ಬೆಂಗಳೂರು | ಸಿರಿಗೆರೆ ತರಳಬಾಳು ಕೇಂದ್ರದ ವಿರುದ್ಧ ನೈಜ ಹೋರಾಟಗಾರರ ವೇದಿಕೆಯಿಂದ ಲೋಕಾಯುಕ್ತಕ್ಕೆ ದೂರು

Date:

ಬೆಂಗಳೂರಿನ ಆರ್ ಟಿ ನಗರ ವ್ಯಾಪ್ತಿಯಲ್ಲಿರುವ ಸಿರಿಗೆರೆಯ ತರಳಬಾಳು ಕೇಂದ್ರದ ಕಟ್ಟಡದ ಮೇಲೆ ಇನ್ನಷ್ಟು ಅಂತಸ್ತುಗಳನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ನೈಜ ಹೋರಾಟಗಾರರ ವೇದಿಕೆಯು, ಕ್ರಮಕ್ಕೆ ಆಗ್ರಹಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ನೈಜ ಹೋರಾಟಗಾರರ ವೇದಿಕೆಯ ಮುಖಂಡ ಹೆಚ್.ಎಂ. ವೆಂಕಟೇಶ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆರ್ ಟಿ ನಗರ ವ್ಯಾಪ್ತಿಯಲ್ಲಿರುವ ಸಿರಿಗೆರೆಯ ತರಳಬಾಳು ಕೇಂದ್ರದ ಕಟ್ಟಡವು ಸುಮಾರು 30 ವರ್ಷಗಳ ಹಳೆಯದಾಗಿದ್ದು. ಸದರಿ ಕಟ್ಟಡದ ಮೇಲೆ ಮತ್ತಷ್ಟು ಅಂತಸ್ತುಗಳನ್ನು ಯಾವುದೇ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಬಿಬಿಎಂಪಿಗೆ ದೂರನ್ನು ನೀಡಿದ್ದರು. ಈ ದೂರಿನನ್ವಯ ತಾವು ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಲೋಕಾಯುಕ್ತಕ್ಕೆ ದೂರನ್ನು ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ತರಳಬಾಳು ಕೇಂದ್ರವು ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ ಮೀಸಲಿದ್ದರೂ ಸಹ ವಾಣಿಜ್ಯ ಬಳಕೆಗೆ ಬಳಸುತ್ತಿರುವುದರಿಂದ ಆಗುತ್ತಿರುವ ತೊಂದರೆಯನ್ನು ಲೋಕಾಯುಕ್ತರ ಗಮನಕ್ಕೂ ಸ್ಥಳೀಯರು ಪತ್ರ ಬರೆದು ಮನವಿ ಸಲ್ಲಿಸಿರುತ್ತಾರೆ. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಇದು ಬಹುಸಂಖ್ಯಾತ ಸಮುದಾಯದ ಕಟ್ಟಡವಾಗಿರುವುದರಿಂದ ಇವರಿಗೆ ಬೇರೆ ಸಂವಿಧಾನ ಮತ್ತು ಕಾನೂನು ಇದೆ ಎಂದು ಭಾವಿಸಿ ಈ ಕಟ್ಟಡಕ್ಕೂ ನಮಗೂ ಯಾವುದೇ ಸಂಬಂಧವಿಲ್ಲವೆಂದು ಸುಮ್ಮನಾಗಿರುವುದು ನಮಗೆ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ನೈಜ ಹೋರಾಟಗಾರರ ವೇದಿಕೆ ಆರೋಪಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಸುಮಾರು 200 ಅಕ್ರಮ ಕಟ್ಟಡ ತೆರವು ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಹಾಗೂ ಕಿರಿಯ ಹಾಗೂ ಸಹಾಯಕ ಇಂಜಿನಿಯರ್‌ಗಳು ಸೇರಿದಂತೆ ಹೊರಗುತ್ತಿಗೆ ಆಧಾರದಲ್ಲಿ 70 ಸಿಬ್ಬಂದಿಯನ್ನು ನೇಮಿಸಿಕೊಂಡು ಅಕ್ರಮ ಕಟ್ಟಡಗಳ ಸಮೀಕ್ಷೆ ನಡೆಸಲಾಗುತ್ತಿದೆ ಎಂದಿದ್ದಾರೆ. ವಿವಿಧ ವಲಯಗಳಲ್ಲಿ ಇಂತಿಷ್ಟು ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ಪೂರ್ವ ವಲಯದಲ್ಲಿ ಇರುವ ತರಳಬಾಳು ಕೇಂದ್ರದ ಮೇಲೆ ನಿರ್ಮಾಣವಾಗುತ್ತಿರುವ ಅಕ್ರಮ ಕಟ್ಟಡ ನಿಮ್ಮ ಅಧಿಕಾರಿಗಳಿಗೆ ಮತ್ತು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಕಾಣಿಸದಿರುವುದು ಅಥವಾ ಕಂಡು ಕಾಣದಂತೆ ವರ್ತಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಬಿಬಿಎಂಪಿ ಗಮನಕ್ಕೆ ಬಂದಿಲ್ಲವೇ?” ಎಂದು ನೈಜ ಹೋರಾಟಗಾರರ ವೇದಿಕೆಯ ಮುಖಂಡ ಹೆಚ್.ಎಂ. ವೆಂಕಟೇಶ್ ಪ್ರಶ್ನಿಸಿದ್ದಾರೆ.

ಧರ್ಮರಾಯಸ್ವಾಮಿ ದೇವಸ್ಥಾನ ಉಪ ವಿಭಾಗದ ಸುಂಕೇನಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿರುವ ಶೃಂಗೇರಿ ಮಠದ ಜ್ಞಾನೋದಯ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಕಟ್ಟಡ ಅನದಿಕೃತವೆಂದು ಇದನ್ನು ತೆರವುಗೊಳಿಸಲು ತಮ್ಮ ಅಧಿಕಾರಿಗಳು ಮುಂದಾಗಿದ್ದು ಅದನ್ನು ತಡೆಯಾಜ್ಞೆ ಮೂಲಕ ತೆರವು ಕಾರ್ಯಾಚರಣೆಯನ್ನು ತಡೆಹಿಡಿಯಲಾಗಿದೆ. ಶೃಂಗೇರಿ ಶಾರದಾ ಮಠ ಶೇಕಡ ಮೂರರಷ್ಟು (%3 ) ಸಮುದಾಯದ ಜನರನ್ನು ಹೊಂದಿದ್ದು, ಇವರ ಮೇಲೆ ಕಾನೂನು ಕ್ರಮಗಳ ಕೈಗೊಳ್ಳಲು ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಬಹು ಸಂಖ್ಯೆಯ ಸಮುದಾಯ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಕಟ್ಟಡವನ್ನು ತೆರವುಗೊಳಿಸುವುದಿರಲಿ ಒಂದು ನೋಟಿಸ್ ಅನ್ನು ಕೊಡುವ ಚೈತನ್ಯವನ್ನು ಬಿಬಿಎಂಪಿ ಅಧಿಕಾರಿಗಳು ನಿಷ್ಕ್ರಿಯಗೊಂಡಿರುವುದು ದುರದೃಷ್ಟಕರ ಸಂಗತಿ ಎಂದು ಕಿಡಿಕಾರಿದ್ದಾರೆ.

ಭಾರತದ ಸಂವಿಧಾನ ಮತ್ತು ಕರ್ನಾಟಕ ಮುನ್ಸಿಪಲ್ ಆಕ್ಟ್ ಕಾನೂನುಗಳು ಎಲ್ಲರಿಗೂ ಅನ್ವಯಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾಗಿತ್ತು. ಆದರೆ ಬಹು ಸಂಖ್ಯೆ ನಾಗರಿಕರಿರುವ ಸಮುದಾಯಗಳಿಗೆ ಒಂದು ಸಂವಿಧಾನ ಒಂದು ಕಾನೂನು ಕಡಿಮೆ ಜನಸಂಖ್ಯೆ ಇರುವ ಸಮುದಾಯಕ್ಕೆ ಮತ್ತೊಂದು ಸಂವಿಧಾನ ಮತ್ತೊಂದು ಕಾನೂನು ಇದೆ ಎಂಬುದು ಈಗ ನಮಗೆ ಮನವರಿಕೆಯಾಗುತ್ತಿದೆ. ಇದಕ್ಕೆ ತಾವು ತಕ್ಷಣ ಉತ್ತರವನ್ನು ನೀಡಿ ಈ ದೇಶದ ಈ ನೆಲದ ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ತಾವು ಸಾಬೀತು ಪಡಿಸುವ ಗುರುತರ ಜವಾಬ್ದಾರಿ ಈಗ ನಿಮ್ಮ ಮೇಲೆ ಇದೆ ಎಂದು ಹೆಚ್.ಎಂ. ವೆಂಕಟೇಶ್ ತಿಳಿಸಿದ್ದಾರೆ.

taralabalu

ಆದುದರಿಂದ ಈಗಾಗಲೇ ಈ ತರಳ ಬಾಳು ಕೇಂದ್ರವು ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ಮೀಸಲಿಟ್ಟ ಸಿ.ಎ ನಿವೇಶನದಲ್ಲಿ ವಾಣಿಜ್ಯ ಉದ್ದೇಶವಾಗಿ ಬಳಸಿಕೊಂಡು ಲಾಭ ಗಳಿಸುತ್ತಿದ್ದು, ಈ ಬಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಲಿ ಅಥವಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಾಗಲಿ ತರಳ ಬಾಳು ಕೇಂದ್ರಕ್ಕೆ ನೋಟಿಸ್ ಗಳನ್ನು ನೀಡಿ ಕಾನೂನು ಕ್ರಮವನ್ನು ಜರುಗಿಸದೆ ಇರುವುದು ದುರದೃಷ್ಟಕರ ಸಂಗತಿ. ತಕ್ಷಣ ಬಿಬಿಎಂಪಿ ಆಯುಕ್ತರು ಹಳೆ ಕಟ್ಟಡದ ಮೇಲೆ ನಿರ್ಮಾಣ ಮಾಡುತ್ತಿರುವ ಅಂತಸ್ತುಗಳನ್ನು ಪರಿಶೀಲಿಬೇಕು. ನಕ್ಷೆ ಮಂಜೂರಾತಿ ಇಲ್ಲದೆ ಕಾನೂನು ಉಲ್ಲಂಘಿಸಿ ಕಟ್ಟುತ್ತಿದ್ದಲ್ಲಿ ತಕ್ಷಣ ಕಾಮಗಾರಿಯನ್ನು ತಡೆಹಿಡಿದು ನಿರ್ಮಾಣವಾಗಿರುವ ಕಟ್ಟಡವನ್ನು ತಕ್ಷಣ ತೆರವುಗೊಳಿಸಬೇಕೆಂದು ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.

ಈ ಹಿಂದೆ ಕಾರ್ಯಪಾಲಕ ಅಭಿಯಂತರು ಹೆಬ್ಬಾಳ ವಿಭಾಗದವರು ಮೆಟಲ್ ಪಿಲ್ಲರ್ ಗಳನ್ನು ಅಳವಡಿಸಿ ತಾತ್ಕಾಲಿಕ ಸೀಟ್ ಗಳನ್ನು ಹಾಕಿ ಮೇಲ್ಭಾಗದಲ್ಲಿ ಸೌರ ಶಕ್ತಿ ಪ್ಯಾನಲ್ ಗಳನ್ನು ಅಳವಡಿಸಲಾಗುತ್ತಿದೆ ಎಂಬ ಕೃತಕ ವರದಿಯನ್ನು ಲೋಕಾಯುಕ್ತಕ್ಕೆ ನೀಡಿರುವುದು ನ್ಯಾಯ ಸಮ್ಮತವಲ್ಲ ಸಮಂಜಸವಲ್ಲ. ಈ ಕಟ್ಟಡದ ಮೇಲೆ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದರೆ ಕಾರ್ಯ ಪಾಲಕ ಅಭಿಯಂತರು ಹೇಳುತ್ತಿರುವುದು ಸುಳ್ಳು ಎಂದು ಕಂಡುಬರುತ್ತದೆ. ಆದುದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ನೆಲದ ಕಾನೂನು ತರಳಬಾಳು ಕೇಂದ್ರಕ್ಕೂ ಅನ್ವಯವಾಗುತ್ತದೆ ಎಂಬುದನ್ನು ಆಯುಕ್ತರಾಗಿ ತಾವು ಸಾಬೀತುಪಡಿಸಬೇಕಾದ ಗುರುತರ ಜವಾಬ್ದಾರಿ ಈಗ ನಿಮ್ಮ ಮೇಲಿದೆ ಎಂದು ತಿಳಿಸಿದ್ದಾರೆ.

WhatsApp Image 2024 11 13 at 9.13.24 AM

ಇದು ಹಳೆಯ ಕಟ್ಟಡವಾಗಿರುವುದರಿಂದ ಮುಂದೆ ಆಗುವ ಅನಾಹುತಗಳಿಗೂ ತರಳ ಬಾಳು ಕೇಂದ್ರದ ಆಡಳಿತ ಮಂಡಳಿ ಮತ್ತು ಕಾರ್ಯನಿರ್ವಾಹಕ ಅಭಿಯಂತರರು ಹೆಬ್ಬಾಳ್ ವಿಭಾಗ, ಜಂಟಿ ಆಯುಕ್ತರು ಪೂರ್ವ ವಲಯ ಇವರು ಕಾರಣಕರ್ತರಾಗುತ್ತಾರೆ. ಹಾಗೂ ತಾವು ಕಾನೂನು ಕ್ರಮಗಳನ್ನು ಜರಿಸದೆ ಇದ್ದಲ್ಲಿ ಮುಂದಿನ ಎಲ್ಲಾ ಆಗುಹೋಗುಗಳಿಗೆ ಆಯುಕ್ತರದ ತಾವು ಜವಾಬ್ದಾರಿ ವಹಿಸಬೇಕಾಗುತ್ತದೆ. ಕಟ್ಟಡದ ಮೇಲೆ ನಡೆಯುತ್ತಿರುವ ಮೇಲಂತಸ್ತುಗಳ ನಿರ್ಮಾಣ ಕಾಮಗಾರಿಗೆ ನಕ್ಷೆ ಅನುಮೋದನೆ ಪಡೆದಿದ್ದಾರೆಯೇ? ಅಥವಾ ಕಾನೂನನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ವಾಗುತ್ತಿದೆಯೇ? ಎಂಬುದನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ನೈಜ ಹೋರಾಟಗಾರರ ವೇದಿಕೆ ಮನವಿ ಮಾಡುತ್ತಿರುವುದಾಗಿ ಹೆಚ್.ಎಂ. ವೆಂಕಟೇಶ್ ತಿಳಿಸಿದ್ದಾರೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...