‌ಮೈಸೂರು | ಸಾವಿತ್ರಿಬಾಯಿ ಫುಲೆ ಅವರ ಹೋರಾಟ ಹೊಸ ತಲೆಮಾರಿಗೆ ದಾರಿದೀಪ: ಡಾ. ಸತೀಶ್

Date:

ಶಿಕ್ಷಣವನ್ನು ನಿರಾಕರಿಸಲಾಗಿದ್ದ ಸಮಯದಲ್ಲಿ ಅಂಚಿನಲ್ಲಿದ್ದ ಸಮುದಾಯಗಳ ಮಹಿಳೆಯರು ಮತ್ತು ಮಕ್ಕಳಿಗಾಗಿ ಶಾಲೆಗಳನ್ನು ಸ್ಥಾಪಿಸಲು ಜ್ಯೋತಿರಾವ್ ಫುಲೆ ಅವರೊಂದಿಗೆ ಹೋರಾಡಿದ ಸಾವಿತ್ರಿಬಾಯಿ ಫುಲೆ ಅವರ ಹೋರಾಟ, ಧೈರ್ಯಶಾಲಿ ಪ್ರಯತ್ನಗಳು ಇಂದಿನ ಹೊಸ ತಲೆಮಾರಿಗೆ ದಾರಿದೀಪ ಎಂದು ಡಾ. ಸತೀಶ್ ಅಭಿಪ್ರಾಯಪಟ್ಟರು.

ಭಾರತದ ಅಗ್ರಗಣ್ಯ ಸಮಾಜ ಸುಧಾರಕರಲ್ಲಿ ಒಬ್ಬರಾದ ಸಾವಿತ್ರಿಬಾಯಿ ಫುಲೆ ಅವರ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ, ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ವರ್ಕರ್ಸ್ ಫಾರ್ ಆ್ಯಕ್ಷನ್ ರೀಸರ್ಚ್(ರಿ) ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಭಾರತೀಯ ಸಮಾಜಕ್ಕೆ ಸಾವಿತ್ರಿಬಾಯಿ ಫುಲೆ ಅವರ ಐತಿಹಾಸಿಕ ಮತ್ತು ಶಾಶ್ವತ ಕೊಡುಗೆಗಳ ಬಗ್ಗೆ ನೆನೆಯಲೇಬೇಕು. ಭಾರತದ ಮೊದಲ ಮಹಿಳಾ ಶಿಕ್ಷಕಿಯಾಗಿ ಮತ್ತು 19 ನೇ ಶತಮಾನದ ಮಧ್ಯಭಾಗದಲ್ಲಿ ಮಹಿಳಾ ಶಿಕ್ಷಣದ ಪ್ರವರ್ತಕಿಯಾಗಿ ಸಾವಿತ್ರಿಬಾಯಿ ಫುಲೆ ಅವರ ಪಾತ್ರ ಅತ್ಯಂತ ಮಹತ್ವದ್ದು. ಜಾತಿ ತಾರತಮ್ಯ ಮತ್ತು ಲಿಂಗ ಅಸಮಾನತೆಯ ವಿರುದ್ಧ ಅವರು ಜೀವಮಾನದ ಹೋರಾಟವನ್ನು, ವಿಶೇಷವಾಗಿ ದಲಿತರು, ತುಳಿತಕ್ಕೊಳಗಾದ ಸಮುದಾಯಗಳು ಮತ್ತು ವಿಧವೆಯರಿಗಾಗಿ ಅವರು ಮಾಡಿದ ಕ್ರಾಂತಿಕಾರಿ ಕೆಲಸಗಳು ಇಂದಿಗೂ ಜೀವಂತ” ಎಂದು ಒತ್ತಿಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಶ್ರೀನಿವಾಸ ಡಿ. ಮಣಗಳ್ಳಿ, “ಸಾವಿತ್ರಿಬಾಯಿ ಫುಲೆ ಅವರು ಭಾರತೀಯ ಸಮಾಜಕ್ಕೆ ಪರಿವರ್ತನಾತ್ಮಕ ಕೊಡುಗೆಗಳನ್ನು ನೀಡಿದವರು. ಮಹಿಳಾ ಶಿಕ್ಷಣದ ಪ್ರವರ್ತಕಿ, ಜಾತಿ ಶ್ರೇಣಿಗಳನ್ನು ಪ್ರಶ್ನಿಸುವುದು ಮತ್ತು ಸಮಾನತೆಯನ್ನು ಪ್ರತಿಪಾದಿಸಿದ ಅವರ ಕಾರ್ಯವು ಮಹಿಳೆಯರು, ದಲಿತರು ಮತ್ತು ಪ್ರಗತಿಪರ ಬ್ರಾಹ್ಮಣರನ್ನು ಸಹ ಸಬಲೀಕರಣಗೊಳಿಸಿತು. ಸಾಮಾಜಿಕ ನ್ಯಾಯ ಮತ್ತು ಸಮಗ್ರ ಸುಧಾರಣೆಗೆ ಅಡಿಪಾಯ ಹಾಕಿತು. ದಲಿತರು, ಮಹಿಳೆಯರು ಮತ್ತು ಆದಿವಾಸಿಗಳು ಜ್ಞಾನಕ್ಕೆ, ಸಮಾನ ಪ್ರವೇಶಕ್ಕೆ ಅರ್ಹರು ಎಂದು ಒತ್ತಾಯಿಸುವ ಮೂಲಕ ಜಾತಿ, ಪಿತೃಪ್ರಭುತ್ವ ಮತ್ತು ಬಹಿಷ್ಕಾರವನ್ನು ಪ್ರಶ್ನಿಸಿದರು. ಮೆಕಾಲೆಯವರ ವ್ಯವಸ್ಥೆಯು ಔಪಚಾರಿಕ ಶಿಕ್ಷಣವನ್ನು ವಿಸ್ತರಿಸಿದರೆ, ಸಾವಿತ್ರಿಬಾಯಿ ಅದನ್ನು ಮಾನವೀಯಗೊಳಿಸಿದರು” ಎಂದರು.

“ಶಿಕ್ಷಣವನ್ನು ಪ್ರತಿರೋಧ, ಘನತೆ ಮತ್ತು ವಿಮೋಚನೆಯಾಗಿ ಬಳಸಿಕೊಂಡರು. ಶಿಕ್ಷಣವು ಗುಮಾಸ್ತರನ್ನು ಮಾತ್ರ ಸೃಷ್ಟಿಸಬಾರದು. ಜಾಗೃತ, ಸಮಾನ ನಾಗರಿಕರನ್ನು ಸೃಷ್ಟಿಸಬೇಕು ಎಂದು ಅವರ ಪರಂಪರೆ ನಮಗೆ ನೆನಪಿಸುತ್ತದೆ.
ಸಾವಿತ್ರಿಬಾಯಿ ಫುಲೆ ಅವರ ಸುಧಾರಣಾವಾದಿ ದೃಷ್ಟಿಕೋನವು ಬ್ರಾಹ್ಮಣ ಸಮಾಜದೊಳಗಿನ ಸಂಪ್ರದಾಯವಾದಿ ಪದ್ಧತಿಗಳು ಸೇರಿದಂತೆ ಜಾತಿ ರೇಖೆಗಳಾದ್ಯಂತ ಸಾಮಾಜಿಕ ಸಾಂಪ್ರದಾಯಿಕತೆಯನ್ನು ಪ್ರಶ್ನಿಸಿತು. ಇದರಿಂದಾಗಿ ವಿಶಾಲವಾದ ಸಾಮಾಜಿಕ ಆತ್ಮಾವಲೋಕನ ಮತ್ತು ಸುಧಾರಣೆಗೆ ಕೊಡುಗೆ ನೀಡಿತು” ಎಂದು ಹೇಳಿದರು.

ರಘೋತ್ತಮ್ ಹೊ.ಬ. ಮಾತನಾಡುತ್ತ, “ಸಾವಿತ್ರಿಬಾಯಿ ಫುಲೆಯವರು ಜ್ಯೋತಿ ಬಾಫುಲೆರವರ ಸತ್ಯ ಶೋಧಕ ಸಮಾಜವನ್ನು ಮುನ್ನೆಡಿಸಿದ ಪರಿ ಈ ದೇಶದ ಶೋಷಿತ ಸಮುದಾಯದ ದಾರಿದೀಪ. ಅವರ ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿನ ಅದ್ಭುತ ಕೊಡುಗೆ ಜೊತೆಗೆ ಮೆಕಾಲೆ ಶಿಕ್ಷಣ ವ್ಯವಸ್ಥೆಯು ಈ ದೇಶದ ಶೈಕ್ಷಣಿಕ ಸಬಲೀಕರಣಕ್ಕೆ ತಳ ಸಮುದಾಯಗಳಿಗೆ ಮೊದಲ ಶಾಲೆಗಳನ್ನು ಸ್ಥಾಪಿಸುವ ಮೂಲಕ, ಅವರು ವಸಾಹತುಶಾಹಿ ಶಿಕ್ಷಣವನ್ನು ಸಾಮಾಜಿಕ ವಿಮೋಚನೆಯ ಸಾಧನವಾಗಿ ಪರಿವರ್ತಿಸಿದರು” ಎಂದರು.

ಇದನ್ನೂ ಓದಿ: ಮೈಸೂರು | ಮೆಲ್ಲಹಳ್ಳಿ ಸರ್ಕಾರಿ ಶಾಲೆಯಲ್ಲಿ ‘ಮಕ್ಕಳ ಸಂತೆ’

ಸಂಜೀವಯ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ನಾಗಮಲ್ಲೇಶ್ ಮಾತನಾಡಿ, “ಈ ದೇಶದ ಮಹಿಳಾ ವಿಮೋಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಈ ದೇಶದಲ್ಲಿ ಜಾತಿವ್ಯವಸ್ಥೆಯ ಕಾರಣಕ್ಕಾಗಿ ಅಕ್ಷರದವ್ವನ ಇತಿಹಾಸವನ್ನು ಮರೆಮಾಚಲಾಗಿತ್ತು. ಇಂತಹ ಅನೇಕ ಮಹನೀಯರ ಕೊಡುಗೆಗಳನ್ನು ಸಂಶೋಧಕರು ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ವಿವಿಧ ಸಂಶೋಧನೆಗಳಾಗಬೇಕು” ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಕ್ಷೇತ್ರ ಸಂಶೋಧಕ ಡಾ. ದಿನೇಶ್, ಶೇಷಣ್ಣಸ್ವಾಮಿ ಕೆ.ಎಂ, ಸಂಸ್ಥೆಯ ಶಿಕ್ಷಕ ಹರೀಶ್ ಕುಮಾರ್ ಮತ್ತು ಡಾ.ಚಂದ್ರಶೇಖರ್ ಐಜೂರ್ ಹಾಗೂ ಹಲವರು ಉಪಸ್ಥಿತರಿದ್ದರು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಸಹಿಷ್ಣುತೆಯ ಗುಣ ವ್ಯಕ್ತಿತ್ವದ ಬೆಳವಣಿಗೆಯಾಗಿದೆ: ಪ್ರೊ ಎಂ ಬಿ ಸುರೇಶ್

ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ರಾಜ್ಯ ಸರ್ಕಾರ,...

ಹುಣಸೂರು | ಮಕ್ಕಳು ವೈಜ್ಞಾನಿಕ ಮನೋಭಾವನೆ-ವೈಚಾರಿಕತೆ ಬೆಳೆಸಿಕೊಳ್ಳಬೇಕು: ಮಹದೇವ

ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು ಕಟ್ಟೆಮಳಲವಾಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ 'ರಾಷ್ಟ್ರೀಯ...

ಮೈಸೂರು | ತಂಬಾಕು ಬೆಳೆಗಾರರ ಹಿತಕಾಯಲು ಬದ್ಧ; ಉತ್ತಮ ಬೆಲೆಗೆ ಖರೀದಿಸಿ: ಎಚ್ಡಿಕೆ

ಮೈಸೂರಿನ ಭಾರತೀಯ ಬಾಷಾ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರದಂದು ಬೃಹತ್ ಕೈಗಾರಿಕೆ ಸಚಿವರಾದ...

ಮೈಸೂರಿನಲ್ಲಿ ಮಾರ್ಚ್.1ರಂದು ಪ್ರತಿಭಾ ನಂದಕುಮಾರ್ ಕೃತಿಗಳ ಬಿಡುಗಡೆ-ಸಂವಾದ ಕಾರ್ಯಕ್ರಮ

ಸಮತಾ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಸಂಯುಕ್ತಾಶ್ರಯದಲ್ಲಿ ಇದೇ...