ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಸ್ನಾತಕೋತ್ತರ ಪದವಿ ಪುರುಷರ ವಿದ್ಯಾರ್ಥಿ ನಿಲಯ ಬ್ಲಾಕ್ 1 (Old PG hostel) ರಲ್ಲಿರುವ ವಿದ್ಯಾರ್ಥಿ ವಿಷ್ಣುಗೆ ವಿಷಪೂರಿತ ಹಾವು ಕಚ್ಚಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ವಿಷ್ಣು ಎಂಬ ವಿದ್ಯಾರ್ಥಿ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ ದ್ವಿತೀಯ ವರ್ಷದ ಎಂಕಾಮ್ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದು, ಶುಕ್ರವಾರ ತಡ ರಾತ್ರಿ 1 ಗಂಟೆ ಸರಿ ಸುಮಾರಿಗೆ ಹಾಸ್ಟೆಲ್ ನೆಲ ಮಹಡಿಯ ರೂಮಿನಲ್ಲಿ ಮಲಗಿದ್ದಾಗ ಹಾವು ಕುತ್ತಿಗೆ ಭಾಗಕ್ಕೆ ಕಚ್ಚಿದೆ.
ನಿದ್ರಾವಸ್ಥೆಯಲ್ಲಿದ್ದ ವಿದ್ಯಾರ್ಥಿ ಗಮನಕ್ಕೆ ಬಾರದೆ, ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಉಸಿರಾಟದಲ್ಲಿ ಸಮಸ್ಯೆ ಕಂಡು ಬಂದಾಗ ಸ್ನೇಹಿತರು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ಕಾನೂನು ವಿದ್ಯಾರ್ಥಿ ಚಿರಾಗ್ ಎಸ್ ಕೆ ಮೂರ್ತಿ ಈದಿನ.ಕಾಮ್ ಗೆ ಮಾಹಿತಿ ನೀಡಿದ್ದಾರೆ.
ಸದ್ಯ ವಿದ್ಯಾರ್ಥಿ ಪರಿಸ್ಥಿತಿ ಗಂಭೀರವಾಗಿದ್ದು, ಘಟನೆಗೆ ಮೂಲ ಕಾರಣ ವಿಶ್ವವಿದ್ಯಾನಿಲಯದ ಆಡಳಿತ ಲೋಪ ಹಾಗೂ ವಿದ್ಯಾರ್ಥಿ ನಿಲಯಗಳ ಕನಿಷ್ಠ ನಿರ್ವಹಣೆ , ಶುಚಿತ್ವದ ಕೊರೆತೆ. ವಿದ್ಯಾರ್ಥಿನಿಲಯಗಳ ಸುತ್ತಲ್ಲೂ ಬೆಳೆದು ನಿಂತ ಗಿಡಗಂಟಿಗಳು, ಮಿತಿಮೀರಿ ಬೆಳೆದಿರುವ ಪೊದೆಗಳು ವಿಷಕಾರಿ ಹಾವುಗಳ ಸೇರುವಿಕೆಗೆ ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ಮಡಿಕೇರಿ | ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಡಾ ಮಂತರ್ ಗೌಡ
ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಮಲಗಿದ್ದ ಯುವಕನಿಗೆ ಹಾವು ಕಚ್ಚಿದೆ, ಆಸ್ಪತ್ರೆಗೆ ರಿಜಿಸ್ಟರ್ ಭೇಟಿ ನೀಡಿದ್ದರು. ಇದುವರೆಗೆ ವಿಸಿ ಅವರು ಭೇಟಿ ನೀಡಿಲ್ಲಾ. ವಿದ್ಯಾರ್ಥಿಗಳ ನಿಯೋಗ ಭೇಟಿ ಮಾಡಿ ವಿನಂತಿಸಿದಾಗ ಆಸ್ಪತ್ರೆ ಬಿಲ್ ಕೊಟೇಷನ್ ಸಲ್ಲಿಸಿ, ಹಣ ಪಾವತಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.





