ಮೈಸೂರಿನ ಸಮತಾ ಅಧ್ಯಯನ ಕೇಂದ್ರವು ಸಂಸ್ಥಾಪಕ ಅಧ್ಯಕ್ಷೆ, ಖ್ಯಾತ ಸ್ತ್ರೀವಾದಿ ವಿಮರ್ಶಕಿ ಹಾಗೂ ಲೇಖಕಿ ಡಾ. ವಿಜಯಾ ದಬ್ಬೆ ಅವರ ಹೆಸರಿನಲ್ಲಿ 2022ರಲ್ಲಿ ಸ್ಥಾಪಿಸಿರುವ ‘ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಗೆ ಲೇಖಕಿಯರಿಂದ ಕಥಾ ಸಂಕಲನಗಳನ್ನು ಆಹ್ವಾನಿಸಿದೆ.
ಸಮತಾ ಅಧ್ಯಯನ ಕೇಂದ್ರದ ಪ್ರಸ್ತುತ ಅಧ್ಯಕ್ಷೆ ಸಬಿಹಾ ಭೂಮಿಗೌಡ ಅವರು ಈ ಕುರಿತು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದು, “2022ರಿಂದ 2025ರ ಅವಧಿಯಲ್ಲಿ ಪ್ರಥಮ ಮುದ್ರಣ ಕಂಡ ಕಥಾ ಸಂಕಲನಗಳನ್ನು ಮಾತ್ರ ಪರಿಗಣಿಸಲಾಗುವುದು. ಪ್ರಶಸ್ತಿ 25,000 ರೂಪಾಯಿ ನಗದು, ಫಲಕವನ್ನು ಒಳಗೊಂಡಿದ್ದು, ಜೂನ್1 ರಂದು ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು” ಎಂದು ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ಗದಗ | ಸರ್ವ ಜನಾಂಗದ ಶಾಂತಿಯ ತೋಟ ನಿದರ್ಶನಕ್ಕೆ ಜಿಲ್ಲೆ ಸಾಕ್ಷಿ: ಸಚಿವ ಎಚ್.ಕೆ.ಪಾಟೀಲ
ಆಸಕ್ತ ಪ್ರಕಾಶಕರು ಅಥವಾ ಲೇಖಕಿಯರು ಸಂಕಲನದ ನಾಲ್ಕು ಪ್ರತಿಗಳನ್ನು ಫೆಬ್ರವರಿ 29ರೊಳಗೆ, ವಿಳಾಸ: ಎಂ ಎಸ್ ವೇದಾ, ಅಲಂಪು, ನಂಬರ್:1257, ಪಡುವಣ ರಸ್ತೆ, 4ನೇ ತಿರುವು, ಟಿ ಕೆ ಬಡಾವಣೆ, 4ನೇ ಹಂತ, ಕುವೆಂಪುನಗರ, ಮೈಸೂರು-570023 ಈ ವಿಳಾಸಕ್ಕೆ ಕಳುಹಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ ಮೊ:9481814836ಕ್ಕೆ ಕರೆ ಮಾಡಬಹುದು.





