ಕನ್ನಡ ಸಾಹಿತ್ಯದ ಪ್ರತಿಭಾವಂತ ಕಾದಂಬರಿಕಾರ ಶ್ರೀಕೃಷ್ಣ ಆಲನಹಳ್ಳಿಯವರ ‘ಸಮಗ್ರ ಕಥೆಗಳು’ ಪುಸ್ತಕ ಪ್ರಕಟ

Date:

ಕನ್ನಡ ಸಾಹಿತ್ಯದಲ್ಲಿ ಗ್ರಾಮೀಣ ಬದುಕಿನ ಸೊಗಡನ್ನು, ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಮತ್ತು ಪ್ರಕೃತಿಯ ಅಂತರಾಳವನ್ನು ಅಚ್ಚುಕಟ್ಟಾಗಿ ಹಿಡಿದಿಟ್ಟ ಸೂಕ್ಷ್ಮ ಸಂವೇದನೆಯ ಲೇಖಕರಲ್ಲಿ ಪ್ರಮುಖರು ಶ್ರೀಕೃಷ್ಣ ಆಲನಹಳ್ಳಿ. ಇವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ಸಾಹಿತಿ ಎಂದು ದಾಖಲೆ ನಿರ್ಮಿಸಿಸದಸು, ಕೇವಲ ನಾಲ್ಕು ದಶಕಗಳ ಬದುಕಿನಲ್ಲಿ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟವಾದ ಕೊಡುಗೆಯನ್ನು ನೀಡಿದ್ದಾರೆ.

ಕಾಡು(1972), ಪರಸಂಗದ ಗೆಂಡೆತಿಮ್ಮ(1978) ಮತ್ತು ಭುಜಂಗಯ್ಯನ ದಶಾವತಾರಗಳು(1982) ಎಂಬ ಅವರ ಕಾದಂಬರಿಗಳು ಕನ್ನಡ ಸಾಹಿತ್ಯದಲ್ಲಿ ಮೈಲುಗಲ್ಲುಗಳಾಗಿ ಗುರುತಿಸಲ್ಪಟ್ಟಿವೆ. ಅವರ  ಕೃತಿಗಳಲ್ಲಿ ಬಹುತೇಕ ಕೃತಿಗಳು ಚಲನಚಿತ್ರಗಳಾಗಿ ರೂಪಾಂತರಗೊಂಡು ದೊಡ್ಡ ಪ್ರಭಾವ ಬೀರಿವೆ.

ಕಥೆಗಾರರಾಗಿಯೂ, ಕವಿಯಾಗಿಯೂ ಗುರುತಿಸಿಕೊಂಡ ಆಲನಹಳ್ಳಿ ಅವರು ಮಣ್ಣಿನ ಹಾಡು, ಕಾಡು ಗಿಡದ ಹಾಡು ಪಾಡು, ಡೋಗ್ರಾ  ಪಹಾರಿ  ಪ್ರೇಮಗೀತೆಗಳು ಸೇರಿದಂತೆ ಹಲವಾರು ಕವನ ಸಂಕಲನಗಳನ್ನು  ರಚಿಸಿದ್ದಾರೆ. ಅವರ ‘ಮಣ್ಣಿನ ಹಾಡು’ ಕವನ  ಸಂಕಲನಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರತಿದ್ದು, ಅವರ ನಿಧನಾನಂತರ 1989ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ. ಅವರ ಕೃತಿಗಳು ಇಂಗ್ಲಿಷ್, ಜರ್ಮನ್, ರಷ್ಯನ್ ಸೇರಿದಂತೆ ಅನೇಕ ಭಾರತೀಯ ಭಾಷೆಗಳಿಗೂ ಅನುವಾದಗೊಂಡಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದೀಗ ಅವರ ಎಲ್ಲ ಕಥೆಗಳನ್ನು ಒಟ್ಟುಗೂಡಿಸಿದ “ಸಮಗ್ರ ಕಥೆಗಳು” ಎಂಬ ಪುಸ್ತಕ ಪ್ರಕಟವಾಗಿದೆ. ಈ ಕೃತಿಯಲ್ಲಿ ತಪ್ತ, ಫೀನಿಕ್ಸ್ ಮತ್ತು ಅಪೂರ್ಣ ಕಥೆಗಳು ಎಂಬ ಮೂರು ಕಥಾ ಗುಚ್ಛಗಳು ಸೇರಿ ಒಟ್ಟು 232 ಪುಟಗಳ ಸಂಕಲನ ರೂಪುಗೊಂಡಿದೆ.

ಈ ಬಗ್ಗೆ ದೇವನೂರು ಮಹಾದೇವ ಅವರು ಮಾತನಾಡಿ, ಆಲನಹಳ್ಳಿ ಕೃಷ್ಣ ಅವರೊಂದಿಗಿನ ತಮ್ಮ ಒಡನಾಟವನ್ನು ಮೆಲುಕು ಹಾಕುತ್ತ, ನವ್ಯ ಸಾಹಿತಿಗಳೊಂದಿಗೆ ಆಪ್ತ ಒಡನಾಟ ಹೊಂದಿದ್ದ ಕೃಷ್ಣ ತಮಗೂ ಸಾಹಿತ್ಯ ರಚನೆಗೆ ಹುರಿದುಂಬಿಸಿಕೊಂಡಿದ್ದನ್ನು ಸ್ಮರಿಸಿದರು. “ವಿದ್ಯಾರ್ಥಿ ಜೀವನದಲ್ಲೇ ಶ್ರೀಕೃಷ್ಣ ಆಲನಹಳ್ಳಿ ‘ಸಮೀಕ್ಷಕ’ ಎಂಬ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿದ್ದರು. ಆ ಕಾಲದಲ್ಲಿ ಯುವ ಸಾಹಿತಿಗಳ ಸಾಹಿತ್ಯಿಕ ಚಿಂತನೆಗಳಿಗೆ ವೇದಿಕೆಯಾಗಿದ್ದ ಆ ಪತ್ರಿಕೆ ಸಾಹಿತ್ಯ ವಲಯದಲ್ಲಿ ವಿಶಿಷ್ಟ ಗಮನ ಸೆಳೆದಿತ್ತು” ಎಂದು ಹೇಳಿದರು.

ಈ ಕೃತಿಯನ್ನು ಅಮೂಲ್ಯ ಪುಸ್ತಕ ಪ್ರಕಾಶನದವರು ಪ್ರಕಟಿಸಿದ್ದು, ಸುಧಾಕರ ದರ್ಬೆ ಮುಖಪುಟದ ವಿನ್ಯಾಸವನ್ನು ಮಾಡಿದ್ದಾರೆ,  ಒಳಪುಟಗಳ  ವಿನ್ಯಾಸವನ್ನು JRM ಡಿಸೈನ್ಸ್ ಅವರು ಮಾಡಿದ್ದಾರೆ. 

ಇದನ್ನೂ ಓದಿದ್ದೀರಾ? ಅವನತಿಯತ್ತ ಬದನವಾಳು ಖಾದಿ ಕೇಂದ್ರ: ಅಳಿಸಲಿದೆಯೇ ಗಾಂಧೀ ಭೇಟಿಯ ನೆನಪು?

ಈ ಸಂದರ್ಭದಲ್ಲಿ ಆಲನಹಳ್ಳಿ ಕೃಷ್ಣ ಅವರ ಪತ್ನಿ ವಿನುತಾ ಆಲನಹಳ್ಳಿ, ಪುತ್ರ ಪ್ರದ್ಯುಮ್ನ ಆಲನಹಳ್ಳಿ, ಪುತ್ರಿ ಕೃತಿಕಾ ಆಲನಹಳ್ಳಿ, ಅಳಿಯ ಕಣ್ಣನ್, ಪ್ರಕಾಶಕ ಕೃಷ್ಣ ಚೆಂಗಡಿ, ಕತೆಗಾರ ಶಿವಾಗ್ ಹಾಗೂ ಇತರರು ಇದ್ದರು.

ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಗುರುತು ಮೂಡಿಸಿದ ಶ್ರೀಕೃಷ್ಣ ಆಲನಹಳ್ಳಿ ಅವರ ಕಥೆಗಳ ಸಮಗ್ರ ಸಂಕಲನ ಪ್ರಕಟವಾಗುತ್ತಿರುವುದು ಸಾಹಿತ್ಯಾಸಕ್ತರಿಗೆ ಸಂಭ್ರಮದ ಕ್ಷಣವಾಗಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಸಹಿಷ್ಣುತೆಯ ಗುಣ ವ್ಯಕ್ತಿತ್ವದ ಬೆಳವಣಿಗೆಯಾಗಿದೆ: ಪ್ರೊ ಎಂ ಬಿ ಸುರೇಶ್

ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ರಾಜ್ಯ ಸರ್ಕಾರ,...

ಹುಣಸೂರು | ಮಕ್ಕಳು ವೈಜ್ಞಾನಿಕ ಮನೋಭಾವನೆ-ವೈಚಾರಿಕತೆ ಬೆಳೆಸಿಕೊಳ್ಳಬೇಕು: ಮಹದೇವ

ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು ಕಟ್ಟೆಮಳಲವಾಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ 'ರಾಷ್ಟ್ರೀಯ...

ಮೈಸೂರು | ತಂಬಾಕು ಬೆಳೆಗಾರರ ಹಿತಕಾಯಲು ಬದ್ಧ; ಉತ್ತಮ ಬೆಲೆಗೆ ಖರೀದಿಸಿ: ಎಚ್ಡಿಕೆ

ಮೈಸೂರಿನ ಭಾರತೀಯ ಬಾಷಾ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರದಂದು ಬೃಹತ್ ಕೈಗಾರಿಕೆ ಸಚಿವರಾದ...

ಮೈಸೂರಿನಲ್ಲಿ ಮಾರ್ಚ್.1ರಂದು ಪ್ರತಿಭಾ ನಂದಕುಮಾರ್ ಕೃತಿಗಳ ಬಿಡುಗಡೆ-ಸಂವಾದ ಕಾರ್ಯಕ್ರಮ

ಸಮತಾ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಸಂಯುಕ್ತಾಶ್ರಯದಲ್ಲಿ ಇದೇ...