ಉಡುಪಿ | ದೈವ – ದೇವರ ದುರ್ಬಳಕೆ ಮೂಲ್ಕಿಯ ಬಪ್ಪನಾಡು ರಥ ಬೀಳಲು ಕಾರಣ : ಕೋಟ ನಾಗೇಂದ್ರ ಪುತ್ರನ್

Date:

ಮೂಲ್ಕಿಯ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ಬ್ರಹ್ಮರಥೋತ್ಸವ ವೇಳೆ ದೇವರ ತೇರಿನ ಮೇಲ್ಭಾಗ ಮುರಿದು ಬಿದ್ದಿದ್ದು, ದೈವ ದೇವರನ್ನು ದುರ್ಬಳಕೆ ಮಾಡಿಕೊಂಡಿರುದರಿಂದ ಇಂತಹ ಘಟನೆ ನಡೆಯಲು ಕಾರಣ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಧರ್ಮ – ಧರ್ಮ ಜೋಡಣೆ ಮಾಡಬೇಕು ಎಂದು ದುರ್ಗಾ ಪರಮೇಶ್ವರಿ ದೇವಿ ಬಪ್ಪ ಬ್ಯಾರಿಗೆ ಆಜ್ಞೆ ಮಾಡಿದೆ, ಆ ಪ್ರಕಾರ ಪುರಾತನ ಕಾಲದಿಂದ ಹಾಗೆ ನಡೆದು ಕೊಂಡು ಬಂದಿದೆ, ಆದರೆ ಈ ಬಿಜೆಪಿ ಯವರ ನಕಲಿ ಹಿಂದುತ್ವದಿಂದ ದೇವರೇ ಮುನಿಸಿ ಕೊಂಡು ಬಪ್ಪನಾಡು ರಥ ಧರೆಗೆ ಉರುಳಿದೆ.

ನಮ್ಮ ಹಿಂದಿನ ಹಿರಿಯರು ಹಾಕಿ ಕೊಟ್ಟಿರುವ ಚೌಕಟ್ಟುವಿನಲ್ಲಿ ದೇವತಾ ಕಾರ್ಯಕ್ರಮ ಬಹಳಷ್ಟು ಅದ್ದೂರಿಯಾಗಿ ಮತ್ತು ಶಿಷ್ಟಾಚಾರವಾಗಿ ನಡೆಯುತ್ತಿತ್ತು, ಕರಾವಳಿಯಲ್ಲಿ ಧಾರ್ಮಿಕ ಭಾವನೆಗೆ ಬೆಂಕಿ ಇಟ್ಟ ಬಿಜೆಪಿ ಕೋಮುವಾದಿಗಳಿಂದ ದೇವರೇ ಮುನಿಸಿ ಕೊಂಡು ಇಂತಹ ಘಟನೆ ನಡೆದಿದೆ‌ ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸರ್ವ ಧರ್ಮ ಒಂದೇ ಎಂದು ತಿಳಿದು ಶಾಂಭವಿ ನದಿಯ ದಡದಲ್ಲಿ ಹಿಂದೂ ದೇವಿಯ ಆಜ್ಞೆ ಅಂತೆ ಬಪ್ಪನಾಡು ಕ್ಷೇತ್ರ ಉದಯ ಆಗಿದೆ, ಪದೇ ಪದೇ ಬಿಜೆಪಿ ಅವರ ರಾಜಕೀಯ ದುರುದ್ದೇಶದಿಂದ ಹಿಂದೂ ದೇವರ ದುರುಪಯೋಗ ಆಗಿದೆ, ಇದೆ ರೀತಿ ಮುಂದುವರೆದಲ್ಲಿ ಕರಾವಳಿಯ ದೈವ ದೇವರುಗಳು ಮುನಿಸಿ ಕೊಳ್ಳಲಿದೆ, ಇವತ್ತು ರಥ ಧರೆಗೆ ಉರುಳಿದೆ, ಮುಂದೆ ಹಿಂದೂ ದೇವಸ್ಥಾನವೇ ಮಗುಚಿ ಸಾರ್ವಜನಿಕರ ತಲೆ ಮೇಲೆ ಬೀಳಲಿದೆ ಎಂದು ಹೇಳಿದ್ದಾರೆ.

ಕರಾವಳಿ ಜನತೆಯಲ್ಲಿ ವಿನಮ್ರ ವಿನಂತಿ. ರಾಜಕೀಯದಲ್ಲಿ ಪಕ್ಷ ಬೇರೆ ಬೇರೆ ಇರಬಹುದು, ದೇವರ ಹೆಸರಿನಲ್ಲಿ ರಾಜಕೀಯ ಮಾಡುವವರನ್ನು ನಂಬಬೇಡಿ, ದಕ್ಷಿಣ ಕನ್ನಡ ಕರಾವಳಿಗೆ ಅಭಿವೃದ್ಧಿ ಮುಖ್ಯ, ರಾಮ, ಆಂಜನೇಯ, ಮತ್ತು ಎಲ್ಲ ದೇವರುಗಳನ್ನು ಅತ್ಯಂತ ಶ್ರದ್ಧೆಯಿಂದ ಪೂಜೆ ಪುರಸ್ಕಾರ ಮಾಡಿಕೊಂಡು ಬಂದಿರುವ ನಮ್ಮ ಹಿಂದೂ ಧರ್ಮ, ನಮ್ಮ ಉಡುಪಿ ಮಂಗಳೂರು ಅವಳಿ ಜಿಲ್ಲೆ. ಇತಿಹಾಸವೆ ಸುಳ್ಳು ಬಿಜೆಪಿಯವರ ರಾಜಕೀಯ ದುರುದ್ದೇಶವೆ ಸತ್ಯ ಎಂದು ತಿಳಿದು ಕೊಂಡರೆ ಮುಂದಿನ ದಿನ ಇನ್ನು ಹೆಚ್ಚಿನ ಇಂತಹ ಘಟನೆಗೆ ದಾರಿ ಮಾಡಿಕೊಟ್ಟಂತೆ ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...