದ್ದಾರೆ. ಬಳಿಕ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಸೆರೆ ಸಿಕ್ಕ ಹುಲಿ ಆರೋಗ್ಯಕರವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯ ಬಜೆಟ್ | ಸಾಂಸ್ಕೃತಿಕ ನಗರಿ ಮೈಸೂರಿನ ನಿರೀಕ್ಷೆಗಳೇನು? ಕಳೆದ ಬಜೆಟ್ ಕಡತದಲ್ಲೇ ಉಳಿಯಿತೇ?

ʼಮೈಸೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯನವರು ಈ ಬಾರಿಯ ಬಜೆಟ್‌ನಲ್ಲಿ...

ಮೈಸೂರು | ಸಹಿಷ್ಣುತೆಯ ಗುಣ ವ್ಯಕ್ತಿತ್ವದ ಬೆಳವಣಿಗೆಯಾಗಿದೆ: ಪ್ರೊ ಎಂ ಬಿ ಸುರೇಶ್

ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ರಾಜ್ಯ ಸರ್ಕಾರ,...

ಹುಣಸೂರು | ಮಕ್ಕಳು ವೈಜ್ಞಾನಿಕ ಮನೋಭಾವನೆ-ವೈಚಾರಿಕತೆ ಬೆಳೆಸಿಕೊಳ್ಳಬೇಕು: ಮಹದೇವ

ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು ಕಟ್ಟೆಮಳಲವಾಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ 'ರಾಷ್ಟ್ರೀಯ...

ಮೈಸೂರು | ತಂಬಾಕು ಬೆಳೆಗಾರರ ಹಿತಕಾಯಲು ಬದ್ಧ; ಉತ್ತಮ ಬೆಲೆಗೆ ಖರೀದಿಸಿ: ಎಚ್ಡಿಕೆ

ಮೈಸೂರಿನ ಭಾರತೀಯ ಬಾಷಾ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರದಂದು ಬೃಹತ್ ಕೈಗಾರಿಕೆ ಸಚಿವರಾದ...